ರಸ್ತೆ ಕಾಮಗಾರಿಗೆ ಶಾಸಕ ಸಿದ್ದು ಸವದಿ ಭೂಮಿಪೂಜೆ
ಮಹಾಲಿಂಗಪುರ 11; ಪುರಸಭೆಯ 2021-22 ನೇ ಸಾಲಿನ 15 ನೇ ಹಣಕಾಸು ಸಾಮಾನ್ಯ ಮೂಲ ಅನುದಾನದಡಿಯಲ್ಲಿ ಸ್ಥಳೀಯ 7 ನೇ ವಾರ್ಡಿನ ಮಲ್ಲಿಕಾರ್ಜುನ ದೇವಸ್ಥಾನದಿಂದ ರಾಜು ಜಂಬಗಿಯವರ ಮನೆಯವರೆಗಿನ ಅಂದಾಜು 4 ಲಕ್ಷ ರೂ. ವೆಚ್ಚದ ರಸ್ತೆ ಡಾಂಬರೀಕರಣಕ್ಕೆ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿದ್ದು ಸವದಿ ಭೂಮಿಪೂಜೆ ನೆರವೇರಿಸಿದರು.
ಪುರಸಭಾ ಅಧ್ಯಕ್ಷೆ ಸ್ನೇಹಲ್ ಅಂಗಡಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಸನಗೌಡ ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ, ಮುಖಂಡರಾದ ಮಹಾಲಿಂಗಪ್ಪ ಕುಳ್ಳೊಳ್ಳಿ, ಶ್ರೀಮಂತ ಹಳ್ಳಿ, ಜಿ.ಎಸ್.ಗೊಂಬಿ, ಈರ್ಪ ದಿನ್ನಿಮನಿ, ಮನೋಹರ ಶಿರೋಳ, ಪುರಸಭಾ ಸದಸ್ಯರಾದ ರವಿ ಜವಳಗಿ, ಶೇಖರ ಅಂಗಡಿ, ಬಸವರಾಜ ಹಿಟ್ಟಿನಮಠ, ಚನ್ನಬಸು ಯರಗಟ್ಟಿ, ಸಜನ್ ಸಾಬ ಪೆಂಡಾರಿ, ಲಕ್ಕಪ್ಪ ಚಮಕೇರಿ, ಶಿವಾನಂದ ಅಂಗಡಿ, ಮಹಾಲಿಂಗಪ್ಪ ಮುದ್ದಾಪುರ, ಚನ್ನಪ್ಪ ರಾಮೋಜಿ, ಬಸವರಾಜ ಚಮಕೇರಿ, ಶಂಕರಗೌಡ ಪಾಟೀಲ, ಜಮೀರ್ ಯಕ್ಸಂಬಿ, ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಹಾಗೂ ಅಭಿಯಂತರ ಡಿ.ಬಿ.ಪಠಾಣ ಇತರರು ಇದ್ದರು.