ಗೋಕಾಕ್

ಈ ಐದು ದಿನ ಬೆಟಗೇರಿ ಗ್ರಾಮ ಸಂಪೂರ್ಣ ಬಂದ್‌..!

ಈ ಐದು ದಿನ ಬೆಟಗೇರಿ ಗ್ರಾಮ ಸಂಪೂರ್ಣ ಬಂದ್‌..!

ಲೋಕದರ್ಶನ ವರದಿ 

ಬೆಟಗೇರಿ 19 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಜನ-ಜಾನುವಾರುಗಳಿಗೆ ರೋಗ-ರುಜೀನ ಬರದಂತೆ ಹಾಗೂ ಸಕಾಲಕ್ಕೆ ಮಳೆಯಾಗದಿದ್ದ ಕಾರಣ ಈ ವರ್ಷ ಇದೇ ಮಂಗಳವಾರ ಜು.21 ಸೇರಿದಂತೆ ಮಂಗಳವಾರ ಜು.28, ಶುಕ್ರವಾರ ಜು.31, ಮಂಗಳವಾರ ಆ.4, ಮಂಗಳವಾರ ಆ.11 ರಂದು ವಾರದ ನಾಲ್ಕು ಮಂಗಳವಾರ ಒಟ್ಟು ನಾಲ್ಕು ಮಂಗಳವಾರ ಒಂದು ಶುಕ್ರವಾರ ದಿನವನ್ನು ಸಂಪ್ರದಾಯದಂತೆ ಬೆಟಗೇರಿ ಗ್ರಾಮದಲ್ಲಿ ವಾರ ಹಿಡಿಯಲಾಗಿದೆ.  

ಜು.21 ರಂದು ಮುಂಜಾನೆ 9ಗಂಟೆಗೆ ಊರಿನ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯಮೇಳಗಳೊಂದಿಗೆ ಪುರ ದೇವರ ಪಲ್ಲಕ್ಕಿ ಉತ್ಸವದ ಮೂಲಕ ಗ್ರಾಮದ ನಾಲ್ಕು ದಿಕ್ಕುಗಳ ಮುಖ್ಯ ರಸ್ತೆಗಳಿಗೆ ಊರಿನ ಸೀಮೆಗೆ ಕರಿ ಕಟ್ಟುವದು ನಡೆದ ಬಳಿಕ ಸ್ಥಳೀಯರಿಂದ ಪುರದೇವರ ದೇವಸ್ಥಾನಕ್ಕೆ ತೆರಳಿ ಪೂಜೆ, ನೈವೇದ್ಯ ಸಮರ​‍್ಿಸುವ, ದೇವಾಲಯ ಕಟ್ಟೆಗಳಿಗೆ ನೀರು ಹಾಕುವದು ಸೇರಿದಂತೆ ವಿವಿಧ ಕಟ್ಟಾ ವಾರ ಆಚರಣೆಯ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ವಾರದ ದಿನಗಳಲ್ಲಿ ಊರಿನ ಪ್ರಮುಖ ಬೀದಿಗಳಲ್ಲಿ ಪುರದೇವರ ಪಲ್ಲಕ್ಕಿ ಉತ್ಸವ ನಡೆದು, ಆ.11 ರಂದು ವಾರದ ಕೊನೆಯ ದಿನ ಕರಿ ಹರಿಯುವ ಕಾರ್ಯಕ್ರಮ ಕಟ್ಟುನಿಟ್ಟಿನ ಧಾರ್ಮಿಕ ವಿಧಿ ವಿಧಾನಗಳ ವೈಭವದಿಂದ ಊರಲ್ಲಿ ಕಟ್ಟಾ ವಾರ ಬಿಟ್ಟ ಆಚರಣೆ ನಡೆಯುತ್ತದೆ. 

ಕಟ್ಟಾ ವಾರ ಆಚರಣೆ:ಗ್ರಾಮದಲ್ಲಿ ನಮ್ಮ ಪುರ್ವಜರು ವಾರ ಬಿಡುವ ಪದ್ದತಿ ಅನುಸರಿಸಿಕೊಂಡು ಬಂದಿದ್ದರಿಂದ ವಾರದ ಒಟ್ಟು 4 ಮಂಗಳವಾರ, ಒಂದು ಶುಕ್ರವಾರ ಸೇರಿ ದಿನ ಇಡೀ ಗ್ರಾಮದ ರೈತರಾ​‍್ಯರೂ ವಾರದ ಈ 5 ದಿನಗಳಂದು ಕೃಷಿ ಚಟುವಟಿಕೆ ಕೈಗೊಳ್ಳುವಂತಿಲ್ಲ, ವಾರದ ದಿನ ಎಲ್ಲರ ಮನೆಯಲ್ಲೂ ರೊಟ್ಟಿ ಮಾಡುವಂತಿಲ್ಲ, ವಗ್ಗರಣೆಯಂತೂ ಹಾಕುವಂತಿಲ್ಲ, ಮಾಂಸಾಹಾರ ಅಡುಗೆ ತಯಾರಿಸುವಂತಿಲ್ಲ, ಊರಿನಲ್ಲಿರುವ ಕಿರಾಣಿ, ಮದ್ಯದಂಗಡಿ, ಚಹಾಅಂಗಡಿ, ಪಾನ್ ಬೀಡಾಂಗಡಿಗಳು ಸೇರಿದಂತೆ ಹೇರ್‌ಕಟಿಂಗ್ ಅಂಗಡಿ ಸಹ ಬಾಗಿಲು ತೆರೆಯದೇ ಬಂದ್ ಮಾಡಲಾಗುವುದು. ಹೀಗಾಗಿ ವಾರ ಹಿಡಿದ ಪ್ರಯುಕ್ತ 5 ಮಂಗಳವಾರ ದಿನ ಸಂಪ್ರದಾಯದಂತೆ ಗ್ರಾಮ ಸಂಪೂರ್ಣ ಬಂದ್ ಆಚರಿಸಿದಂತಿರುತ್ತದೆ ಎಂದು ಸ್ಥಳೀಯ ವಾರ ಹಿಡಿದ ಆಯೋಜನೆ ಸಮಿತಿಯ ಹಿರಿಯ ನಾಗರಿಕ ಮಾಯಪ್ಪ ಬಾಣಸಿ ತಿಳಿಸಿದ್ದಾರೆ. 


ಸುದ್ದಿ ಓದಿ