25 ಕೋಟಿ ರೂ ವೆಚ್ಚದ ಕಾಮಗಾರಿಗಳಿಗೆ ಶಾಸಕ ಸಿ.ಎಸ್ ನಾಡಗೌಡ ಗುದ್ದಲಿ ಪೂಜೆ
ಮುದ್ದೇಬಿಹಾಳ 15: ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳ ಸುಮಾರು 25 ಕೋಟಿ ರೂ ವೆಚ್ಚದ ಕಾಮಗಾರಿಗಳಿಗೆ ಸಾಬೂನು ಮತ್ತು ಮಾರ್ಜಕ ನಿಗಮ ನಿಯಮಿತ ಅಧ್ಯಕ್ಷ, ಶಾಸಕ ಅಪ್ಪಾಜಿ ಸಿ.ಎಸ್ ನಾಡಗೌಡ ಗುದ್ದಲಿ ಪೂಜೆ ನೆರವೇರಿಸಿದರು.
ಲೋಕೋಪಯೋಗಿ ಇಲಾಖೆಯಿಂದ 7 ಕೋಟಿ ರೂ ವೆಚ್ಚದಲ್ಲಿ ಕೊಳೂರದಿಂದ ನೇಬಗೇರಿ, ನೇಬಗೇರಿಯಿಂದ ದೇವೂರ ಕಲ್ಪಿಸುವ 10.3 ಕಿ.ಮೀ ರಸ್ತೆ, 5 ಕೋಟಿ ರೂ ವೆಚ್ಚದ 2.5 ಕಿ.ಮೀ ಮುದ್ನಾಳ್ ಕ್ರಾಸ್ ನಿಂದ ಕೊಳೂರು ಮುಖ್ಯ ರಸ್ತೆ, 5 ಕೋಟಿ ರೂ ವೆಚ್ಚದ ಢವಳಗಿಯಿಂದ ಬಸರಕೋಡ ಕಲ್ಪಿಸುವ ರಸ್ತೆ, 1.75 ಲಕ್ಷ ರೂ ವೆಚ್ಚದ ಅಗಸಬಾಳದಿಂದ ಅಗಸಬಾಳ್ ಕ್ರಾಸ್ ವರಿಗೂ ರಸ್ತೆ, 3.50 ಕೋಟಿ ರೂ ವೆಚ್ಚದ ಆಲಕೊಪ್ಪರ ಮುಖ್ಯ ರಸ್ತೆ ಹಾಗೂ 3 ಕೋಟಿ ರೂ ಹುಲ್ಲೂರು ಗ್ರಾಮದಿಂದ ಕಾಳಗಿವರೆಗೆ ರಸ್ತೆ ಸುಧಾರಣೆ ಹಾಗೂ ಪಟ್ಟಣದ ಮಾರುತಿನಗರದಲ್ಲಿ 6.5 ಕೋಟಿ ವೆಚ್ಚದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಮತ್ತು ಅಲ್ಪಸಂಖ್ಯಾತರ ಇಲಾಖೆ ಯಿಂದ ಅಲ್ಪಸಂಖ್ಯಾತರರು ವಾಸಿಸುವ ಹೊರಪೇಟೆಗಲ್ಲಿಯಲ್ಲಿ 1.5 ಕೋಟಿ ವೆಚ್ಚದಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಿ ಶಾಸಕರು ಮಾತನಾಡಿದರು.
