ತನಗೆ ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಭೂಪ : ಹಾವು ನೋಡಿ ಜನರು ಸಿಬ್ಬಂದಿ ಕಕ್ಕಾಬಿಕ್ಕಿ
ಬೆಳಗಾವಿ : ತನಗೆ ಕಚ್ಚಿದ ಹಾವಿನ ಜೊತೆಗೆ ಯುವಕನೋರ್ವ ವೈದ್ಯರಿಗೆ ತೋರಿಸಲು ಮುಂದಾದಾಗ ಆಸ್ಪತ್ರೆ ಬಳಿ ಇದ್ದ ಜನ ಕಕ್ಕಾಬಿಕ್ಕಿಯಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ತಾಲೂಕಿನ ಹುಂಚಾನಟ್ಟಿ ಗ್ರಾಮದ ಶಾಹೀದ್ ಎಂಬಾತ ಹಾವು ಹಿಡಿದು ನಂತರ ಅದನ್ನು ಸುರಕ್ಷಿತ ಸ್ಥಳಕ್ಕೆ ಬಿಡಲು ಮುಂದಾಗಿದ್ದನು. ಆದರೆ, ಆ ಸಂದರ್ಭದಲ್ಲಿ ಆ ಹಾವು ಆತನಿಗೆ ಕಚ್ಚಿತ್ತು. ಆಗ ಆತ ಹಾವಿನೊಂದಿಗೆ ಬೆಳಗಾವಿಗೆ ಬಂದಿದ್ದಾನೆ. ಅದು ಯಾವ ಹಾವು ? ಅದರಲ್ಲಿ ವಿಷ ಎಷ್ಟು ಇರುತ್ತದೆ ? ಕಚ್ಚಿದ ನಂತರ ಹೇಗೆ ವಿಷ ಬಿಡುತ್ತದೆ ಎನ್ನುವುದನ್ನು ವೈದ್ಯರಿಗೆ ತೋರಿಸಲು ಡಬ್ಬದಲ್ಲಿ ಹಾವನ್ನು ಹಾಕಿಕೊಂಡು ಆಗಮಿಸಿದ್ದನು.
ಇದನ್ನು ನೋಡಿದ ಜನ ಭಯಗೊಂಡು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ. ಅದನ್ನು ನೋಡಿದ ಆತ ಹಾವನ್ನು ವೈದ್ಯರಿಗೆ ತೋರಿಸದೆ ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಂಡು ಅಲ್ಲಿಂದ ಜಾಗ ಖಾಲಿ ಮಾಡಿದ್ದಾನೆ.