ಬಳ್ಳಾರಿ

ಭಗತ್ ಸಿಂಗರ ಆದರ್ಶ ಹೋರಾಟ ಎಂದಿಗೂ ಅಮರ: ಸಂತೋಷಕುಮಾರ

ಭಗತ್ ಸಿಂಗರ ಆದರ್ಶ ಹೋರಾಟ ಎಂದಿಗೂ ಅಮರ: ಸಂತೋಷಕುಮಾರ

ಹೂವಿನಹಡಗಲಿ 24: ಭಾತರಕ್ಕೆ ಸ್ವಾತಂತ್ರ ಸಿಗುವಲ್ಲಿ ಯುವಜರ ಪಾತ್ರ ಶ್ಲಾಘನೀಯವಾದುದ್ದು. ಇಂದಿನ ಯುವ ಜನತೆ ಭಗತ್ ಸಿಂಗ್‍ರ ಆಶಯಗಳನ್ನು ಈಡೆರಿಸಬೇಕು  ದೇಶದ ಸ್ವಾತಂತ್ರ ಸಿಗುವಲ್ಲಿ ಜನರ ಮನಸ್ಸಿಗೆ ಹೊರಾಟದ ಕಿಚ್ಚು ಹಚ್ಚಿ  ಸಮ ಸಮಾಜದ ನಿರ್ಮಾಣ ಮಾಡುವಲ್ಲಿ ಭಗತ್ ಸಿಂಗ್‍ರ ಪಾತ್ರ ಯಾವತ್ತು ಅಮರವಾದುದ್ದು ಎಂದು  ಎಐವೈಎಫನ  ರಾಜ್ಯ ಕಾರ್ಯದರ್ಶಿ ಹೆಚ್ ಎಂ ಸಂತೋಷಕುಮಾರ ಮಾತನಾಡಿದರು.

ಹಡಗಲಿಯ ಎಸ್‍ಆರ್‍ಎಂಪಿಪಿ ಪದವಿ ಕಾಲೇಜಿನಲ್ಲಿ ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ ಹಮ್ಮಿಕೊಂಡಿದ್ದ ಹುತಾತ್ಮರ ದಿನಾಚಾರಣೆಯನ್ನು ಉದ್ಘಾಟಿಸಿ ಮಾತನಾಡಿದರು ಯುವಕರ ಆಶಾಕಿರಣ ಅನ್ಯಾಯದ ವಿರುದ್ದ ಬ್ರಿಟಿಷರನ್ನೆ ನೇರವಾಗಿ ಪ್ರಶ್ನಿಸಿದ ಗಂಡದೆಯ ವೀರ ಭಗತ್ ಸಿಂಗ್ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತೀಥಿಯಾಗಿ ಭಾಗವಹಿಸಿ ಮಾತನಾಡಿದ ಉಪನ್ಯಾಸಕ ಡಾ. ಕೆ ಸತೀಶ. ಮಾಹಾನ್ ವ್ಯಕ್ತಿಗಳು ತಮ್ಮ ಆದರ್ಶಮಯ ಹೋರಾಟದ ಬದುಕಿನಿಂದ ಯಾವತ್ತು ಜಿವಂತವಾಗಿದ್ದಾರೆ ಅದರಲ್ಲೂ ಭಗತ್ ಸಿಂಗ್, ಮಹಾತ್ಮ ಗಾಂಧಿ, ರಾನಡೆ, ಸ್ವಾಮಿ ವಿವೇಕಾನಂದರ ಸೈದ್ದಾಂತಿಕ ನಿಲವುಗಳು ಎಂದೆಂದಿಗೂ ಆದರ್ಶವಾಗಿವೆ ವಿದ್ಯಾರ್ಥಿ ಯುವ ಜನರು ಅವರ ಮೌಲ್ಯಗಳನ್ನು ಪಾಲಿಸಿ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ನಾಗರಿಕರಾಗಿ ದೇಶ ಕಟ್ಟುವ ಕೆಲಸವಾಗಬೇಕಿದೆ. ಎಂದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಸುರೇಶ ಬೂದುನೂರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ

ಹಲಗಿ ಸುರೇಶ, ಶಾಂತರಾಜ್ ಜೈನ್, ಬಸವರಾಜ ಸಂಶಿ, ಶಾಂತೇಶ ಎಲ್,  ವಿರುಪಾಕ್ಷ ಅಂಕ್ಲಿ,ವೆಂಕಟೇಶ ನಾಯ್ಕ, ಉಮೇಶ ಸೊಪ್ಪಿನ, ಸೇರಿದಂತೆ ವಿದ್ಯಾರ್ಥಿಗಳು ಇತರರು ಹಾಜರಿದ್ದರು.

ಸುದ್ದಿ ಓದಿ