ಲಸಿಕೆ ಕಾರ್ಯಕ್ರಮಕ್ಕೆ ಭೀಮಪ್ಪ ತಳವಾರ ಚಾಲನೆ
ಮಹಾಲಿಂಗಪುರ 08: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಮಂಗಳವಾರ ಮುಂಜಾನೆ 10 ಗಂಟೆಗೆ ಕೊರೊನಾ ಲಸಿಕೆ ಕಾರ್ಯಕ್ರಮಕ್ಕೆ ಎಪಿಎಂಸಿ ಅಧ್ಯಕ್ಷ ಭೀಮಪ್ಪ ತಳವಾರ ಚಾಲನೆ ನೀಡಿದರು.ವರ್ತಕರು, ದಲಾಲರು, ಹಮಾಲರು, ವೇಮನರು ಹಾಗೂ ಅಂಗಡಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಸಹ ಕೊರೊನಾ ಲಸಿಕೆಯನ್ನು ಪಡೆಯುವ ಮೂಲಕ ಅಭಿಯಾನದ ಸದುಪಯೋಗಪಡಿಸಿಕೊಂಡರು.
ದಲಾಲ ವರ್ತಕರ ಸಂಘದ ಅಧ್ಯಕ್ಷ ಮಹಾಲಿಂಗಪ್ಪ ಕೋಳಿಗುಡ್ಡ, ಎಪಿಎಂಸಿ ಕಾರ್ಯದಶರ್ಿ ಬಿ.ಬಿ ಸಾಳುಂಕೆ ವ್ಯಾಪಾರಸ್ಥರಾದ ಗುರುನಾಥ್ ಜಮಖಂಡಿ, ಜಿ.ಜಿ ಹುಬ್ಬಳ್ಳಿ ಹಾಗೂ ಎಪಿಎಂಸಿ ಅಧಿಕಾರಿಗಳಾದ ಆರ್.ಎಚ್ ಭೋಜನ್ನವರ್, ಬಿ.ಪಿ.ಬಾಡಗಿ, ಬಿ.ಎನ್.ಕುಂಬಾರ, ಎ.ಎಲ್.ಕಾಂಬ್ಳೆ ಪುರಸಭೆಯ ಸಿಬ್ಬಂದಿ ಹಾಗೂ ಆರೋಗ್ಯ ಸಹಾಯಕರು ಉಪಸ್ಥಿತರಿದ್ದರು.ಮಹಾಲಿಂಗಪುರ, ಕೃಷಿ ಉತ್ಪನ್ನ ಮುಖ್ಯ ಮಾರುಕಟ್ಟೆಯ ಅಧ್ಯಕ್ಷ ಹಾಗೂ ಇನ್ನೀತರೆ ಗಣ್ಯಮಾನ್ಯರು ಈ ಕೊರೊನಾ ಲಸಿಕಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು