ಕೋಮು ಗಲಭೆಗಳಿಗೆ ಅಹಿಂದ ಯುವಕರು ಬಲಿಯಾಗದೇ ಎಚ್ಚರದಿಂದಿರಿ: ಬುಡ್ಡಿ ಬಸವರಾಜ ; ಆರ್ಎಸ್ಎಸ್ ಆಳ ಮತ್ತು ಅಗಲ ಪುಸ್ತಕ ಬಿಡುಗಡೆ
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 23: ಪ್ರಸ್ತುತ ಸಮಾಜದಲ್ಲಿನ ಕೋಮು ಗಲಭೆಗಳಲ್ಲಿ ಅಲ್ಪ ಸಂಖ್ಯಾತ, ಹಿಂದುಳಿದ ಮತ್ತು ದಲಿತ ಯುವಕರನ್ನು ಬಲಿಪಶುಗಳನ್ನಾಗಿ ಮಾಡುತ್ತಿದ್ದಾರೆ ಇದರಿಂದ ಎಚ್ಚರ ವಹಿಸುವಂತೆ ಅಹಿಂದ ಜಿಲ್ಲಾ ಸಂಚಾಲಕ ಬುಡ್ಡಿ ಬಸವರಾಜ ಕರೆ ನೀಡಿದರು.
ಪಟ್ಟಣದ ಅಹಿಂದ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹಿರಿಯ ಸಾಹಿತಿ ದೇವನೂರು ಮಹಾದೇವ ಅವರ ಆರ್ಎಸ್ಎಸ್ ಆಳ ಮತ್ತು ಅಗಲ ಪುಸ್ತಕವನ್ನು ಬಿಡುಗಡೆ ಮಾಡಿ ಉಚಿತ ಪ್ರತಿಗಳನ್ನು ಹಂಚುವ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು. ಪ್ರಸ್ತುತ ಸಂಘಟನೆಗಳು ಕಟ್ಟದ್ದಾಗಿವೆ ಎಂದು ಹೇಳುತ್ತಿಲ್ಲ ಅವುಗಳ ಉದ್ದೇಶ ಕೆಟ್ಟದ್ದಾಗಿವೆ ಶೇ.3ರಷ್ಟಿರುವ ಜನಸಂಖ್ಯೆ ಇಂದು ಅಹಿಂದ ಯುವಕರ ಮೆದುಳಿಗೆ ಕೈಹಾಕಿ ಅವರಿಂದ ಕೋಮ ಗಲಭೆಗೆ ಪ್ರಚೋದನೆ ನೀಡುತ್ತಿದ್ದು, ಅಹಿಂದ ಸಮುದಾಯವನ್ನು ಒಗ್ಗೂಡಲು ಬಿಡದೇ ಅಹಿತಕರ ಘಟನೆಗಳಲ್ಲಿ ಅಹಿಂದ ಯುವಕರನ್ನು ಬಲಿ ಪಶುಗಳನ್ನಾಗಿಸುತ್ತಿದ್ದಾರೆ. ಆರ್ಎಸ್ಎಸ್ ಸೇರಿಂದತೆ ಅದರ ಅಂಗ ಸಂಸ್ಥೆಗಳು ದೇಶ ಛಿದ್ರಗೊಳಿಸುವ ಹುನ್ನಾರ ನಡೆಸಿದ್ದಾರೆ, ಅಹಿಂದ ಸಮುದಾಯಕ್ಕೆ ಮೊದಲು ದೇಶಪ್ರೇಮದ ಬಗ್ಗೆ ಅರಿವು ಮೂಡಿಸಬೇಕಿದೆ, ದೃಶ್ಯ ಮಾಧ್ಯಮಗಳು ಫಿಲ್ಟರ್ ಇಲ್ಲದೇ ನೋಡುಗರನ್ನು ದಾರಿ ತಪ್ಪಿಸುತ್ತಿವೆ, ಮುದ್ರಣ ಮಾಧ್ಯಮಗಳಿಂದ ಇಂದು ಮಾಧ್ಯಮದ ಗೌರವ ಘನತೆ ಉಳಿದುಕೊಂಡಿದೆ ಎಂದರು.
ಗಂಗಾಮತ ಸಮಾಜದ ಜಿಲ್ಲಾಧ್ಯಾಕ್ಷ ಅಂಬಾಡಿ ನಾಗರಾಜ ಮಾತನಾಡಿ ರಾಜ್ಯದಲ್ಲಿ ಧರ್ಮ ಧರ್ಮಗಳ ಮಧ್ಯೆ ಜಗಳ ಹಚ್ಚಿ ತಮಾಷೆ ನೋಡುತ್ತಾ ತಮ್ಮ ಬೆಳೆ ಬೇಯಿಸಿಕೊಳ್ಳು ಕೆಲಸ ನಡೆಯುತ್ತಿದೆ, ದೇಶದ ಮೂಲ ಪ್ರಜೆಗಳು ಇಂದು ಕೈ ಕಟ್ಟಿ ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿದೆ, ಮೊದಲು ಭಾರತೀಯರಾಗಿ ನಂತರ ತಮ್ಮ ಧರ್ಮಗಳನ್ನು ಪ್ರೀತಿಸಿ, ಧರ್ಮ ಎಂಬ ಭಾವನೆಯನ್ನು ತಲೆಯಲ್ಲಿ ತುರಿಕಿ ದೇಶವನ್ನು ಆಳುತ್ತಾ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಮೊದಲೂ ಶಾಂತಿಯುತ ಜೀವನ ನಡೆಸಲು ಭಾತೃತ್ವ ಭಾವನೆ ಅಳವಡಿಕೊಳ್ಳುವಂತೆ ಕರೆ ನೀಡಿದರು.
ಅಂಬೇಡ್ಕರ್ ಸಂಘದ ತಾಲೂಕಾಧ್ಯಾಕ್ಷ ದೊಡ್ಡಬಸಪ್ಪ, ಕುರುಬ ಸಮಾಜದ ಮುಖಂಡ ಮೈಲಾರ್ಪ ಮಾತನಾಡಿದರು.
ಈ ಸಂದರ್ಭದಲ್ಲಿ ಮಡಿವಾಳ ಸಮಾಜದ ಅಧ್ಯಕ್ಷ ರಾಮಣ್ಣ, ಬೋವಿ ಸಮಾಜದ ಅಧ್ಯಕ್ಷ ಬೆಲ್ದಾರ್ ರಾಮಣ್ಣ, ಅಲ್ಪ ಸಂಖ್ಯಾತರ ಅಧ್ಯಕ್ಷ ನೆಲ್ಲು ಇಸ್ಮಾಯಿಲ್ಸಾಬ್, ರೈತ ಮುಖಂಡ ಹತ್ತಿ ಅಡಿವೆಪ್ಪ, ಪದ್ಮಶಾಲಿ ಸಮಾಜದ ಅಧ್ಯಕ್ಷ ಅನಿಲ್ ಕುಮಾರ್ ಜಾಣ, ಸಿಪಿಐಎಂ ಪಕ್ಷದ ಜಗನ್ನಾಥ್, ಜನವಾದಿ ಮಹಿಳಾ ಸಂಘಟನೆಯ ವಿನೋದ, ಛಲವಾದಿ ಮಹಾಸಭಾದ ಅಧ್ಯಕ್ಷ ಕಾಳಿ ಬಸವರಾಜ, ಸವಿತಾ ಸಮಾಜದ ಅಧ್ಯಕ್ಷ ಸುಬ್ರಮಣ್ಯ, ಉಪ್ಪಾರ ಸಮಾಜದ ಅಧ್ಯಕ್ಷ ಗುಂಡ್ರ ಹನುಮಂತ, ಅಲ್ಪ ಸಂಖ್ಯಾತರ ಮುಖಂಡ, ಬಂಡಿಹಳ್ಳಿ ದಾದಾಪೀರ್, ವಾಲ್ಮೀಕಿ ಸಮಾಜದ ಮುಖಂಡ ಕೆ.ಮಂಜುನಾಥ್, ಪಿ.ಗುಲ್ಜಾರ್, ಸ್ಟೋರ್ ಇಸ್ಮಾಯಿಲ್ ಸಾಬ್ ಸೇರಿದಂತೆ ಇನ್ನು ಮುಂತಾದವರು ಇದ್ದರು.