ಹಗರಿಬೊಮ್ಮನಹಳ್ಳಿ

ಯು.ಎಸ್.ಕೊಟ್ರೇಶ್ ಅವರಿಗೆ ಶಿಕ್ಷಕರಿಗೆ ಉತ್ತಮ ಶಿಕ್ಷಕರ ಜಿಲ್ಲಾ ಪ್ರಶಸ್ತಿ

ಯು.ಎಸ್.ಕೊಟ್ರೇಶ್ ಅವರಿಗೆ ಶಿಕ್ಷಕರಿಗೆ ಉತ್ತಮ ಶಿಕ್ಷಕರ ಜಿಲ್ಲಾ ಪ್ರಶಸ್ತಿ

ಹಗರಿಬೊಮ್ಮನಹಳ್ಳಿ 11: ಹಳೇ ಹಗರಿಬೊಮ್ಮನಹಳ್ಳಿಯ ಸರಕಾರಿ ಹಿರಿಯ ಪ್ರಾಥಾಮಿಕ ಶಾಲೆಯ ಪ್ರಭಾರಿ ಮುಖ್ಯ ಗುರುಗಳಾದ ಯು.ಎಸ್.ಕೊಟ್ರೇಶ್ ಶಿಕ್ಷಕರಿಗೆ ಉತ್ತಮ ಶಿಕ್ಷಕರ ಜಿಲ್ಲಾ ಪ್ರಶಸ್ತಿಗೆ ಭಾಜನರಾಗಿದ್ದು, ಶಾಲೆಯ ಹಳೆಯ ವಿದ್ಯಾರ್ಥಿಗಳು ಶಿಕ್ಷಕರಿಗೆ ಸನ್ಮಾನ ಮಾಡಿದರು. ಈ ಸಂಧರ್ಭದಲ್ಲಿ ಬಿಇಒ ಶೇಖರಪ್ಪ ಹೊರಪೇಟೆ, ಎಸ್‍ಡಿಎಂಸಿ ಸದಸ್ಯರು, ವಿದ್ಯಾರ್ಥಿಗಳಾದ ಎನ್.ಎಂ.ಸುಧಾಕರ, ಎಂ.ಇಬ್ರಾಹಿಂ, ಎಸ್.ಹಾಲೇಶ್, ಎಂ.ಮಂಜಣ್ಣ, ಗಣೇಶ, ಪಿ.ರಮೇಶ್, ಅಣ್ಯಯ್ಯ, ಸುರೇಶ್ ಸೇರಿದಂತೆ ಇನ್ನಿತರರು ಇದ್ದರು.ಇದೇ ಸಂಧರ್ಭದಲ್ಲಿ ಬಿಸಿಯೂಟ ನೌಕರರ, ಅಂಗನವಾಡಿ ಕಾರ್ಯಕರ್ತೆಯರು ಶಿಕ್ಷಕರಿಗೆ ಶುಭ ಹಾರೈಸಿ ಸನ್ಮಾನಿಸಿದರು.

ಸುದ್ದಿ ಓದಿ