ಪ್ರಾಣಿಗಳಿಗೆ ಮೃತ್ಯು ಮನೆಯಂತಾದ ಭೂತರಾಮಟ್ಟಿ ಪ್ರಾಣಿ ಸಂಗ್ರಹಾಲಯ : ಅರಣ್ಯ ಇಲಾಖೆಯ ನಡೆಗೆ ಪ್ರಾಣಿ ಪ್ರೀಯರ ಕಿಡಿ

ಪ್ರಾಣಿಗಳಿಗೆ ಮೃತ್ಯು ಮನೆಯಂತಾದ ಭೂತರಾಮಟ್ಟಿ ಪ್ರಾಣಿ ಸಂಗ್ರಹಾಲಯ : ಅರಣ್ಯ ಇಲಾಖೆಯ ನಡೆಗೆ ಪ್ರಾಣಿ ಪ್ರೀಯರ ಕಿಡಿ
Bhutaramati Zoological Park is like a death house for animals: Animal lovers slam the Forest Departm

ಪಾರೇಶ ಭೋಸಲೆ 

ಬೆಳಗಾವಿ : ಅವಸಾನದ ಅಂಚಿನಲ್ಲಿರುವ ಕೃಷ್ಣಮೃಗಳು ಬೆಳಗಾವಿ ಭೂತರಾಮನಟ್ಟಿ ಕಿರು ಪ್ರಾಣಿ ಸಂಗ್ರಹಾಲಯದಲ್ಲಿ ಸರಣಿಯಾಗಿ ಸಾವಿಗೀಡಾಗಿದ್ದು, ಇವುಗಳ ಸಾವಿಗೆ ಕಾರಣ ಎನೂ ಎನ್ನುವದು ಇನ್ನು ನಿಗೂಢವಾಗಿದೆ. ಕೃಷ್ಣಮೃಗಗಳ ಸಾವಿನಿಂದ ಅರಣ್ಯ ಇಲಾಖೆಯತ್ತ ನಾಗರಿಕರ ಸಂಶಯ ದೃಷ್ಟಿ ನೆಡುವಂತೆ ಮಾಡಿದೆ.

    ಹೌದು ಓದುಗರೇ... ಭೂತರಾಮಟ್ಟಿಯ ಕಿತ್ತೂರು ರಾಣಿ ಚನ್ನಮ್ಮ ಕಿರು ಪ್ರಾಣಿಗಳ ಸಂಗ್ರಹಾಲಯದಲ್ಲಿ ಪ್ರಾಣಿಗಳ ಸಾವಿನ ಸರದಿ ಹೆಚ್ವುತ್ತಲೇ ಇದ್ದು, ಇದರಿಂದ ಅರಣ್ಯ ಇಲಾಖೆಯವರು ಪ್ರಾಣಿಗಳ ಪಾಲನೆ ಪೋಷಣೆ ಸರಿಯಾಗಿ ಮಾಡುತ್ತಿಲ್ಲ ಎನ್ನುವ ಮಾತು ಸಾರ್ವಜನಿಕರಲ್ಲಿ ದಟ್ಟವಾಗಿ ಹರಡತೋಡಗಿದೆ. ಪ್ರಾಣಿಗಳ ಆರೈಕೆಯಲ್ಲಿ ಅರಣ್ಯ ಇಲಾಖೆ ಎಡವಟ್ಟು ಮಾಡಿದೆ ಎನ್ನುವ ಮಾತು ಈಗ ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಕೃಷ್ಣ ಮೃಗಗಳಿಗೆ ಕಾಯಿಲೆ ಬಂದಿದ್ದರೂ ಅವುಗಳಿಗೆ ಅರಣ್ಯ ಇಲಾಖೆ ಆರೈಕೆ ಯಾಕೆ ಮಾಡಲಿಲ್ಲ ಎನ್ನುವ ಸಂಶಯವು ನಾಗರಿಕರಲ್ಲಿ ಮೂಡತೋಡಗಿದೆ. 

   ದೇಶದಲ್ಲಿ ಸದ್ಯ ಅಳಿವಿನಂಚಿನಲ್ಲಿರುವ ಕೃಷ್ಣ ಮೃಗಗಳ ಸಂರಕ್ಷಣೆ ಬಹಳ ಮುಖ್ಯವಾಗಿದೆ. ಇಂತಹ ಕೃಷ್ಣ ಮೃಗಗಳನ್ನ ಜನರು ಕೂಡ ನೋಡಲಿ ಅಂತಾ ಬೆಳಗಾವಿಯ ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಗದಗ ಜಿಲ್ಲೆಯಿಂದ ತರಿಸಿ ಇರಿಸಲಾಗಿತ್ತು. 38 ಕೃಷ್ಣ ಮೃಗಗಳ ಪೈಕಿ ಎರಡೇ ದಿನದಲ್ಲಿ 28 ಕೃಷ್ಣ ಮೃಗಗಳು ನಿಗೂಢವಾಗಿ ಸಾವನ್ನಪ್ಪಿದ್ದು ಸಾಕಷ್ಟು ಅನುಮಾನ ಹುಟ್ಟುವಂತೆ ಮಾಡಿದೆ.

