ಪ್ರೀತಿಸಿದ ಜೊಡಿ ಪಲಾಯನ : ಪುತ್ರನ ತಪ್ಪಿಗಾಗಿ ತಾಯಿಗೆ ಬೆತ್ತಲೆ ಮೆರವಣಿಗೆ, ಚಿತ್ರಹಿಂಸೆ : ಬೆಳಗಾವಿಯಲ್ಲಿ ಹೇಯ ಕೃತ್ಯ
ಬೆಳಗಾವಿ : ತನ್ನ ಮಗ ಪ್ರೀತಿಸಿದ ಯುವತಿಯೊಂದಿಗೆ ಫರಾರಿಯಾದ ಹಿನ್ನೆಲೆ ಯವತಿ ಮನೆಯವರು ಯುವಕನ ತಾಯಿಗೆ ಬೆತ್ತಲೆ ಮೆರವಣಿಗೆ ಮಾಡಿ ರಾತ್ರಿಯಿಡಿ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ಮಾಡಿ ಚಿತ್ರ ಹಿಂಸೆ ಕೊಟ್ಟಿರುವ ಘಟನೆ ಬೆಳಗಾವಿ ತಾಲೂಕಿನಲ್ಲಿ ನಡೆದಿರುವದು ವರದಿಯಾಗಿದೆ.
ಇಂತಹದೊಂದು ಸಮಾಜ ತಲೆತಗ್ಗಿಸುವಂತಹ ಘಟನೆ ಬೆಳಗಾವಿ ತಾಲೂಕಿನ ಹೊಸವಂಟಮುರಿ ಗ್ರಾಮದಲ್ಲಿ ರವಿವಾರ ರಾತ್ರಿ ನಡೆದಿದ್ದು, ಗ್ರಾಮದಲ್ಲಿ ಬಿಗುವಿನ ವಾತಾವರಣ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ ಮಾಲಾಗಿದೆ.
ಘಟನೆ ವಿವರ : ಹೊಸವಂಟಮೂರಿ ಗ್ರಾಮದಲ್ಲಿನ ಯುವತಿಯೋರ್ವಳ ಮನೆಯವರು ಆ ಯವತಿಯ ಮದುವೆಯ ನಿಶ್ಚಿತಾರ್ಥ ಸಿದ್ಧತೆಯಲ್ಲಿದ್ದಾಗ ಯವತಿ ಪ್ರೀತಿಸಿದ ಹುಡುಗನೊಂದಿಗೆ ಪರಾರಿಯಾಗ್ಗಿದ್ದಾಳೆ.
ಆದರೆ ಪ್ರೀತಿಸಿದ ಯುವಕನ 44 ವರ್ಷದ ತಾಯಿಯನ್ನು ಯುವತಿಯ ಕುಟುಂಬದ ವರು ರಾತ್ರಿಯಿಡಿ ಕಂಬಕ್ಕೆ ಕಟ್ಟಿಹಾಕಿ ಬೆತ್ತಲೆಗೊಳಿಸಿ ಥಳಿಸಿದ ಸಮಾಜ ತಲೆತಗ್ಗಿಸುವ ಘಟನೆ ನಡೆಸಿದ್ದಾರೆ.
ಹೊಸ ವಂಟಮುರಿ ಗ್ರಾಮದಲ್ಲಿ ಪ್ರೀತಿಸಿದ ಜೋಡಿ ಮನೆ ಬಿಟ್ಟು ಹೋದ ಕಾರಣ ರೋಷಿದ ಯುವತಿಯ ಕುಟುಂಬಸ್ಥರು ಯುವಕನ ತಾಯಿಗೆ ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿಹಾಕಿ ಥಳಿಸಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಒಂದೇ ಗ್ರಾಮದ ಯುವಕ- ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಭಾನುವಾರ ರಾತ್ರಿ ಮನೆ ಬಿಟ್ಟು ಓಡಿ ಹೋಗಿದ್ದಾರೆ. ಆದರೆ ಇಂದು ಯುವತಿಯ ನಿಶ್ಚಿತಾರ್ಥ, ಮದುವೆ ನಿಗದಿ ಮಾಡಲು ಯುವತಿಯ ಕುಟುಂಬಸ್ಥರು ಸಿದ್ಧತೆ ಮಾಡಿಕೊಂಡಿದ್ದರು.
ಈ ಘಟನೆಯಿಂದ ರೊಚ್ಚಿಗೆದ್ದ ಯುವತಿ ಕುಟುಂಬಸ್ಥರಿಂದ ಯುವಕನ ಮನೆ ಮೇಲೆ ಭಾನುವಾರ ದಾಳಿ ನಡೆಸಿ ರಾತ್ರೋರಾತ್ರಿ ಮನೆಯನ್ನು ಸಂಪೂರ್ಣ ದ್ವಂಸ ಗೊಳಿಸಿ ಯುವಕನ ತಾಯಿಯನ್ನು ಬೆತ್ತಲೆಗೊಳಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ ಬಳಿಕ ಗ್ರಾಮದಲ್ಲಿನ ಕಂಬಕ್ಕೆ ಕಟ್ಟಿ ಅಮಾನವೀಯವಾಗಿ ಹಲ್ಲೆ ಮಾಡಿದ್ದಾರೆ.
