ನಿರ್ಮಲ ಭಕ್ತಿಯಿಂದಲೇ ದೇವರನ್ನು ಒಲಿಸಿಕೊಂಡ ದೇವ ಮಾನವ ಕನಕದಾಸರು : ಶೇಖರ ಅಂಗಡಿ
ಮಹಾಲಿಂಗಪುರ 30 : ನಿರ್ಮಲ ಭಕ್ತಿಯಿಂದ ಆ ದೇವರನ್ನು ಒಲಿಸಿಕೊಂಡ ಶ್ರೇಷ್ಠ ಕನಕದಾಸರ ಮಹಿಮೆ ಅಪಾರ ಕನಕದಾಸರನ್ನು ಬರೀ ಕುರುಬ ಸಮುದಾಯಕ್ಕೆ ಸೀಮಿತ ಮಾಡಬಾರದು, ಮಹಾತ್ಮರಿಗೆ ಜಾತಿ ಇಲ್ಲ ಅವರು ಜಾತಿ ವ್ಯವಸ್ಥೆ ಮೀರಿ ಬೆಳೆದು ವಿಶ್ವ ಮಾನವರಾದವರು ಅವರ ಜಯಂತಿಯನ್ನು ವರ್ಷಕೊಮ್ಮೆ ಮಾಡದೇ ಮಹಾತ್ಮರ ಜಯಂತಿಗಳು ನಿತ್ಯ ನೂತನವಾಗಿ ಆಚರಿಸುವಂತಾಗಬೇಕು ಆಗಲೇ ಆಚರಣೆಗೆ ಅರ್ಥ ಮತ್ತು ಗೌರವ ಬರುತ್ತದೆ ಎಂದು ಪುರಸಭೆ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಶೇಖರ ಅಂಗಡಿ ಹೇಳಿದರು.
ನಗರದ ಶ್ರೀ ಕನಕದಾಸ ಬ್ಯಾಂಕಿನಲ್ಲಿ ನಡೆದ ಕನಕದಾಸರ 536 ನೇ ಜಯಂತಿಯನ್ನು ಕನಕದಾಸರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಉದ್ಘಾಟಸಿ ಮಾತನಾಡಿದ ಅವರು ಕನಕದಾಸರು ಜಾತಿ ವ್ಯವಸ್ಥೆಯನ್ನು ವಿರೋಧಿಸಿದರು ಕುಲ ಕುಲ ಎಂದು ಬಡಿದಾಡದಿರಿ ನಿಮ್ಮ ಕುಲದ ನೆಲೆಯನೆನಾದರೂ ಬಲ್ಲಿರಾ ಉಸಿರಾಡುವ ಗಾಳಿ ಯಾವ ಕುಲ,ಕತ್ತಲೆ ಹೋಗಲಾಡಿಸುವ ಬೆಳಕು ಯಾವ ಕುಲ, ಕುಡಿಯುವ ನೀರು ಯಾವ ಕುಲ, ತಿನ್ನುವ ಅನ್ನ ಯಾವ ಕುಲ ಇವುಗಳಿಗೆ ಹೇಗೆ ಜಾತಿ ಇಲ್ಲವೋ ಹಾಗೆ ಭೂಮಿ ಮೇಲೆ ಹುಟ್ಟಿದ ಮನುಷ್ಯರೆಲ್ಲಾ ಒಂದೇ ಕುಲ ಮನುಜ ಕುಲ ಎಂದು ಸಾರಿದರು ಮನುಜ ಕುಲದಲ್ಲಿ ಹುಟ್ಟಿ ಭಕ್ತಿಯಿಂದಲೇ ಪ್ರತ್ಯಕ್ಷ ದೇವರನ್ನು ಕಂಡವರು ಯಾರಾದರೂ ಇದ್ದರೇ ಅವರೆ ವಿಶ್ವ ಮಾನವ ಭಕ್ತ ಶೇಷ್ಠ ಕನಕದಾಸರು,ಎಂದು ಹೇಳಿದರು.
