ಲೇಖನಗಳು

ಅಂತರ್ಜಾಲದಲ್ಲಿ ವಂಚನೆಯ ದೊಡ್ಡ ಜಾಲ....

ಅಂತರ್ಜಾಲದಲ್ಲಿ ವಂಚನೆಯ ದೊಡ್ಡ ಜಾಲ....

ಮನುಷ್ಯ ಬದಲಾದಂತೆ ಮನುಷ್ಯನ ಸುತ್ತಮುತ್ತಲಿನ ವಾತಾವರಣದಲ್ಲಿ ಬಹುತೇಕ ಬದಲಾವಣೆಗಳು ಬರುತ್ತಿವೆ  

ಇಪ್ಪತ್ತೊಂದನೆಯ ಶತಮಾನದಲ್ಲಿ ಬಹಳಷ್ಟು ವಿಶಿಷ್ಟ ವಾದಂತಹ ಆವಿಷ್ಕಾರಗಳು ಸಂಭವಿಸುತ್ತಿವೆ ಜಗತ್ತೇ ಸ್ಮಾರ್ಟ್‌ ಆಗುತ್ತಿದೆ ದೇಶಗಳು ಸ್ಮಾರ್ಟ್‌ ಆಗಿವೆ ಹಾಗಾಗಿ ಮಾನವನೂ ಸಹ ಸ್ಮಾರ್ಟ್‌ ಆಗಿದ್ದಾನೆ ಮಾನವ ಬಳಸುವ ಪ್ರತಿಯೊಂದು ಸಾಮಗ್ರಿಗಳು ಸಹ ಅಷ್ಟೇ ಸ್ಮಾರ್ಟ್‌ ಆಗಿವೆ ಎಷ್ಟೇ ಆದರೂ ಇದು ಸ್ಮಾರ್ಟ್‌ ಯುಗ ಸ್ಪಾರ್ಟ್‌ ಫೋನ್‌ಗಳದ್ದೇ ಕಾರುಬಾರು ಎಲ್ಲವೂ ಸ್ಮಾರ್ಟ್‌ ಆಗಿ ಕ್ಷಣಮಾತ್ರದಲ್ಲಿಯೇ ಸಿಗುತ್ತಿವೆ ಕಾರ್ಯಗಳು ಫಲಿಸುತ್ತಿದೆ ಹೀಗಾಗಿ ಪ್ರತಿಯೊಬ್ಬನೂ ಸಹ ಅಷ್ಟೇ ಸ್ಮಾರ್ಟ್‌ ಆಗಿದ್ದಾನೆ ಇದನ್ನೆಲ್ಲ ಗಮನಿಸಿದ ವಂಚಕರು ಸಹ ಅಷ್ಟೇ ಸ್ಮಾರ್ಟ್‌ ಆಗಿದ್ದಾರೆ. ಮೊದಲಿನ ಹಾಗೆ ಮನೆ ಹೊಕ್ಕು ಬ್ಯಾಂಕ್ ಹೊಕ್ಕು ದೇವಾಲಯಗಳನ್ನು ಹೊಕ್ಕು ದರೋಡೆ ಮಾಡುತ್ತಿದ್ದ ಕಾಲವಿತ್ತು ಆದರೆ ಈಗ ಕುಳಿತ ಜಾಗದಿಂದಲೇ ಸ್ಮಾರ್ಟ್‌ ಆಗಿ ಕ್ಷಣ ಮಾತ್ರದಲ್ಲಿಯೇ ಲಕ್ಷಲಕ್ಷ ಕೋಟಿಕೋಟಿ ಹಣ  ವಂಚಿಸುತ್ತಿದ್ದಾರೆ ಇತ್ತೀಚೆಗೆ ಇದೊಂದು ದೊಡ್ಡ ಸವಾಲಾಗಿ ಪರಿಣಮಿಸಿದೆ ಅದರಲ್ಲೂ ಮುಖ್ಯವಾಗಿ ನಮ್ಮ ದೇಶದಲ್ಲಿ ಬಹುತೇಕರು ಸ್ಮಾರ್ಟ್‌ ಫೋನ್‌ಗಳಿಗೆ ಅಡಿಕ್ಟ್‌ ಆಗಿದ್ದಾರೆ ಎಲ್ಲವೂ ಸ್ಮಾರ್ಟ್‌ ಆಗಿ ಕೆಲಸ ಮಾಡುತ್ತಿದ್ದಾರೆ ಹೀಗಿದ್ದರೂ ಸಹ ಅವರಿಗೆ ತಿಳಿಯದಂತೆಯೇ ಖತರ್ನಾಕ್ ಖದೀಮರು ಸ್ಮಾರ್ಟ್‌ ಆಗಿ ಎಲ್ಲರಲ್ಲೂ ವಂಚಿಸುತ್ತಿದ್ದಾರೆ ನಮ್ಮ ದೇಶದಲ್ಲಿ ಇತ್ತೀಚೆಗೆ ಬಹಳಷ್ಟು ಪ್ರಕರಣಗಳು ಸೈಬರ್ ಕ್ರೈಂನಲ್ಲಿ ದಾಖಲಾಗುತ್ತಿವೆ ಕೆಲವೊಂದು ಬೇಧಿಸುತ್ತಿದ್ದಾರೆ ಕೆಲವೊಂದು ಭೇದಿಸಲು ಆಗುತ್ತಿಲ್ಲ  

ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ  

ಜನರ ಜೀವನ ಶೈಲಿ ಬದಲಾದಂತೆ ಜನರು ಬಳಸುವ ಸಾಧನಗಳೂ ಸಹ ವಿನೂತನವಾಗಿ ಬದಲಾಗುತ್ತಿವೆ ದುಡ್ಡು ಪಡೆಯಲು ಕೊಡಲು ಅಥವಾ ಯಾವುದೇ ರೀತಿಯ ಆರ್ಥಿಕವಾಗಿ ವ್ಯವಹರಿಸಲು ಇತ್ತೀಚೆಗೆ ತೀರಾ ಅನುಕೂಲವಾಗಿರುವ ಸಲುವಾಗಿ ನೂರಾರು ಡಿಜಿಟಲ್ ಆಪ್ಗಳು ತೆರೆದುಕೊಂಡಿವೆ ಅದರಲ್ಲೂ ಮುಖ್ಯವಾಗಿ ಆನ್ ಲೈನ್ ಇಂಟರ್ ನೆಟ್ ಬ್ಯಾಂಕಿಂಗ್ ಪೋನ್ ಪೆ ಗೂಗಲ್ ಪೇ ಭೀಮ್ ಆಪ್ ಪೇ ಟಿಎಂ ಹೀಗೆ ಗೂಗಲ್ ಸ್ಟೋರ್ ಓಪನ್ ಮಾಡಿದರೆ ಸಾಕು ನೂರಾರು ಆ್ಯಪ್‌ಗಳು ಸಿಗುತ್ತವೆ ಬಹುತೇಕ ಜನರು ಈಗ ಇವುಗಳಿಗೆ ಅವಲಂಬಿತರಾಗಿದ್ದಾರೆ ಇವುಗಳು ಬಳಸಲು ಎಷ್ಟು ಸುಲಭವೋ ಸ್ವಲ್ಪ ಯಾಮಾರಿದರೂ ನಮ್ಮ ಅಕೌಂಟ್‌ಗಳಿಗೆ ಕನ್ನ ಬೀಳುವುದಂತೂ ಅಷ್ಟೇ ಸತ್ಯ ಅದರಲ್ಲೂ ಮುಖ್ಯವಾಗಿ ವಯಸ್ಸಾದವರನ್ನೇ ಟಾರ್ಗೆಟ್ ಮಾಡುವ ಇವರುಗಳು ಯಾರಿಗೆ ಅಂತರ್ಜಾಲದ ಬಗ್ಗೆ ಕಡಿಮೆ ಮಾಹಿತಿ ಇದೆಯೋ ಅಂಥವರುಗಳನ್ನೇ ಗುರಿಯಾಗಿಸಿಟ್ಟುಕೊಂಡು ಈ ರೀತಿಯ ಮಹಾಮೋಸದ ವಂಚನೆಗಳು ನಡೆಯುತ್ತಿವೆ ಅದಾಗ್ಯೂ ಸಹ ಯಾವುದೇ ವಯೋಮಿತಿ ಇಲ್ಲದೆ ಎಲ್ಲರೂ ಸಹ ಈ ಮೋಸದ ಜಾಲಕ್ಕೆ ಸಿಲುಕುತ್ತಿದ್ದಾರೆ. ಅನಂತರ ಎಷ್ಟೇ ಪ್ರಯತ್ನ ಪಟ್ಟರು ಕೆಲವರು ಸಿಗಬಹುದು ಬಹುತೇಕ ಪ್ರಕರಣಗಳು ಹಾಗೆಯೇ ಉಳಿದುಬಿಟ್ಟಿವೆ  

