ಸೂರ್ಯಗ್ರಹಣ, "ವೆಬ್ ಸೈಟ್" ಅನ್ನೂ ಬಂದ್ ಮಾಡಿರುವ ಬಿರ್ಲಾಮಂದಿರ
ನವದೆಹಲಿ, ಡಿ ೨೬,ಸೂರ್ಯಗ್ರಹಣ ಹಿನ್ನಲೆಯಲ್ಲಿ
ದೆಹಲಿಯ ಬಿರ್ಲಾ ಮಂದಿರ ದೇಗುಲದೊಂದಿಗೆ ತನ್ನ ವೆಬ್‌ಸೈಟ್ ಅನ್ನು ಮುಚ್ಚಿರುವುದಾಗಿ ಪ್ರಕಟಿಸಿದೆ. ಸೂರ್ಯ ಗ್ರಹಣದ ಸಮಯದ ವೇಳೆ
ಆಹಾರ ಸೇವಿಸಕೂಡದು, ನೀರನ್ನೂ ಕೂಡಾ ಕುಡಿಯ
ಬಾರದು ಎಂದು ಹಿರಿಯರು ಹೇಳಿದ್ದಾರೆ. ಗ್ರಹಣಕ್ಕೂ ಮುನ್ನ ಮನೆಗಳಲ್ಲಿ ಅಡುಗೆ ಮಾಡಬಾರದು ಎನ್ನುತ್ತಾರೆ. ಈಗಾಗಿ,
ತಮ್ಮ ದೇವಾಲಯದಲ್ಲಿ ಬುಧವಾರ ಸಂಜೆಯಿಂದ ಆರತಿ ಪೂಜೆಗಳನ್ನೂ ನಿಲ್ಲಿಸುವ
ಜತೆಗೆ ಮಂದಿರದ ವೆಬ್ ಸೈಟ್ ಸಹ ಬಂದ್ ಮಾಡಿರುವುದಾಗಿ ಬಿರ್ಲಾ ಮಂದಿರ ಸಮಿತಿ ತಿಳಿಸಿದೆ.ಗುರುವಾರ ಬೆಳಿಗ್ಗೆ ೮.೧೭
ಕ್ಕೆ ಗ್ರಹಣ ಪ್ರಾರಂಭವಾಗಲಿದ್ದು, ಬೆಳಿಗ್ಗೆ ೧೦.೫೭ ರವರೆಗೆ ಮುಂದುವರಿಯಲಿದೆ ಎಂದು ಬಿರ್ಲಾ ಮಂದಿರ ಆರ್ಚಕರು ಹೇಳಿದ್ದಾರೆ. ಗುರುವಾರ ಮಧ್ಯಾಹ್ನ ೧೨ ಗಂಟೆಯ ನಂತರ ದೇಗುಲ ತೆರೆದು
ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸುವುದಾಗಿ ತಿಳಿಸಿದ್ದಾರೆ.
ಬುಧವಾರ ರಾತ್ರಿ ೮.೨೦ ಕ್ಕೆ ಬಿರ್ಲಾ ದೇಗುಲ ಮುಚ್ಚಲಾಗಿದ್ದು,
ಈ ಸಂದರ್ಭದಲ್ಲಿ ದೇವಾಲಯ ಪ್ರವೇಶಿಸಲು
ಯಾರಿಗೂ ಅವಕಾಶ ನೀಡಿಲ್ಲ. ಹಾಗಾಗಿ ದೇಗುಲದ
ವೆಬ್‌ಸೈಟ್ ಸಹ ಬಂದ್ ಮಾಡಲಾಗಿದೆ ಎಂದು ಅರ್ಚಕರು ಹೇಳಿದ್ದಾರೆ.