ನಂತರ ಮಾತನಾಡಿದ ಬ್ಯಾಂಕಿನ ಅಧ್ಯಕ್ಷರಾದ ಮಹಾಲಿಂಗಪ್ಪ ಜಕ್ಕಣ್ಣವರ ಕನಕದಾಸರು ಸಕಲ ಮನುಕುಲ ಉದ್ದಾರಕರಾಗಿದ್ದರು. ಸಮಾನತೆ ಸಾರಿದ ಸಂತ ಜಗತ್ತಿನ ಮಹಾನ ಚೇತನ, ವಿಶ್ವ ಗುರು ದಾಸ ಶ್ರೇಷ್ಠ ದಾಸ ಪರಂಪರೆಯಲ್ಲಿ ಇವರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ ಅವರು ರಚಿಸಿದ ಕೃತಿಗಳು ಇಂಗ್ಲೀಷ ಸೇರಿ ಹದಿನಾರು ಭಾಷೆಗಳಿಗೆ ಅನುವಾದವಾಗಿವೆ ಮನುಕುಲದ ಉದ್ದಾರವೇ ಅವರ ಧ್ಯೆಯವಾಗಿತ್ತು ಎಂದು ಹೇಳಿದರು.
ನಂತರ ಮಾತನಾಡಿದ ತೇರದಾಳ ಬ್ಲಾಕ್ ಕಾಂಗ್ರೆಸ್ ಮುಖಂಡ ಮಲ್ಲಪ್ಪಾ ಸಿಂಗಾಡಿ ಕನಕದಾಸರಿಗೆ ಕಲಿಯುಗದ ಶ್ರೀಮಂತ ಭಕ್ತರ ಕಾಮದೇನು ಕಲಿಯುಗದ ಭಗವಂತ ತಿರುಪತಿ ತಿಮ್ಮಪ್ಪನು ಕೂಡಾ ಸಾಕ್ಷಾತ್ ದರ್ಶನ ಕೊಟ್ಟಿದ್ದರು. ಉಡುಪಿಯ, ಶ್ರೀ ಕೃಷ್ಣ ಕಿಂಡಿ ಕಡೆ ಮುಖ ತಿರುಗಿಸಿ ದರ್ಶನ ಕೊಟ್ಟಿದು ಇತಿಹಾಸ,ಅದು ಇಂದು ಕನಕನ ಕಿಂಡಿ ಎಂದೇ ಹೆಸರು ಪಡೆದಿದ್ದು ಇತಿಹಾಸ,ಯಮನ ಕೋಣವನ್ನೇ ದರೇಗಿಸಿದ ಮಹಾ ಭಕ್ತ ಕನಕದಾಸರು ನೂರಾರು ವರ್ಷ ಬದುಕಿದ ಅವರು ಒಟ್ಟು 316 ಕೀರ್ತನೆಗಳನ್ನು ರಚಿಸಿದ್ದಾರೆ, ನಾಲ್ಕು ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಮನುಕುಲದ ಶ್ರೇಷ್ಠ ಸಂದೇಶಗಳಿವೆ ಎಂದರು.
