ಹಗರಿಬೊಮ್ಮನಹಳ್ಳಿ

ಬೈಕ್ ಪಾರ್ಕಿಂಗ್, ಸಂಚಾರಕ್ಕೆ ತೊಂದರೆಯಾಗದಿರಲಿ ; ನ್ಯಾ. ಭಾಗ್ಯಲಕ್ಷ್ಮೀ ಖಡಕ್ ಸೂಚನೆ

ಬೈಕ್ ಪಾರ್ಕಿಂಗ್, ಸಂಚಾರಕ್ಕೆ ತೊಂದರೆಯಾಗದಿರಲಿ ; ನ್ಯಾ. ಭಾಗ್ಯಲಕ್ಷ್ಮೀ ಖಡಕ್ ಸೂಚನೆ

ಲೋಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ 27: ಪಟ್ಟಣದ ಹೃದಯ ಭಾಗವಾದ ಬಸವೇಶ್ವರ ವೃತ್ತದಲ್ಲಿ ದಿನೇ ದಿನೇ ವಾಹನಗಳ ದಟ್ಟಣೆಯಿಂದ ಟ್ರಾಫಿಕ್ ಸಮಸ್ಯೆ ತಲೆದೋರುತ್ತಿದ್ದು ಕೂಡಲೇ ಈ ಟ್ರಾಫಿಕ್ ಕಿರಿಕಿರಿಯ ಸಮಸ್ಯೆಯನ್ನು ಬಗೆಹರಿಸುವಂತೆ ಅಧಿಕಾರಿಗಳಿಗೆ ನ್ಯಾ.ಭಾಗ್ಯಲಕ್ಷೀ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. 

ನಗರದ ಮುಖ್ಯ ರಸ್ತೆಯುದ್ದಕ್ಕೂ ರಸ್ತೆ ಇಕ್ಕೆಲುಗಳಲ್ಲಿ ಪಾರ್ಕಿಂಗ್ ಮಾಡಲಾದ ದ್ವಿಚಕ್ರ ವಾಹನ ಸೇರಿದಂತೆ ಆಟೋಗಳಿಗೆ ನಿಗದಿತ ನಿಲುಗಡೆ ಸ್ಥಳ ಗುರುತಿಸುವಂತೆ ಪುರಸಭೆ ಮುಖ್ಯಾಧಿಕಾರಿ ಎಂ.ಕೆ.ಮುಗಳಿ ಅವರಿಗೆ ತಿಳಿಸಲಾಯಿತು. ಇನ್ನು ಬೀದಿ ಬದಿ ವ್ಯಾಪರಸ್ಥರಿಗೆ ಸೂಕ್ತ ಸ್ಥಳ ಗುರುತಿಸಿ ಅಲ್ಲಿಯೇ ಅವರ ವ್ಯಪಾರ ವಹಿವಾಟು ನಡೆಸುವಂತೆ ಸ್ಥಳ ಪರೀಶೀಲನೆಗೆ ನ್ಯಾಯಾಧೀಶರು ತಿಳಿಸಿದರು ಇದಕ್ಕೆ ಉತ್ತರಿಸಿದ ಪುರಸಬೆ ಮುಖ್ಯಾಧಿಕಾರಿ ಇ ಹಿಂದೆ ಹಳೆ ಬಸ್ ನಿಲ್ದಾಣಕ್ಕೆ ಇವರನ್ನೆಲ್ಲಾ ಸ್ಥಳಾಂತರಿಸಲಾಗಿತ್ತು, ತಳ್ಳುಗಾಡಿಯವರು ಮತ್ತೆ ಅದೇ ಸ್ಥಳಗಳಲ್ಲಿ ವ್ಯಾಪಾರ ಮಾಡುತ್ತಿದ್ದಾರೆ ಎಂದು ಉತ್ತರಿಸಿದರೆ, ಇದಕ್ಕೆ ಪಿಎಸ್‌ಐ ಸರಳ ಅವರು ಉತ್ತರಿಸಿ ಹತ್ತಾರು ಸಾರೆ ದಂಡ ವಿಧಿಸಿದ್ದು ಅವರ ತಕ್ಕಡಿ ಕಲ್ಲುಗಳನ್ನು ಠಾಣೆಗೆ ತೆಗೆದುಕೊಂಡು ಹೊಗಿದ್ದೆವೆ ಆದರೂ ಮಾತು ಕೇಳುತ್ತಿಲ್ಲ ಎಂದರು. 

