ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವುದು ಕಡ್ಡಾಯ

ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವುದು ಕಡ್ಡಾಯ

ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವುದು ಕಡ್ಡಾಯ 

  ಮುಂಡಗೋಡ 26 :  ಪಟ್ಟಣದಲ್ಲಿ  ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಜೊತೆಗೆ ತಮ್ಮಜೀವ ರಕ್ಷಣೆಗಾಗಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ಪಿ ಎಸ್ ಐ ಪರಶುರಾಮ ಮಿರ್ಜಗಿ ತಿಳಿಸಿದ್ದಾರೆ.   ಪಟ್ಟಣದ ಸಾಯಿಮಂದಿರ ಮುಂಭಾಗ ಸಾರ್ವಜನಿಕರಿಗೆ ಸಂಚಾರಿ ನಿಯಮ ಹಾಗೂ ಹೆಲ್ಮೆಟ್ ಬಗ್ಗೆ ಜಾಗೃತಿ  ಸಂಚಾರ ನಿಯಮ ಪಾಲಿಸದೇ ಇರುವವರ ಮೇಲೆ ಸುಮಾರು 50 ಪ್ರಕರಣಗಳನ್ನು ದಾಖಲಿಸಿ ಮೊಟಾರು ವಾಹನ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು.   ಹೆಲ್ಮೆಟ್ ಧರಿಸಿ   ಪಟ್ಟಣದಲ್ಲಿ ಬೈಕ್ ಸವಾರರಿಗೆ ಹೆಲೈಟ್ ಕಡ್ಡಾಯವಾಗಿ ಹಾಕಿಕೊಳ್ಳಬೇಕು ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಮದ್ಯಪಾನ ಸೇವನೆ ರಸ್ತೆಯಲ್ಲಿ ಅಡ್ಡಾದಿಡ್ಡಿ ಚಾಲನೆಯಿಂದ ಅಪಘಾತ ಸಂಭವಿಸಿ ಇಡೀ ಕುಟುಂಬವೇ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. 

ಬೈಕ್ ಸವಾರರು ಚಾಲನೆ ಮಾಡುವಾಗ ತಲೆಗೆ ಹೆಲ್ಮೆಟ್ ಧರಿಸುವುದರಿಂದ ಆಕಸ್ಮಿಕವಾಗಿ ಅಪಘಾತ ಸಂಭವಿಸಿದರೂ ತಲೆಗೆ ಪೆಟ್ಟು ಬೀಳದಂತೆ ಸುರಕ್ಷತೆ ಕಾಪಾಡಿಕೊಳ್ಳಬಹುದು. ಅಂತೆಯೇ ದ್ವಿಚಕ್ರಗಳಲ್ಲಿ ಹಿಂಬದಿಯಲ್ಲಿ ಕುಳಿತು ಸಂಚರಿಸುವ ವ್ಯಕ್ತಿಯೂ ಹೆಲ್ಮೆಟ್ ಧರಿಸಬೇಕು ಎಂದರು.   ಉರಿ ಬೀಸಿಲನ್ನು ಲೆಕ್ಕಿಸದೆ ಪಿ ಎಸ್‌ಐ ಪರಶುರಾಮ ಮಿರ್ಜಗಿ ಯವರು ತಮ್ಮ ಸಿಬ್ಬಂದಿಯೋಡನೆ ರಸ್ತೆಗಿಳಿದು ಬೈಕ್ ಸವಾರರಿಗೆ ನೋ ಪಾರ್ಕಿಂಗ್ ನಲ್ಲಿ ವಾಹನ ನಿಲ್ಲಿಸುವರಿಗೆ ಹಾಗೂ ಕರ್ಕಶ ಶಬ್ದ ಹೊರಸೂಸುವ ವಾಹನಗಳ ಮಾಲಿಕರಿಗೆ ಶಾಕ್ ನೀಡಿದ್ದಾರೆ.   ಪೊಲೀಸರಿಂದ ಇಂತಹ ಕಾರ್ಯಾಚರಣೆ ನಿರಂತರವಾಗಿ ನಡೆದರೆ ಎಲ್ಲವೂ ಸರಿಯಾಗುತ್ತದೆ. ಒಂದು ದಿನ ಮಾಡಿ ನಂತರ ಮರೆತುಬಿಟ್ಟರೆ ಮತ್ತೆ ಅದೇ ರಾಗ ಅದೇ ಹಾಡು ಎನ್ನುವಂತಾಗುತ್ತದೆ ಎಂದು ಪ್ರಜ್ಞಾವಂತ ನಾಗರಿಕರು ತಿಳಿಸಿದ್ದಾರೆ. 


ಸುದ್ದಿ ಓದಿ