   ಈ ಮೊದಲು ಕೆಲ ವರ್ಷದ ಹಿಂದೆ ಬೆಳಗಾವಿ ಭೂತರಾಮನಟ್ಟಿ ಕಿರು ಪ್ರಾಣಿ ಸಂಗ್ರಹಾಲಯದಲ್ಲಿ ಹುಲಿ ಹಾಗೂ ಸಿಂಹಗಳ ಸಾವಿನ ಬಗ್ಗೆ ವರದಿಯಾಗಿತ್ತು. ಇಲ್ಲಿ ಸಿಂಹ ಮತ್ತು ಹುಲಿ ಇವೇರಡು ವಯೋಸಹಜದಿಂದ ಮೃತಪಟ್ಟಿದ್ದವು ಎಂದು ಅರಣ್ಯ ಇಲಾಖೆ ಸ್ಪಷ್ಟನೆ ನೀಡಿತ್ತು.    

     ಅದರ ಬಳಿಕ ಇಲ್ಲಿ ಈಗ 28 ಕೃಷ್ಣ ಮೃಗಗಳ ಸಾವಿನ ಸರದಿ ನಡೆದಿದ್ದು, ಒಂದಲ್ಲ ಎರಡಲ್ಲ 28 ಕೃಷ್ಣ ಮೃಗಗಳ ಸಾವಿನ ಸುದ್ದಿಯು ಹೊರಬಿದ್ದಿರುವದು ಹಲವಾರು ಅನುಮಾನಕ್ಕೆ ಕಾರಣವಾಗಿದೆ. ಕೃಷ್ಣ ಮೃಗಗಳಿಗೆ ಅನಾರೋಗ್ಯ ಇದ್ದಿದ್ದರೆ 24 ಗಂಟೆಯಲ್ಲಿ ಅದು ಒಂದೇ ವೇಳೆಯಲ್ಲಿ 28 ಕೃಷ್ಣ ಮೃಗಗಳು ಹೇಗೆ ಅಸುನಿಗಲು ಸಾದ್ಯ ಎನ್ನುವ ಯಕ್ಷಪ್ರಶ್ನೆ ನಾಗರಿಕರಲ್ಲಿ ಮನೆ ಮಾಡಿದೆ. 

   ಬೆಳಗಾವಿ ಸುತ್ತ ಮತ್ತಲಿನ ಜಿಲ್ಲೆಯ ಜನರಿಗೆ ಅನುಕೂಲ ಆಗಲಿ ಮೈಸೂರಿಗೆ ಪ್ರಾಣಿಗಳನ್ನ ನೋಡಲು ಹೋಗಲು ಆಗದವರು ಬೆಳಗಾವಿಯಲ್ಲೇ ಪ್ರಾಣಿಗಳಲ್ಲ ಕಣ್ತುಂಬಿಕೊಳ್ಳಲಿ ಅಂತಾ ಸತೀಶ ಜಾರಕಿಹೊಳಿ ಅವರು ಅರಣ್ಯ ಸಚಿವರಿದ್ದ ಸಂದರ್ಭದಲ್ಲಿ ಕಿರು ಮೃಗಾಲಯಕ್ಕೆ ಹುಲಿ, ಸಿಂಹ, ಚಿರತೆ ಸೇರಿದಂತೆ ಜಿಂಕೆ, ಕೃಷ್ಣ ಮೃಗ ಮೊಸಳೆ ಸೇರಿ ಎಲ್ಲಾ ರೀತಿಯ ಪ್ರಾಣಿಗಳನ್ನ ತಂದು ಇರಿಸಲಾಯಿತು. 

