ಮಹಲಿಂಗಪುರ

ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ವರದಾನ : ಶೇಖರ ಅಂಗಡಿ

ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ವರದಾನ : ಶೇಖರ ಅಂಗಡಿ

ಮಹಾಲಿಂಗಪುರ,08 : ಯೋಜನೆಗಳು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ವರದಾನವಾಗಿದ್ದು, ಫಲಾನುಭವಿ ವಿದ್ಯಾರ್ಥಿಗಳು ಸರ್ಕಾರ ನೀಡುವ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮಹಾಲಿಂಗಪುರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಹಾಗೂ ಪುರಸಭಾ ಸದಸ್ಯ ಶೇಖರ ಅಂಗಡಿ ವಿಧ್ಯಾರ್ಥಿಗಳಿಗೆ ಕರೆ ನೀಡಿದರು. 

ಬುಧವಾರ ಮುಂಜಾನೆ ಸರಕಾರಿ ಕನ್ನಡ ಹಿರಿಯ ಪ್ರೌಢಶಾಲೆಯಲ್ಲಿ 8,9 ಮತ್ತು 10 ನೇ ವರ್ಗಗಳ ಸುಮಾರು 450 ವಿದ್ಯಾರ್ಥಿ/ನಿಯರಿಗೆ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಶ್ಯೂ ಭಾಗ್ಯ ಯೋಜನೆ ಅಡಿಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಭಾಗವಹಿಸಿ ಶ್ಯೂಗಳನ್ನು ವಿತರಣೆ ಮಾಡಿ ಮಾತನಾಡಿದರು.  

ಈ ಯೋಜನೆಗಳ ಉದ್ಧೇಶ ಖಾಸಗಿ ಶಾಲೆಗಳಲ್ಲಿ ಸಕಲ ಸೌಲಭ್ಯಗಳು ದೊರೆಯುವಂತೆ ಸರ್ಕಾರಿ ಶಾಲೆಗಳಲ್ಲಿಯೂ ದೊರೆತು ಬಡವ, ಕಡು ಬಡವರು ಹಾಗೂ ಮಧ್ಯಮ ವರ್ಗಗಳ ಮಕ್ಕಳೂ ಸಹಿತ ಶಿಕ್ಷಣ ಕಡೆಗೆ ಒಲವು ತೋರಿ ಉತ್ತಮ ಬದುಕು ಕಟ್ಟಿಕೊಳ್ಳಲು ಸರ್ಕಾರಗಳು ಶ್ಯೂ ಭಾಗ್ಯದಂತಹ ಯೋಜನೆಗಳನ್ನು ರೂಪಿಸುತ್ತವೆ ಎಂದರು. 

ಈ ಸಮಯದಲ್ಲಿ ಎಸ್ ಡಿ ಎಂ ಸಿ ಹಾಗೂ ಪುರಸಭೆ ಸದಸ್ಯ ಚನಬಸು ಯರಗಟ್ಟಿ, ಶಿಕ್ಷಕರಾದ ಎಂ ಜಿ. ಅಲ್ಲಾಖಾನ, ಆರ್ ಕೆ. ಕುಂಬಾರ, ವಿದ್ಯಾಧರ ಗೂಡ್ಲಮನಿ, ಪಿ ಆಯ್‌.ಬಡಿಗೇರ ಇದ್ದರು. ಮುಖ್ಯೋಪಾಧ್ಯಾಯ ಧನಂಜಯ ಕುಲಕರ್ಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಶಿಕ್ಷಕರಾದ ಸದಾಶಿವ ಕಂಬಾರ ಸ್ವಾಗತಿಸಿ, ಎಸ್ ಡಿ ಎಂ ಸಿ ಅಧ್ಯಕ್ಷ ಸಂಜಯ ರಾಠೋಡ ವಂದಿಸಿದರು. 


ಸುದ್ದಿ ಓದಿ