ಗುತ್ತಿಗೆದಾರರು ಕಾಮಗಾರಿಗಳನ್ನು ಉತ್ತಮ ಗುಣಮಟ್ಟದ ಕೆಲಸವನ್ನು ಮಾಡಬೇಕು. ಮಳೆಗಾಲ ಬರುವಷ್ಟರಲ್ಲಿ ನಿಗದಿತ ಅವಧಿ 6 ತಿಂಗಳ ಒಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ರಸ್ತೆಯ ಅಗಲೀಕರಣ ಮೊದಲು 3.5 ಮೀಟರ್ ಇತ್ತು. ಈಗ 5.5 ಮೀಟರ್ ಮಾಡಲಾಗಿದೆ. ಇದರಿಂದ ಕಬ್ಬಿನ ಟ್ರಾಕ್ಟರ್ ಇನ್ನೀತರ ವಾಹನಗಳು ಮುಗುಚಿ ಬಿಳುವುದು ಕಡಿಮೆ ಆಗುವುದಲ್ಲದೇ ಅಪಘಾತಗಳು ಕಡಿಮೆ ಆಗುತ್ತವೆ. ರಸ್ತೆ ಅಗಲ ಆಗುತ್ತಿರುವ ಕಾರಣಕ್ಕೆ ಪಕ್ಕದ ರೈತರಗಳು ಸಹಕರಿಸಿ ರಸ್ತೆ ಮಾಡಿಸಿಕೊಳ್ಳಬೇಕು ಎಂದರು.
ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಮತಕ್ಷೇತ್ರದ ಅಭಿವೃದ್ಧಿಗೆ ಸೇವಕನಾಗಿ ಕೆಲಸ ಮಾಡುತ್ತಿದ್ದೇನೆ. ನಿಮ್ಮೆಲ್ಲರ ಬೇಡಿಕೆಗಳನ್ನು ಇನ್ನೂಳಿದ ಆಡಳಿತದ ಅಧಿಕಾರ ಅವಧಿಯಲ್ಲಿ ಸಂಪೂರ್ಣಗೊಳಿಸುವ ಸಂಪೂರ್ಣ ಪ್ರಯತ್ನ ಮಾಡುತ್ತೇನೆ. ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ. ಅದರಂತೆ ಇನ್ನುಳಿದ ಕೆಲಸಗಳನ್ನು ಮುಂದಿನ ದಿನಗಳಲ್ಲಿ ಗ್ರಾಮದ ಎಲ್ಲ ಸಮಸ್ಯೆಗಳಿಗೆ ಹಾಗೂ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಶಾಸಕರು ಭರವಸೆ ನೀಡಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರದ ನೇತೃತ್ವದ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಅನುಷ್ಠಾನಗೊಳಿಸುವ ಮೂಲಕ ಜನಪರ ಆಡಳಿತ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಮತಕ್ಷೇತ್ರಸ ಅಭಿವೃದ್ಧಿ ಗಾಗಿ ಪ್ರಥಮ ಅಂತದಲ್ಲಿ 25 ಕೋಟಿ ರೂಗಳ ವಿಶೇಷ ಅನುದಾನದಡಿಯಲ್ಲಿ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯ ನೀಡುವುದರೊಂದಿಗೆ ಮಾದರಿ ಮತಕ್ಷೇತ್ರ ಪಣ ತೊಟ್ಡಿದ್ದು ಇರುತ್ತದೆ. ಇದಕ್ಕೆ ಜನರ ಸಹಕಾರ ಅತ್ಯಗತ್ಯವಾಗಿದೆ ಎಂದರು.
ತಾಲೂಕು ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಗುತ್ತಿಗೆದಾರ ಸಿ.ಬಿ ಅಸ್ಕಿ, ಕೆ.ಎಸ್ ಪಾಟೀಲ್, ಯಲ್ಲಪ್ಪ ಹಡಲಗೇರಿ, ಚಿದಾನಂದ ಸೀತಿಮನಿ, ಗ್ರಾ.ಪಂ ಅದ್ಯಕ್ ಮಂಜು ಪಾಟೀಲ್, ಸಾಬು ವಾಲಿಕಾರ, ವಿಜಯ್ ರಾಠೋಡ, ಸಂಗು ಚಲವಾದಿ, ಮುತ್ತಣ್ಣ ಕಟ್ಟಿಮನಿ, ಹಣಮಂತ ತಳ್ಳಿಕೇರಿ, ಹಣಮಂತ ಹುಗ್ಗಿ, ಭೀಮಸಿ ಲಮಾಣಿ, ಲಕ್ಷ್ಮಣ್ ಲಮಾಣಿ, ರಮೇಶ್ ಇಂಗಳಗಿ ಸೇರಿದಂತೆ ಮುಂತಾದವರಿದ್ದರು.