ಬಸವೇಶ್ವರ ವೃತ್ತದ ಬಳಿ ಇರುವ ಬಸ್ ತಂಗುದಾಣಕ್ಕೆ ಅಡ್ಡಲಾಗಿ ನಿಲ್ಲುತ್ತಿರುವ ಆಟೋಗಳು ಪ್ರಯಾಣಿಕರಿಗೆ ತೊಂದರೆಯಾಗದಂತೆ ಅಟೋ ನಿಲುಗಡೆ ಮಾಡಬೇಕು, ತಾಲೂಕು ಕಚೇರಿ ಬಳಿ ಸಾಲುಗಟ್ಟಿ ನಿಲ್ಲುತ್ತಿರುವ ವಾಹನಗಳ ಬಗ್ಗೆ ತಹಶಿಲ್ದಾರ್ ಅವರಿಗೆ ಕೇಳಿದರು, ಇದಕ್ಕೆ ಕೂಡಲೆ ಬೈಕ್‌ಗಳನ್ನು ತೆರೆವುಗೊಳಿಸುವ ಕಾರ್ಯ ಮಾಡಿಸುವುದಾಗಿ ತಿಳಿಸಿದರು.ಮುಖ್ಯ ರಸ್ತೆಯ ಇಕ್ಕೆಲುಗಳಲ್ಲಿ ಹಾಕಿರುವ ಶಡ್‌ಗಳು ರಸ್ತೆಗೆ ತಾಕುವಂತಿದ್ದು ಕೂಡಲೆ ಇದರ ಬಗ್ಗೆ ಗಮನಹರಿಸುವಂತೆ ಅಧಿಕಾರಿಗಳಿಗೆ ತಾಕಿತು ಮಾಡಿದರು. 

ಮುಖ್ಯ ರಸ್ತೆಗಳಲ್ಲಿ ಯಾವುದೇ ನಾಮ ಫಲಕ ಸೇರಿದಂತೆ ಸಂಚಾರಿ ಸೂಚಕಗಳು ಕಾಣುತ್ತಿಲ್ಲ, ಪಾರ್ಕಿಂಗ್ ಸೇರಿದಂತೆ ಅವಶ್ಯವಿರುವ ನಾಮಫಲಕಗಳನ್ನು ಅಳವಡಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿ ಕೃಷ್ಣಾನಾಯ್ಕ್‌ಗೆ ತಿಳಿಸಿದರು. ಕೆಎಸ್ಸಾರಿ​‍್ಟಸಿ ಬಸ್‌ಗಳು ನಿಗದಿತ ಸ್ಥಳದಲ್ಲಿ ನಿಲ್ಲುವಂತೆ ಘಟಕ ವ್ಯೆವಸ್ಥಾಪಕರಿಗೆ ಸೂಚಿಸಲಾಯಿತು. 

ಫುಟ್ಪಾತ್‌ಗಳಲ್ಲಿ ವ್ಯಾಪಾರ ಮಾಡುತ್ತಿರುವವರಿಗೆ ಸೂಕ್ತ ಸ್ಥಳಕ್ಕೆ ರವಾನೆಯಾಗುವಂತೆ ಪುರಸಭೆಯಿಂದ ಧ್ವನಿ ವರ್ಧಕಗಳ ಮೂಲಕ ತಿಳಿಸಿ, ರಾಮನಗರದ ಬಸ್ ನಿಲ್ದಾಣದೊಳಗೆ ಬಸ್‌ಗಳು ಸಾಗುತ್ತಿಲ್ಲ, ಕೇವಲ ನಾಮಕಾವಸ್ಥೆ ನಾಮಫಲಕ ಹಾಕಲಾಗಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ ಎಂದು ಪರ್ತಕರ್ತರ ಪ್ರಶ್ನೆಗೆ ನ್ಯಾಯಾಧೀಶರು ಉತ್ತರಿಸಿ ಕೆಎಸ್ಸಾರಿ​‍್ಟಸಿ ಬಸ್ ಘಟಕ ವ್ಯೆವಸ್ಥಾಪಕರಿಗೆ ಈ ಬಗ್ಗೆ ತಿಳಿಸಲಾಗಿದೆ, ಇದಕ್ಕೂ ಒಪ್ಪದಿದ್ದರೆ ಬಸ್‌ಗಳನ್ನು ಪೋಲೀಸ್ ಇಲಾಖೆಯವರು ಠಾಣೆಗೆ ಕರದೊಯ್ಯುವಂತೆ ತಿಳಿಸಿದರು. 

ಪಟ್ಟಣದ ಮುಖ್ಯ ರಸ್ತೆಯಲ್ಲಿನ ಸಮಸ್ಯೆಗಳು ಶೀಘ್ರವೇ ಬಗೆಹರಿಸಬೇಕು, ಒಬ್ಬರ ಮೇಲೊಬ್ಬರೂ ಬರೆಳು ತೋರಿಸುತ್ತಾ ಹೋಗುವುದು ಸೂಕ್ತವಲ್ಲ, ಪ್ರತಿಯೊಬ್ಬರೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಬೇಕು, ಸಮಸ್ಯೆ ಬಗೆಹರಿಯುವ ತನಕ ಈ ಪರೀಶೀಲನಾ ಕಾರ್ಯ ಪ್ರತಿದಿನ ನಡೆಯುತ್ತದೆ ಎಂದು ಅದಿಕಾರಿಗಳಿಗೆ ನ್ಯಾಯಾಧೀಶರು ತಿಳಿಸಿದರು. 


ಸುದ್ದಿ ಓದಿ