ಸಿಡಿ ಕಾಮಗಾರಿಗೆ ಭೂಮಿ ಪೂಜೆ.
ಮಹಾಲಿಂಗಪುರ: ಕರ್ನಾಟಕ ನೀರಾವರಿ ನಿಗಮದ 3. 50 ಲಕ್ಷ ಅನುದಾನದಡಿಯಲ್ಲಿ ಕೆಂಗೇರಿಮಡ್ಡಿಯ ನಂದಗಾವ ಅಂಚು ಕಾಲುವೆಯ ಸಿಡಿ ನಿರ್ಮಾಣ ಕಾಮಗಾರಿಗೆ ಸಂಸದ ಪಿ. ಸಿ. ಗದ್ದಿಗೌಡರ ಹಾಗೂ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿದ್ದು ಸವದಿ ಭೂಮಿ ಪೂಜೆ ನೆರವೇರಿಸಿದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಸನಗೌಡ ಪಾಟೀಲ, ಪುರಸಭಾ ಅಧ್ಯಕ್ಷ ಬಸವರಾಜ ಹಿಟ್ಟಿನಮಠ, ಈರ್ಪ ದಿನ್ನಿಮನಿ, ಮಹಾಂತೇಶ ಹಿಟ್ಟಿನಮಠ, ಭಾಜಪ ಗ್ರಾಮೀಣ ಘಟಕದ ಅಧ್ಯಕ್ಷ ಸುರೇಶ ಅಕ್ಕಿವಾಟ, ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ ಕುಳ್ಳೊಳ್ಳಿ, ನಗರ ಘಟಕದ ಅಧ್ಯಕ್ಷ ಶ್ರೀಮಂತ ಹಳ್ಳಿ, ಪುರಸಭಾ ಸದಸ್ಯರಾದ ಶೇಖರ ಅಂಗಡಿ, ಚನ್ನಬಸು ಯರಗಟ್ಟಿ, ರಾಜು ಚಮಕೇರಿ, ತಿಪ್ಪಣ್ಣ ಬಂಡಿವಡ್ಡರ, ಮುಖಂಡರಾದ ಜಿ. ಎಸ್. ಗೊಂಬಿ, ಡಾ. ಅಶೋಕ ದಿನ್ನಿಮನಿ, ಶಿವಾನಂದ ಅಂಗಡಿ,ಬಸವರಾಜ ಚಮಕೇರಿ, ಚನ್ನಪ್ಪ ಪಟ್ಟಣಶೆಟ್ಟಿ, ವಿಷ್ಣುಗೌಡ ಪಾಟೀಲ, ಹರೀಶ ನಾಯಕ, ಮಹೇಶ ಜಿಡ್ಡಿಮನಿ, ಮಹೇಶ ಮುಕುಂದ ಇತರರಿದ್ದರು.