ಇತ್ತೀಚೆಗೆ ಬಹುತೇಕರು ಎಲ್ಲವನ್ನು ಸ್ಮಾರ್ಟಾಗಿ ಬಿಲ್ಗಳನ್ನು ಕುಳಿತಲ್ಲಿಯೇ ತುಂಬುತ್ತಿದ್ದಾರೆ ನೀರಿನ ಕರ ವಿದ್ಯುತ್ ಕರ ಇನ್ನಿತರ ಯಾವುದೇ ತರಹದ ಬಿಲ್‌ಗಳು ಇದ್ದರೂ ಸಹ ಸ್ಮಾರ್ಟ್‌ ಆಗಿ ಸುಲಭವಾಗಿ ಪೆ ಮಾಡುತ್ತಿದ್ದಾರೆ ಇದನ್ನೇ ಬಂಡವಾಳವಾಗಿ ಇಟ್ಟುಕೊಂಡು ಆನ್ ಲೈನ್ ವಂಚಕರು ಇವರ ನಂಬರ್‌ಗಳಿಗೆ ಸಂದೇಶಗಳನ್ನು ಕಳುಹಿಸುವ ಲಿಂಕ್‌ಗಳ ಮೂಲಕ ಅಥವಾ ಇನ್ಯಾವುದೋ ಆಪ್‌ಗಳನ್ನು ಡೌನ್‌ಲೋಡ್ ಮಾಡಲು ಹೇಳಿ ನಿಮ್ಮ ಮೊಬೈಲ್ ಪೂರ್ಣಪ್ರಮಾಣದ ಸ್ವಾಯತ್ತತೆ ಪಡೆದುಕೊಂಡು ಕ್ಷಣಮಾತ್ರದಲ್ಲಿ ಅಕೌಂಟ್‌ನಲ್ಲಿರುವಂತಹ ಹಣವಲ್ಲ ಖಾಲಿ ಮಾಡಿ ಬಿಡುತ್ತಾರೆ ಎಲ್ಲವೂ ಸಹ ದುಡ್ಡು ಲಪಟಾಯಿಸಲು ನಂತರವೇ ತಿಳಿಯುವ ಹಾಗೆ ಆಗುತ್ತದೆ ಅನಂತರ ಗಮನಕ್ಕೆ ಬಂದ ನಂತರ ಏನೂ ಮಾಡದ ಪರಿಸ್ಥಿತಿ ಉಂಟಾಗುತ್ತದೆ ತದನಂತರ ಆನ್ ಲೈನ್ ವಂಚಕರು ಯಾವುದೋ ರಾಜ್ಯ ದೇಶದಲ್ಲಿ ಕುಳಿತುಕೊಂಡು ಎಲ್ಲವನ್ನು ವಂಚನೆ ಮಾಡುತ್ತಾರೆ ಕೆಲವೊಂದು ಪ್ರಕರಣಗಳನ್ನು ಭೇದಿಸಲು ಬಹುದು ಬಹುತೇಕ ಪ್ರಕರಣಗಳು ಪೆಂಡಿಂಗ್ ನಲ್ಲಿಯೇ  ಉಳಿದುಕೊಂಡಿರುತ್ತವೆ  

ಹಾಗಾಗಿ ಸ್ಮಾರ್ಟ್‌ ಆಪ್‌ಗಳನ್ನು ಬಳಸುವ ಎಲ್ಲರೂ ಸಹ ಪೂರ್ಣ ಪ್ರಮಾಣದ ಯಾವುದು ಸತ್ಯ ಯಾವುದು ಸುಳ್ಳು ಯಾವುದು ಮೋಸ ವಂಚನೆ ಈ ರೀತಿಯ ವಿಷಯಗಳನ್ನು ತಿಳಿಯುವುದು ಬಹು ಮುಖ್ಯವಾಗಿದೆ... ಆದ್ದರಿಂದ ಮೊದಲೇ ನಾವುಗಳು ಜಾಗೃತವಾಗುವುದು ಬಹಳ ಅನುಕೂಲ ಹಾಗೂ ನಮ್ಮ ಎಲ್ಲಾ ಗೌಪ್ಯತೆಗಳೆಲ್ಲಾ ಆನ್ ಲೈನ್‌ನಲ್ಲಿ ಇರುವುದು ಸಹ ಅಷ್ಟು ಯೋಗ್ಯವಲ್ಲ ಯಾವುದು ಗೊತ್ತೇ ಇರದ ಆ್ಯಪ್‌ಗಳನ್ನು ಇನ್ ಸ್ಟಾಲ್ ಮಾಡಿ ಕೊಳ್ಳಬಾರದು ಇಂತಹ ಪ್ರಮುಖ ಆ್ಯಪ್‌ಗಳೇ ನಿಮ್ಮ ಗೌಪ್ಯತೆಗಳೆಲ್ಲಾ ಮಾರಿಕೊಳ್ಳುತ್ತಿವೆ ಆನ್ ಲೈನ್ ವ್ಯವಹಾರದಲ್ಲಿ ಅಂತೂ ಪ್ರತಿಯೊಬ್ಬರೂ ಹೆಜ್ಜೆಯೂ ಸಹ ಜಾಗೃತವಾಗಿ ಇಡಬೇಕು ಯಾವುದೇ ಪಾಸ್ ವರ್ಡ್‌ ಓಟಿಪಿ ಮೊಬೈಲ್ ಪಿನ್ ಅಥವಾ ಕಂಪ್ಯೂಟರ್ ಆಕ್ಸಿಸ್ ಮೊಬೈಲ್ ಆಕ್ಸಿಸ್‌ಗಳನ್ನ ನೀಡಲೇಬಾರದು ಹಾಗೂ ಒಂದು ವಿಷಯ ಗಮನದಲ್ಲಿರಲಿ ಯಾವುದೇ ಬ್ಯಾಂಕ್‌ಗಳು ಕರೆ ಮಾಡಿ ಓಟಿಪಿ ಗಳೆಲ್ಲ ಅಥವ ಯಾವುದೇ ರೀತಿಯ ಯೂಸರ್ ನೇಮ್ ಪಾಸ್ ವರ್ಡ್‌ಗಳನ್ನು ಕೇಳುವುದಿಲ್ಲ.. 

ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುತ್ತಿರುವ ಮಹಾ ವಂಚನೆ  

ಹೌದು ಅಂತರ್ಜಾಲದ ಬಳಕೆ ಹೆಚ್ಚಿದಂತೆ ಹಳೆಯ ಶೈಲಿಗಳಿಗೆ ತಿಲಾಂಜಲಿ ಹೇಳಿ ಬದಲಾಗುತ್ತಿರುವ ಪ್ರಪಂಚಕ್ಕೆ ಹೊಂದಿಕೊಳ್ಳುವ ಅನಿವಾರ್ಯತೆ ಆತುರತೆ ಘನತೆ ಗೌರವಗಳಿಗಾಗಿ ಇತ್ತೀಚೆಗೆ ಸರಿಸುಮಾರು ದೇಶದ ಅರ್ಧ ಭಾಗಕ್ಕಿಂತಲೂ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದಾರೆ ಅದರಲ್ಲಿ ಮುಖ್ಯವಾಗಿ ವಾಟ್ಸಾಪ್ ಫೇಸ್‌ಬುಕ್ ಇನ್ಸಾ-್ಟ್ರಗ್ರಾಂ ಟ್ವಿಟ್ಟರ್ ಇಮೇಲ್ ಹೀಗೆ ಹತ್ತು ಹಲವು ಬಗೆಯ ಜಾಲತಾಣಗಳನ್ನು ಬಳಸಿ ಜನರು ಒಬ್ಬರಿಗೊಬ್ಬರು ಬಹಳಷ್ಟು ಹತ್ತಿರದ ಇದ್ದಾರೇನೋ ಎಂಬಂತೆ ಆಗಿಬಿಟ್ಟಿದ್ದಾರೆ ಪ್ರಚಲಿತ ಇತಿಹಾಸ ಭವಿಷ್ಯದ ಇನ್ನೂ ಅನೇಕ ವಿಷಯಗಳನ್ನು ಇಲ್ಲಿ ಸಲೀಸಾಗಿ ಸಿಗುವುದರಿಂದ ಇವುಗಳಿಗೆ ದಾಸರಾಗಿ ಬಿಟ್ಟಿದ್ದಾರೆ  ಯಾವುದೇ ಕಾರ್ಯಕ್ರಮ ಕೆಟ್ಟದ್ದು ಒಳ್ಳೆಯದು ಎಲ್ಲರಿಗೂ ಕ್ಷಣಮಾತ್ರದಲ್ಲಿ ದೃಶ್ಯ ಮಾಧ್ಯಮ ಮತ್ತು ಇನ್ನಿತರ ಮಾಧ್ಯಮಗಳಿಗಿಂತಲೂ ವೇಗವಾಗಿ ಇದರಲ್ಲಿ ಎಲ್ಲವೂ ತಿಳಿಯುತ್ತದೆ ನದಿ ಎಷ್ಟು ಸತ್ಯವೋ ಸುಳ್ಳು ಎಂಬುದು ನಾವೇ ವಿಮರ್ಶೆ ಮಾಡಿಕೊಳ್ಳಬೇಕು ತಿಳಿದುಕೆಣಟಿಜಜಜಿಟಿಜಜಳ್ಳಬೇಕು ಬಹುತೇಕರು ಇದಕ್ಕೆ ಅಂಟಿಕೊಂಡಿದ್ದಾರೆ ಬೆಳಿಗ್ಗೆ ಎದ್ದ ನಂತರವೂ ಮಲವುಗಿಂತ ಮುಂಚೆಯೇ ಇವುಗಳು ಅವರ ಕೈಯಲ್ಲಿ ಇರಲೇಬೇಕು ಅದರಲ್ಲೂ ಕಡಿಮೆ ದರದಲ್ಲಿ ಸಿಗುವ ನೆಟ್‌ದಿಂದಾಗಿ ಹಳ್ಳಿಯಲ್ಲಿರುವ ದನಗಾಯಿ ಹಿಡಿದು ದಿಲ್ಲಿಯಲ್ಲಿರುವಂತೆ ರಾಷ್ಟ್ರಪತಿ ಪ್ರಧಾನ ಮಂತ್ರಿಗಳುವರೆಗೂ ವ್ಯಾಪಿಸಿದೆ ಹಾಗಾಗಿ ಇದನ್ನೇ ಬಂಡವಾಳವನ್ನಾಗಿ ಇಟ್ಟುಕೊಂಡ ಅಂತರ್ಜಾಲದ ಖದೀಮರು ಹಾಗೂ ವಂಚಕರು ಅನೇಕ ನಕಲಿ ಸಾಮಾಜಿಕ ಜಾಲ ತಾಣಗಳ ಖಾತೆಗಳನ್ನು ತೆರೆದು ಅವರಂತೆಯೇ ಚಿತ್ರಗಳೆಲ್ಲ ಇಟ್ಟುಕೊಂಡು ಅನೇಕರಿಂದ ಗೆಳೆಯರನ್ನಾಗಿ ಮಾಡಿಕೊಂಡು ಸಂಬಂಧಿಕರಿಗೆ ಗೆಳೆಯರಿಗೆ ವಿದ್ಯಾರ್ಥಿಗಳಿಗೆ ಖಾಸಗಿ ಸಂದೇಶಗಳನ್ನು ಕಳಿಸುವುದರ ಮೂಲಕ ಇವರು ನಿಜವಾಗಿಯೂ ಕಷ್ಟದಲ್ಲಿದ್ದಾರೇನೋ ಎಂಬಂತೆ ವರ್ತಿಸಿ ನಾವು ಆಸ್ಪತ್ರೆಯಲ್ಲಿದ್ದೆವೆ ಅಥವಾ ಬೇರೆಡೆಗೆ ಬಂದಿದ್ದೇವೆ ತುರ್ತಾಗಿ ನನಗೆ ಹಣದ ಅವಶ್ಯಕತೆ ಇದೆ ನನಗೆ ನಾಳೆ ಹಿಂತಿರುಗಿಸುತ್ತೇನೆ ಅಂತ ಹೇಳಿ ಭಾವನಾತ್ಮಕವಾಗಿ ವಂಚಿಸುತ್ತಿರುವುದು ಇತ್ತೀಚೆಗೆ ಸಾಮಾನ್ಯವಾಗಿದೆ ಹಾಗೂ ಹೆಚ್ಚಾಗಿದೆ ಅದರಲ್ಲೂ ಮುಖ್ಯವಾಗಿ ಫೇಸ್‌ಬುಕ್ ಹಾಗೂ ಇನ್ಸಾ-್ಟ್ರಗ್ರಾಮ್‌ಗಳಲ್ಲಿ ಹೆಚ್ಚಿದ್ದು ಪ್ರಕರಣಗಳು ದಾಖಲಾಗುತ್ತಿವೆ ಅದನ್ನ ಸತ್ಯವೆಂದು ನಂಬಿ ದುಡ್ಡು ಹಾಕುವವರು ಪಾಡು ಯಾರಿಗೂ ಹೇಳದಂತೆ ಆಗಿದೆ ಸೈಬರ್ ಕ್ರೈಂ ಬ್ರ್ಯಾಂಚ್‌ಗಳಲ್ಲಿ ಇದೇ ಕೇಸುಗಳು ಹೆಚ್ಚಾಗಿವೆ ಇವರಲ್ಲಿಯೂ ಸಹ ಎಚ್ಚರಿಕೆಯಿಂದ ಇರಬೇಕಾಗಿದೆ ನೇರಾನೇರ ಸಂಪರ್ಕವಿಲ್ಲದೆ ಈ ರೀತಿ ಯಾವುದೇ ದುಡ್ಡು ಹಾಕುವ ಪ್ರಕ್ರಿಯೆಗೆ ಯಾರೂ ಸಹ ಮುಂದಾಗಬಾರದು ಹಾಗು ಎಲ್ಲವನ್ನೂ ಸಂಬಂಧಪಟ್ಟವರು ಜೊತೆಯಲ್ಲಿ ನೇರವಾಗಿ ಮಾತನಾಡಿದ ನಂತರವಷ್ಟೇ ಖಾತರಿಪಡಿಸಿಕೊಳ್ಳಬೇಕು ಅವರು ನಿಜವಾಗಿಯೂ ಕಷ್ಟದಲ್ಲಿ ಸತ್ತಿದ್ದಾರೆಯೇ ಅವರಿಗೆ ಅವಶ್ಯಕತೆ ಇದೆಯೇ ಎಂಬುದರ ಕುರಿತು ನೀವಾಗಿಯೇ ಕೇಳಿಕೊಂಡು ನಂತರವಷ್ಟೇ ಮುಂದುವರಿಯಬೇಕು. 

