ಮಹಲಿಂಗಪುರ

ಎಪಿಎಂಸಿ ಅಧ್ಯಕ್ಷರಾಗಿ ಭೀಮಪ್ಪ ಆಯ್ಕೆ

ಎಪಿಎಂಸಿ ಅಧ್ಯಕ್ಷರಾಗಿ ಭೀಮಪ್ಪ ಆಯ್ಕೆ

ಮಹಾಲಿಂಗಪುರ 09: ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ನೂತನ ಅಧ್ಯಕ್ಷರಾಗಿ ಮಂಟೂರ ಕ್ಷೇತ್ರದ ಮೆಳ್ಳಿಗೇರಿಯ ಭೀಮಪ್ಪ ಹನುಮಪ್ಪ ತಳವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾ ಅಧಿಕಾರಿ ರಬಕವಿ ಬನಹಟ್ಟಿ ತಹಸಿಲ್ದಾರ ಪ್ರಶಾಂತ ಚನಗೊಂಡ ಘೋಷಿಸಿದರು.

ಕಣದಲ್ಲಿ ಪ್ರತಿಸ್ಪರ್ಧಿಗಳಿಲ್ಲದೆ, ಭೀಮಪ್ಪ ತಳವಾರ ಇವರ ನಾಮಪತ್ರವೂ ಕ್ರಮಬದ್ಧವಾಗಿ, ಸ್ವೀಕೃತಗೊಂಡು ಅವಿರೋಧ ಆಯ್ಕೆಯಾಗಲು ಇವರಿಗೆ ಮುಧೋಳದ ಅಪ್ಪಾಸಾಹೇಬ ಪವಾರ ಹಾಗೂ ಮಹಾಲಿಂಗಪುರದ ವೆಂಕಣ್ಣ ಗೊಬ್ಬರದ ಅನುಮೋದಕರಾಗಿದ್ದರು.ಚುನಾವಣಾ ಪ್ರಕ್ರಿಯೆಯಲ್ಲಿ ಒಟ್ಟು 15ಸದಸ್ಯರು ಹಾಜರಿದ್ದು, ಎಪಿಎಂಸಿಯ ಸಭಾ ಭವನದಲ್ಲಿ ಶಾಂತರೀತಿಯಿಂದ ಚುನಾವಣಾ ಪ್ರಕ್ರಿಯೆ ಜರುಗಿತು.  

ಉಪಾಧ್ಯಕ್ಷ ಲಕ್ಷ್ಮಣ ಶಿವನಪ್ಪ ಮಾದರ, ಸದಸ್ಯರಾದ ಶ್ರೀಶೈಲಪ್ಪ ಉಳ್ಳಾಗಡ್ಡಿ, ಸಾಂಯವ್ವ ವಂಕಿ, ರಾಮಪ್ಪ ಮಳಲಿ, ಈರಪ್ಪ ಕಿತ್ತೂರ್, ಶೋಭಾ ಬಿ. ಪಾಟೀಲ್, ವೆಂಕಪ್ಪ ಗಿಡ್ಡಪ್ಪನವರ್, ಬಸಪ್ಪ ಮಾಳಿ, ವರ್ತಕ ಕ್ಷೇತ್ರದ ಬಸವರಾಜ್ ಡಫಳಾಪೂರ, ನಾಮನಿರ್ದೇಶಿತ ಸದಸ್ಯರಾದ ವಂದನಾ ಪ್ರತಾಪ ಚಂದನಶಿವ, ಯಲ್ಲಪ್ಪ ತಮದಡ್ಡಿ, ಶಂಕರಗೌಡ ಪಾಟೀಲ, ಹಿರಿಯರಾದ ಆರ್.ಎಸ್ ತಳೇವಾಡ, ಆರ್. ಟಿ ಪಾಟೀಲ, ಎಂ.ಎಂ.ಎತ್ತಿನಮಠ, ಕುಮಾರ ಹುಲಕುಂದ, ಮಾರುತಿ ಕರೆನ್ನವರ್, ಹೊಳಬಸು ದಂಡೆನ್ನವರ್, ಕೃμÀ್ಣ ಚಿಕ್ಕಣ್ಣವರ್, ಸದಾಶಿವ ಇಟಕ್ಕಣ್ಣವರ್, ಚನಬಸು ಮುತ್ತೂರ್, ಭೀಮಶೀ ಬಂದಿ, ಚಿದಾನಂದ ಪಂಚಕಟ್ಟಿಮಠ, ಮಡಿವಾಳಯ್ಯ ಕಂಬಿ ಇನ್ನಿತರ ಬಿಜೆಪಿಯ ನಾಯಕರು ಹಾಗೂ ಕಾರ್ಯಕರ್ತರು ಹಾಗೂ ಎಪಿಎಂಸಿ ಸಿಬ್ಬಂದಿ ವರ್ಗದ ಕಾರ್ಯದರ್ಶಿ ಎಸ್ ಎನ್ ಪತ್ತಾರ, ಬಿ.ಬಿ ಸಾಳುಂಕೆ, ಬಿ.ಬಿ ಬಸ್ಸೆಟ್ಟಿ, ಆರ್.ಎಚ್ ಭೋಜನವರ್ ಹಾಗೂ ಬಿ.ಎಚ್ ರಾಠೋಡ್, ಬಿ.ಪಿ ಬಾಡಗಿ, ಎ.ಎಲ್. ಕಾಂಬಳೆ, ಬಿ.ಎನ್. ಕುಂಬಾರ, ಕೆ.ಬಿ ಹಣಬರ್ ಇನ್ನಿತರರಿದ್ದರು.

ಸುದ್ದಿ ಓದಿ