ಭಾಜಪ ಪಕ್ಷ ಮಾಧ್ಯಮ ಸಹಸಂಚಾಲಕರಾಗಿ ಬೈರೇಶ ಆಯ್ಕೆ
ಮಹಾಲಿಂಗಪುರ 13: ಭಾರತಿಯ ಜನತಾ ಪಾರ್ಟಿ ಗ್ರಾಮಿಣ ಮಂಡಳ ತೇರದಾಳ ವಿಧಾನಸಭಾ ಕ್ಷೇತ್ರದ, ಮಾಧ್ಯಮ ಪ್ರಕೋಷ್ಟ ಸಹ ಸಂಚಾಲಕರನ್ನಾಗಿ ಭಾಜಪ ಕಾರ್ಯಕರ್ತ ಭೈರೇಶ ಆದೆಪ್ಪನ್ನವರ ಆಯ್ಕೆ ಮಾಡಿ ತೇರದಾಳ ಗ್ರಾಮೀಣ ಮಂಡಲ ಅಧ್ಯಕ್ಷ ಸುರೇಶ ಅಕ್ಕಿವಾಟ ಆದೇಶ ಹೊರಡಿಸಿ ಅವರನ್ನು ಅಭಿನಂದಿಸಿದ್ದಾರೆ.
ಪಕ್ಷಕ್ಕಾಗಿ ನಾನು ಮಾಡಿರುವ ಅಳಿಲು ಕಾರ್ಯ ಮೆಚ್ಚಿ ತೇರದಾಳ ಕ್ಷೇತ್ರದ ಶಾಸಕ ಸಿದ್ದು ಸವದಿ ಹಾಗೂ ಪಕ್ಷದ ಎಲ್ಲ ಮುಖಂಡರು ನನ್ನ ಪರವಾಗಿ ಬೆಂಬಲ ವ್ಯಕ್ತಪಡಿಸಿದ್ದಕ್ಕೆ ಅಭಿನಂದನೆಗಳು ಎಂದರು.