91ನೇ ಹುತಾತ್ಮ ದಿನ ಅಂಗವಾಗಿ ಭಗತ್ ಸಿಂಗ್ ಪುಸ್ತಕ ಮಾರಾಟ
ಬಳ್ಳಾರಿ ಮಾ.23: ನಗರದ ರಾಯಲ್ ಸರ್ಕಲ್ ಹತ್ತಿರ ಗಾಂಧಿ ಭವನದ ಮುಂದೆ ಮಂಗಳವಾರ ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆ ವತಿಯಿಂದ ಶಹಿದ್ ಭಗತ್ ಸಿಂಗ್ ರವರ 91ನೇ ಹುತಾತ್ಮ ದಿನ ಅಂಗವಾಗಿ ಸೂಕ್ತಿ ಮತ್ತು ಛಾಯಚಿತ್ರ ಪ್ರದರ್ಶನ ಹಾಗೂ ಭಗತ್ ಸಿಂಗ್ ಅವರ ಪುಸ್ತಕ ಮಾರಾಟ ಕಾರ್ಯಕ್ರಮ ಮಾಡಲಾಯಿತು.
ಈ ವೇಳೆ ಎಐಡಿಸ್ಓ ಅಖಿಲ ಭಾರತ ಉಪಾಧ್ಯಕ್ಷರಾದ ಡಾ.ಪ್ರಮೋದ್ ಅವರು ಶಹೀದ್ ಭಗತ್ ಸಿಂಗ್ ಅವರ ಭಾವಚಿತ್ರಕ್ಕೆ ಮಾಲರ್ಪಣೆ ಮಾಡಿ ಮಾತನಾಡಿದ ಅವರು ಬಂಡವಾಳಶಾಹಿ ಅಧಿಕಾರಶಾಹಿಯು ನಿಮ್ಮ ಗುಲಾಮಿ ಮತ್ತು ಬಡತನದ ಹಿಂದಿನ ಕಾರಣವಾಗಿದೆ. ಎಂದಿಗೂ ಕೂಡ ನೀವು ಅವರ ಜೊತೆಗೆ ಸೇರದಂತೆ ಖಚಿತಪಡಿಸಿಕೊಳ್ಳಬೇಕು. ಅವರ ಕುತಂತ್ರಗಳಿಂದ ಜಾಗರೂಕರಾಗಿರಬೇಕು. ಆಗ ಎಲ್ಲವೂ ಒಳಿತಾಗುತ್ತದೆ. ನೀವು ನಿಜವಾದ ದುಡಿಯುವ ವರ್ಗ ಶ್ರಮಿಕರೆಲ್ಲ ಒಂದಾಗಿ. ಬೇಡಿಗಳ ಹೊರತು ನಿಮ್ಮಲ್ಲಿ ಕಳೆದುಕೊಳ್ಳಲು ಏನೂ ಇಲ್ಲ. ಎಂದು ಅದಕ್ಕಾಗಿ ಸಂಘಟನೆಯಾಗಿ ಬದಲಿಸಿ ಕ್ರಾಂತಿಕಾರಿ ಹೋರಾಟ ಕಟ್ಟಿ ನಗು ನಗುತ್ತಾ ಇಂಕ್ವಿಲಾಬ್ ಜಿಂದಾಬಾದ್ ಘೋμÀಣೆ ಹೇಳುತ್ತಾ ಮೂವರು ಕ್ರಾಂತಿಕಾರಿಗಳು ಗಲ್ಲುಂಭ ಎರಿದರು. ಆದರೆ ಅವರ ಕನಸಿನ ಸಮಾಜವಾದಿ ಭಾರತ ನೆರವೆರಿಲ್ಲ, ಭಗತ್ ಸಿಂಗ್ ಅವರ ಕನಸನ್ನು ನನಸು ಮಾಡಲು ಮುಂದಾಗಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಐಡಿಎಸ್ಓ ಜಿಲ್ಲಾ ಸೆಕ್ರೇಟರಿಯಟ್ ಸದಸ್ಯರಾದ ಶಾಂತಿ. ಎಂ ವಹಿಸಿದ್ದರು. ಎಐಡಿಎಸ್ಓ ಜಿಲ್ಲಾ ಅಧಕ್ಷ ಗುರಳ್ಳಿ ರಾಜ, ಎಐಡಿಎಸ್ಓ ಜಿಲ್ಲಾ ಸೆಕ್ರೇಟರಿಯಟ್ ಸದಸ್ಯರಾದ ಕೆ.ಈರಣ್ಣ, ನಿಂಗ್ ರಾಜ, ಅನುಪಮಾ, ಸಿದ್ದು ಮತ್ತು ಸದಸ್ಯರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.