ಜನತಾ ಬ್ಯಾಂಕ್ ಉಪಾಧ್ಯಕ್ಷರಾಗಿ ಭೀಮಗೌಡ ಕರ್ಣವಾಡಿ
ಹಾರೂಗೇರಿ 21: ಇಲ್ಲಿನ ಪ್ರತಿಷ್ಠಿತ ದಿ ಜನತಾ ಸಹಕಾರ ಬ್ಯಾಂಕ್ ನಿ ಹಾರೂಗೇರಿ ಇದರ ನೂತನ ಉಪಾಧ್ಯಕ್ಷರಾಗಿ ಭೀಮಗೌಡ ಸಾತಪ್ಪ ಕರ್ಣವಾಡಿ ಆಯ್ಕೆಯಾಗಿದ್ದಾರೆ. ಬ್ಯಾಂಕಿನ ಆಡಳಿತ ಮಂಡಳಿ ಸಭೆಯಲ್ಲಿ ನಡೆದ ಚುನಾವಣೆಯಲ್ಲಿ ಅವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷ ರಾಜಶೇಖರ ಪಾಟೀಲ, ವ್ಯವಸ್ಥಾಪಕ ಎಸ್.ಎಸ್. ಅಮರಶೆಟ್ಟಿ, ಆಡಳಿತ ಮಂಡಳಿ ಸದಸ್ಯರು ಹಾಗೂ ಬ್ಯಾಂಕಿನ ಸಿಬ್ಬಂದಿ ಉಪಸ್ಥಿತರಿದ್ದರು.