   ಅಂದಿನಿಂದ ಬರೀ ಬೆಳಗಾವಿಯಷ್ಟೇ ಅಲ್ಲದೇ ಅಕ್ಕಪಕ್ಕದ ಜಿಲ್ಲೆ ಹಾಗೂ ನೆರೆಯ ಮಹಾರಾಷ್ಟöçದಿಂದಲೂ ಪ್ರವಾಸಿಗರು ಬಂದು ಇಲ್ಲಿರುವ ಪ್ರಾಣಿಗಳನ್ನ ಕಣ್ತುಂಬಿಕೊಂಡು ಇಡೀ ದಿನ ಮೃಗಾಲಯದಲ್ಲಿ ಕಳೆದು ಹೋಗ್ತಿದ್ದಾರೆ. ಮೃಗಾಲಯದಲ್ಲಿ ಬಂದವರನ್ನ ದರ್ಶನ ನೀಡ್ತಾ ತಮ್ಮಷ್ಟಕ್ಕೆ ಓಡಾಡಿಕೊಂಡಿದ್ದ ಕೃಷ್ಣ ಮೃಗಗಳು ಸಾವನ್ನಪ್ಪಿ ಬೆಂಕಿಯಲ್ಲಿ ಬೂದಿಯಾಗಿದ್ದು, ಬೆಳಗಾವಿ ಜನರು ಬೆಚ್ಚಿ ಬೀಳುವಂತೆ ಮಾಡಿದೆ. 

   ಸದ್ಯ 28 ಕೃಷ್ಣ ಮೃಗಗಳು ಸಾವನ್ನಪ್ಪಿದ್ರೇ, ಹತ್ತು ಕೃಷ್ಣ ಮೃಗಗಳು ಬದುಕಿದ್ದು ಅವುಗಳನ್ನ ಕೂಡ ನಿಗಾದಲ್ಲಿ ಇರಿಸಲಾಗಿದೆ. ಈಗಾಗಲೇ ಅವುಗಳಿಗೂ ಮುಂಜಾಗ್ರತಾ ಕ್ರಮವಾಗಿ ಔಷಧಿ ನೀಡಿ ಕಾಳಜಿ ವಹಿಸಿದ್ದು ಹತ್ತಾದ್ರೂ ಬದುಕಲಿ ಅಂತಾ ಪ್ರಯತ್ನ ನಡೆದಿವೆ. ಒಟ್ಟಿನಲ್ಲಿ ಕೃಷ್ಣ ಮೃಗಗಳು ನಿಗೂಢವಾಗಿ ಸಾವನ್ನಪ್ಪಿರುವುದು ಅರಣ್ಯ ಇಲಾಖೆಯವರ ಬೇಜವಾಬ್ದಾರಿಗಾ ಅಥವಾ ಕಾಯಿಲೆ ಬಂದು ಸತ್ತಿವೆ ಅನ್ನೋದು ತನಿಖೆಯಿಂದ ಹೊರ ಬರಲಿದೆ. 

   ಕಾಯಿಲೆಯಿಂದ ಸತ್ರೂ ಮೊದಲೇ ಎಂಟು ಸತ್ತಾಗ ಎಚ್ಚೆತ್ತುಕೊಂಡು ಇನ್ನೂಳಿದವುಗಳನ್ನಾದ್ರೂ ಬದುಕಿಸಿಕೊಳ್ಳಬೇಕಿದ್ದ ವೈದ್ಯರು, ಅರಣ್ಯ ಇಲಾಖೆ ಸಿಬ್ಬಂದ ನಿರ್ಲಕ್ಷ್ಯ ಮೇಲ್ನೊಟಕ್ಕೆ ಕಂಡು ಬರ್ತಿದ್ದು ಈ ನಿಟ್ಟಿನಲ್ಲಿ ಕೂಡ ತನಿಖೆ ಆಗಲಿ ಎನ್ನುವದು ಪ್ರಾಣಿ ಪ್ರೀಯರ ಒತ್ತಾಯವಾಗಿದೆ. 

   ಮೊದಲಿಗೆ ಹುಲಿ ಬಲಿ, ಆಮೇಲೆ ಸಿಂಹ ಈಗ 28 ಕೃಷ್ಣ ಮೃಗಗಳು ಇನ್ನು ಮುಂದೆ ಯಾವ ಪ್ರಾಣಿಯ ಸಾವಿನ ಸರದಿ ಎಂಬ ಸಂಶಯ ಪ್ರಾಣಿ ಪ್ರೀಯರಲ್ಲಿ ವ್ಯಕ್ತವಾಗುತಿದ್ದು, ಭೂತರಾಮಟ್ಟಿ ಪ್ರಾಣಿ ಸಂಗ್ರಹಾಲಯದಲ್ಲಿ ಪ್ರಾಣಿಗಳ ಸಾವಿನ ಸರದಿ ನಡೆಯುತ್ತಿದ್ದು, ಇದರ ಬಗ್ಗೆ ಕಳವಳ ವ್ಯಕ್ತವಾಗತೊಡಗಿದೆ.  

ಸುದ್ದಿ ಓದಿ