ಲೋನ್ ಅಪ್ಲಿಕೇಶನ್‌ಗಳ ಬ್ಲಾಕ್ ಮೇಲ್  

ತೀರಾ ಇತ್ತೀಚೆಗೆ ಯಾವುದೇ ದಾಖಲೆಗಳು ಇಲ್ಲದೇ ಕ್ಷಣಮಾತ್ರದಲ್ಲಿ ಲೋಡ್ ನೀಡುವ ಆ್ಯಪ್‌ಗಳು ಕಾಣಸಿಗುತ್ತಿವೆ ಯಾವುದೇ ಬ್ಯಾಂಕ್ ಗಳ ಜೊತೆಯಲ್ಲಿ ಒಪ್ಪಂದ ಹಾಗೂ ಯಾವುದೇ ಬ್ಯಾಂಕ್ ಕ್ಷೇತ್ರದಲ್ಲಿ ಸಂಬಂಧವಿರದ ವ್ಯಕ್ತಿಗಳಿಂದ ಈ ರೀತಿಯ ವಂಚನೆ ನಡೆಯುತ್ತಿದೆ ಸಮಾಜಿಕ ಜಾಲತಾಣಗಳಲ್ಲಿ ಇವರ ಬಗ್ಗೆ ಎಲ್ಲೂ ಮಾಹಿತಿ ತೆಗೆದುಕೊಂಡು ನಂತರ ಕೆಲವೇ ದಿನಗಳಿಗೆ ಅತಿ ಹೆಚ್ಚು ಬಡ್ಡಿ ಹಾಕಿ ಕೆಲವೇ ದಿನಗಳಲ್ಲಿ ವಾಪಸ್ ಕೇಳುತ್ತಾರೆ  

ಒಂದು ವೇಳೆ ಹೇಳಿದ ಸಮಯದಲ್ಲಿ ಕೊಡದೇ ಹೋದರೆ ಬ್ಲಾಕ್ ಮೇಲ್ ಮಾಡಲು ಶುರು ಮಾಡುತ್ತಾರೆ ಅಶ್ಲೀಲ ಫೋಟೋಗಳನ್ನು ಎಡಿಟ್ ಮಾಡಿ ಸಂಬಂಧಿಕರಿಗೆ ಗೆಳೆಯರಿಗೆ ಹಾಗೂ ಎಲ್ಲರಿಗೂ ಇವುಗಳನ್ನು ಕಳಿಸುತ್ತೇನೆಂದು ತಮ್ಮ ಆಟವನ್ನು ಶುರು ಮಾಡಿ ಕೆಲವೊಂದು ಗೆಳೆಯರಿಗೆ ಸಂಬಂಧಿಕರಿಗೆ ಇದನ್ನ ಕಳಿಸಿಬಿಡುತ್ತಾರೆ ಇವರನ್ನು ಸಂಕಷ್ಟಕ್ಕೆ ಸಿಲುಕಿಸಿ ಮಾನಸಿಕವಾಗಿ ಹಿಂಸೆ ನೀಡುತ್ತಾರೆ ಎಷ್ಟೋ ಕಡೆಯಲ್ಲಿ ಇದರಿಂದ ನೊಂದ ವ್ಯಕ್ತಿಗಳಿಂದ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಇಂತಹ ನೂರಾರು ಉದಾಹರಣೆಗಳು ಈಗ ಸಾಕಷ್ಟು ಸಿಗುತ್ತಿವೆ ಅದಾಗ್ಯೂ ಹಣ ನೀಡಿದರೂ ಮತ್ತಷ್ಟು ಹಣ ನೀಡಲು ಪದೇಪದೆ ಹಿಂಸೆ ನೀಡುತ್ತಾರೆ ಇತ್ತೀಚೆಗೆ ಈ ರೀತಿಯ ಆ್ಯಪ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹೇರಳವಾಗಿ ಸಿಗುತ್ತಿದ್ದ ಯಾವ ರೀತಿಯಲ್ಲಿಯೂ ಸಹ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲವಾದರೂ ಜನ ಎಷ್ಟು ಬೇಗ ಹೆಚ್ಚು ಎಚ್ಚೆತ್ತುಕೆಣಟಿಜಜಜಿಟಿಜಜಳ್ಳುತ್ತಾರೆ ವಸ್ತು ಬೇಗ ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ ಆದ್ದರಿಂದ ಇಂತಹ ಪ್ರಕರಣಗಳು ಗಮನಕ್ಕೆ ಬಂದರೆ ತಕ್ಷಣವೇ ಪೊಲೀಸ್ ಅಥವಾ ಸೈಬರ್ ಕ್ರೈಂಗೆ ತಿಳಿಸಬೇಕು ಆದ್ದರಿಂದ ಮುಂದೆ ಸಂಭವಿಸಬಹುದಾದ ಅನಾಹುತಗಳನ್ನು ತಪ್ಪಿಸಲು ಇದು ಬಹಳಷ್ಟು ಸಹಕಾರವಾಗುತ್ತದೆ  

ಫೇಸ್ಬುಕ್ ಹಾಗೂ ವಾಟ್ಸಾಪ್ ಲೈವ್ ಕಾಲ್ಸ್‌  

ಅಂತರ್ಜಾಲದಲ್ಲಿ ಖದೀಮರು ಜನರಿಗೆ ಮೋಸ ಮಾಡಲು ಒಂದಿಲ್ಲೊಂದು ಮೋಸದ ದಾರಿಯನ್ನು ಕಂಡು ಹಿಡಿಯುತ್ತಾನೆ ಇರುತ್ತಾರೆ ಜನರು ಯಾವ ವಿಷಯಗಳ ಕುರಿತು ಹೆಚ್ಚಾಗಿ ಎಚ್ಚೆತ್ತುಕೊಳ್ಳುತ್ತಾರೋ ಅಂತಹ ಮಾರ್ಗಗಳನ್ನು ಹೊರತುಪಡಿಸಿ ಅನ್ಯ ಮಾರ್ಗಗಳನ್ನು ಹುಡುಕುತ್ತಿದ್ದಾರೆ ಅದರಂತೆ ತೀರ ಇತ್ತೀಚೆಗೆ ಇಂತಹ ಮತ್ತಷ್ಟು ಪ್ರಕರಣಗಳು ಬೆಳಕಿಗೆ ಬರುತ್ತಿವೆ ಈಗ ನೇರವಾಗಿ ವಾಟ್ಸ್‌ ಆ್ಯಪ್ ಅಥವಾ ಫೇಸ್ ಬುಕ್ ವಿಡಿಯೋ ಕಾಲ್ ಮಾಡುವುದರ ಮೂಲಕ ಇತ್ತಕಡೆ ವ್ಯಕ್ತಿ ರೀಸೀವ್ ಮಾಡಿದ ತಕ್ಷಣವೇ ಅತ್ತಕಡೆಯಿಂದ ಅಶ್ಲೀಲ ದೃಶ್ಯಗಳನ್ನು ತೋರಿಸಲು ಪ್ರಾರಂಭಿಸುತ್ತಾರೆ ಅನಂತರ ಅದನ್ನು ರೆಕಾರ್ಡ್‌ ಮಾಡಿ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಲು ಶುರು ಮಾಡುತ್ತಾರೆ ಹಣದ ಬೇಡಿಕೆಗಳನ್ನು ಇಡುತ್ತಾರೆ ಇತ್ತಕಡೆ ರೀಸೀವ್ ಮಾಡಿದ ವರ ಮಾನ ಮರ್ಯಾದೆಗೆ ಅಂಜಿ ಅವರು ಕೇಳಿದಷ್ಟು ದುಡ್ಡು ಗಳನ್ನು ಹಾಕುತ್ತಾರೆ ಈ ರೀತಿಯ ಘಟನೆಗಳು ರಾಜಕೀಯ ಹಾಗೂ ಪೊಲೀಸ್ ಅಧಿಕಾರಿಗಳಿಗೂ ಬಿಟ್ಟಿಲ್ಲ ಆದ್ದರಿಂದ ಇಂತಹ ಆನ್ಲೈನ್ ಅಥವಾ ಅಂತರ್ಜಾಲದ ವಂಚಕರಿಂದ ಜನರು ಬಹಳಷ್ಟು ಜಾಗರೂಕತೆಯಿಂದ ಇರಬೇಕಾದಂತಹ ಅನಿವಾರ್ಯತೆ ಉಂಟಾಗಿದೆ ಜನರು ಎಷ್ಟು  ಅಷ್ಟು ಇಂತಹ ಅಂತರ್ಜಾಲದ ವಂಚನೆಗಳಿಂದ ದೂರವಿರುತ್ತಾರೆ ಆದ್ದರಿಂದ ಹೆಚ್ಚೆಚ್ಚು ಇಂತಹ ವಿಷಯಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದು ಅನಿವಾರ್ಯವಾಗಿದೆ ಅದರಲ್ಲಿಯೂ ಮುಖ್ಯವಾಗಿ ಯುವಕರು ಹಾಗೂ ವಯಸ್ಸಾದವರು ಇಂತಹ ಘಟನೆಗಳಿಂದ ಎಚ್ಚರಿಕೆಯಿಂದ ಇರಬೇಕಾಗಿದೆ ಹಾಗೂ ಹೆಣ್ಣುಮಕ್ಕಳ ಯಾವುದೇ ರೀತಿಯ ತಮ್ಮ ಭಾವಚಿತ್ರಗಳನ್ನು ಅಂತರ್ಜಾಲದಲ್ಲಿ ಹಾಕುವುದು ಕಡಿಮೆ ಮಾಡಬೇಕು ಇಲ್ಲದಿದ್ದರೆ ಅಂತಹ ಭಾವಚಿತ್ರಗಳನ್ನು ಸಹ ಎಡಿಟ್ ಮಾಡಿ ಹೆಣ್ಣುಮಕ್ಕಳಿಗೆ ಬ್ಲಾಕ್ ಮೇಲ್ ಮಾಡುವ ಘಟನೆಗಳು ಸಹ ನಡೆಯುತ್ತಿವೆ ಒಟ್ಟಾರೆ ಇತ್ತೀಚಿನ ಸ್ಮಾರ್ಟ್‌ ಯುಗದಲ್ಲಿ ಎಲ್ಲರೂ ಸಹ ಜಾಗೂರುಕತೆಯಿಂದ ಇದ್ದಾಗ ಮಾತ್ರ ಈ ರೀತಿ ಅಂತರ್ಜಾಲದ ವಂಚನೆಯ ಚಟುವಟಿಕೆಗಳನ್ನು ನಾವು ಕಡಿವಾಣ ಹಾಕಬಹುದಾಗಿದೆ  

- ಅಮಿತಕುಮಾರ್ ಬಿರಾದಾರ್  

ವಿಜಯಪುರ 


ಸುದ್ದಿ ಓದಿ