ಸಂಗೊಳ್ಳಿ ರಾಯಣ್ಣ ಸರ್ಕಲ್ : ನಗರದ ಶ್ರೀ ಸಂಗೊಳ್ಳಿ ರಾಯಣ್ಣ ಸರ್ಕಲನಲ್ಲಿ ಮೆರವಣಿಗೆಗೆ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ತೇರದಾಳ ಮತಕ್ಷೇತ್ರದ ಶಾಸಕರಾದ ಸಿದ್ದು ಸವದಿ ಹಾಲುಮತ ಸಮುದಾಯ ವಿಶ್ವ ಪೂಜಿತ, ಪ್ರತಿಯೊಬ್ಬರು ಆರಂಭಿಕ ಬೋಣಿಯನ್ನು ಈ ಸಮುದಾಯದರಿಂದಲೇ ಮಾಡಿಸಿ ತಮ್ಮ ವ್ಯಾಪಾರ ವ್ಯವಹಾರ ಲಾಭದಾಯಕವಾಗುತ್ತದೆ.ಎಂಬ ಗಾಡವಾದ ನಂಬಿಕೆ ವಿಶ್ವವಾಪಿಯಾಗಿದೆ ಜಗತ್ತಿನ ಎಲ್ಲ ಸಮುದಾಯಗಳು ಆರಂಭಿಕ ವ್ಯಾಪಾರ ವಹಿವಾಟ ಹಾಲುಮತ ಸಮುದಾಯದಿಂದಲೇ ಮಾಡಿಸುವುದು ವಿಶ್ವದ ನಂಬಿಕೆಯಾಗಿದೆ . ಭಾರತದಲ್ಲಿ ವಿವಿಧ ರಾಜ್ಯಗಳಲ್ಲಿ ಒಟ್ಟು ಸುಮಾರು ಹತ್ತು ಕೋಟಿಗೆ ಅಧಿಕ ಜನಸಂಖ್ಯೆ ಹೊಂದಿದ್ದಾರೆ. ದೇಶದ ಬ್ರಹತ್ ಶಕ್ತಿಯಾಗಿದ್ದಾರೆ ಎಂದು ಹೇಳಿದರು.
ಕೆಂಗೇರಿ ಮಡ್ಡಿಯಲ್ಲಿ : ನಗರದ ಕೆಂಗೇರಿ ಮಡ್ಡಿಯಲ್ಲಿರುವ ಕನಕದಾಸ ಮತ್ತು ಸಾಯಿ ಸರ್ಕಲನಲ್ಲಿ ಇಬ್ಬರು ಮಹಾತ್ಮಾರ ಭಾವ ಚಿತ್ರಗಳಿಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಕನಕದಾಸರ 536 ನೇ ಜಯಂತಿಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.
ಪುರಸಭೆಯಲ್ಲಿ : ನಗರದ ಆಡಳಿತ ಭವನ ಪುರಸಭೆಯಲ್ಲಿ ಕನಕದಾಸರ 536 ನೇ ಜಯಂತಿಯನ್ನು ಆವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದ ಪುರಸಭೆ ಸಿಬ್ಬಂದಿ ಎಸ್ ಏನ್ ಪಾಟೀಲ ಮಾತನಾಡಿ ವರಕವಿಗಳು ಕಿರ್ತನಕಾರರು ಎನಿಸಿಕೊಂಡ ಕನಕದಾಸರು ಕರ್ನಾಟಕ ಹರಿದಾಸ ಸಾಹಿತ್ಯದ ಅಶ್ವಿನಿ ದೇವತೆಗಳಲ್ಲೊಬ್ಬರು, ದಾಸ ಸಾಹಿತ್ಯದ ಸುವರ್ಣಯುಗದ ಪ್ರವರ್ತಕರು. ನಿರ್ಮೋಹಿಯಾಗಿ ಇಹದಲ್ಲಿ ಇದ್ದು, ಪರವನ್ನು ಗೆದ್ದ ಮಹಾನ ಸಂತ್ ಸರ್ವಕಾಲಿಕ ಸತ್ಯ ಸಾರಿ ವಿಶ್ವದ ಮಹಾತ್ಮ ವಿಶ್ವ ಸಂತ್ ಕನಕದಾಸರ ಕೊಡುಗೆ ಅಪಾರ ಅವರ ನಾಮ ಬಲವೇ ಎಲ್ಲರಿಗೂ ಸ್ಫೂರ್ತಿಯಾಗಿದೆ ಎಂದು ಹೇಳಿದರು.
ಮೆರವಣಿಗೆ : ಶ್ರೀ ನಗರದ ತಾಲೂಕಾ ಹೋರಾಟ ಸಮಿತಿ ಅಧ್ಯಕ್ಷರಾದ ಸಂಗಪ್ಪ ಹಲ್ಲಿ ಅವರು ಬುದ್ನಿ ಪಿ ಡಿ ಯಲ್ಲಿರುವ ಸಂಗೊಳ್ಳಿ ರಾಯಣ್ಣ ಸರ್ಕಲನಲ್ಲಿ ರಾಯಣ್ಣ ಮತ್ತು ಕನಕದಾಸರ ಫೋಟೋಗೆ ಪೂಜ್ಯ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು, ಸಕಲ ಮಂಗಲವಾದ್ಯಗಳೊಂದಿಗೆ ಭಕ್ತ ಶ್ರೀ ಕನಕದಾಸರ ಫೋಟೋವನ್ನು ನಗರದ ಚನ್ನಮ್ಮ ಸರ್ಕಲ, ಗಾಂಧಿ ಸರ್ಕಲ, ಜವಳಿ ಬಜಾರ, ನಡುಚೌಕಿ, ಮಹಾಲಿಂಗೇಶ್ವರ ದೇವಸ್ಥಾನ ಮಾರ್ಗವಾಗಿ ಬುದ್ನಿ ಪಿ ಡಿ ಯಲ್ಲಿರುವ ಬೀರಸಿದ್ದೇಶ್ವರ ಭವನಕ್ಕೆ ಬಂದು ತಲುಪಿ ಅಲ್ಲಿ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು. ಪ್ರಸಾದದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು
ಈ ಸಂಧರ್ಭದಲ್ಲಿ ಮುಖಂಡರಾದ ಬಸನಗೌಡ ಪಾಟೀಲ, ಮುಖಂಡರಾದ ಸತ್ಯಪ್ಪ ಹುದ್ದಾರ .ಶಂಕರಗೌಡ ಪಾಟೀಲ,ರಾಮನಗೌಡ ಪಾಟೀಲ, ಮಹಾದೇವ ಬರಗಿ, ಭೀಮಪ್ಪ ಸಂಶಿ, ಚನ್ನಬಸು ಹುರಕಡ್ಲಿ, ಡಾ ರಾಜೇಂದ್ರ ಪಾಟೀಲ, ವಿಷ್ಣು ಪಾಟೀಲ,ಮಹಾದೇವ ಕೆದಾರಿ, ಬಸವರಾಜ ಮೇಟಿ, ರಂಗಣ್ಣಗೌಡ ಪಾಟೀಲ,ಮಹಾಲಿಂಗಪ್ಪ ಕಳ್ಯಾಗೋಳ, ಮಹೇಶ ಇಟಕನ್ನವರ, ಗಂಗಾಧರ ಮೇಟಿ, ಭೀಮಪ್ಪ ಸಂಶಿ, ಡಾ ಸಂಗಮೇಶ ಹಿಡಕಲ್, ಶ್ರೀಶೈಲ ಕಾರಜೋಳ,ಪರಸಪ್ಪ ಕೊಣ್ಣೂರ, ಗೋವಿಂದ ಕೈನಕಟ್ಟಿ,ಮಲ್ಲಪ್ಪ ಬನಾಜ,ಶ್ರೀಶೈಲ ಕಳ್ಯಾಗೋಳ,ಶ್ರೀಶೈಲ ಅವಟಿ,ಕರೆಪ್ಪ ಮೇಟಿ, ಚಂದ್ರು ಸಂಶಿ , ಮಲ್ಲಿಕಾರ್ಜುನ ಬನಹಟ್ಟಿ. ಪ್ರಭು ಹುಬ್ಬಳ್ಳಿ, , ಭೀರ್ಪ ಸಂಶಿ, ಕರೆಪ್ಪ ಹುಣಶೀಕಟ್ಟಿ,ವಿಠಲ ಸಂಶಿ ಸೇರಿದಂತೆ ಹಲವರು ಇದ್ದರು. ಬ್ಯಾಂಕಿನಲ್ಲಿ ನಡೆದ ಕಾರ್ಯಕ್ರಮವನ್ನು ಲಕ್ಷ್ಮಣ ಕಿಶೋರ ನಿರೂಪಿಸಿ ವಂದಿಸಿದರು.