ಎರಡೂ ಕುಟುಂಬಗಳು ಪರಿಶಿಷ್ಟ ಪಂಗಡಕ್ಕೆ ಸೇರಿದ್ದಾರೆ ಎಂದು ತಿಳಿದುಬಂದಿದೆ. ತಡರಾತ್ರಿ ಸ್ಥಳಕ್ಕೆ ಕಾಕತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಯುವಕನ ತಾಯಿ ಮೇಲೆ ಹಲ್ಲೆ ಪ್ರಕರಣಕದಕೆ ಸಂಬಂಧಿಸಿದಂತೆ 7 ಜನ ಆರೋಪಿಗಳನ್ನು ವಿಚಾರಣೆ ನಡೆಸಿದ್ದು, ಓಡಿ ಹೋಗಿರುವ ಯುವಕ, ಯುವತಿಯ ತಪಾಸಣೆ ಪೊಲೀಸರು ನಡೆಸಿದ್ದಾರೆ.
ಹೊಸ ವಂಟಮೂರಿ ಗ್ರಾಮದಲ್ಲಿ ಸದ್ಯ ಬಿಗುವಿನ ವಾತಾವರಣ ಇದ್ದು ಸಶಸ್ತ್ರ ಪೊಲೀಸ್ ಪಡೆ ನಿಯೋಜಿಸಲಾಗಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದೊಂದು ಅಮಾನವೀಯ ಘಟನೆ : ಗೃಹ ಸಚಿವ ಡಾ, ಪರಮೇಶ್ವರ :
24 ವರ್ಷದ ಯುವಕ ಹುಡುಗಿಯನ್ನು ಜತೆಗೆ ಕರ್ಕೊಂಡು ಹೋಗಿದ್ದಾನೆ, ಹುಡುಗ ಹುಡುಗಿಯ ನಡುವೆ ಲವ್ ಅಫೇರ್ಸ್ ಇತ್ತು ಎನ್ನುವ ಮಾಹಿತಿ ಇದೆ. ಇದರಿಂದ ಯುವತಿಯ ಕುಟುಂಬದವರು ಯುವಕನ ತಾಯಿಯ ಮೇಲೆ ಹಲ್ಲೆ ಮಾಡಿದ್ದಾರೆ. ಸುಮಾರು 8 ರಿಂದ 10 ಜನ ಹಲ್ಲೆ ಮಾಡಿ ಬೆತ್ತಲೆ ಮಾಡಿ ಕಂಬಕ್ಕೆ ಕಟ್ಟಿದ್ದಾರೆ. ಈ ಘಟನೆಯ 7 ಜನರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದ್ದಾರೆ.
ಪೊಲೀಸರಿಗೆ ವಿಷಯ ತಿಳಿದ ಬಳಿಕ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ, ಸಧ್ಯ ಅವರಿಗೆ ಚಿಕಿತ್ಸೆ ನಡೆಯುತ್ತಿದೆ. ಪೊಲೀಸರು ಈಗಾಗಲೇ 7 ಜನರನ್ನು ಬಂಧನ ಮಾಡಿದ್ದಾರೆ.
ಇನ್ನಿಬ್ಬರು ಆರೋಪಿಗಳು ಬಂಧನ ಆಗಬೇಕಿದೆ ಅವರನ್ನೂ ಸಹ ಬಂಧನ ಮಾಡ್ತಾರೆ. ಓಡಿ ಹೋದ ಹುಡುಗ ಹುಡುಗಿಯನ್ನೂ ಸಹ ಪೊಲೀಸರು ಟ್ರಾಪ್ ಮಾಡ್ತಿದ್ದಾರೆ. ಇಂತಹ ಘಟನೆಗಳು ಆಗಬಾರದು ಎಂದು ಸಚಿವ ಜಿ. ಪರಮೇಶ್ವರ ಹೇಳಿದರು.
ಪೊಲೀಸರಿಗೆ ದೂರು ನೀಡಿದರೆ ಪೊಲೀಸರು ಕ್ರಮ ತೆಗೆದುಕೊಳ್ತಿದ್ದರು, ಅಥವಾ ಊರಲ್ಲಿ ಹಿರಿಯರು ಮಾತನಾಡಿಕೊಂಡು ಬಗೆಹರಿಸಬಹದಿತ್ತು.
ಇದೊಂದು ಅಮಾನವೀಯ ಘಟನೆ ಸ್ಥಳಕ್ಕೂ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತೆನೆ ಎಂದು ಸಚಿವ ಪರಮೇಶ್ವರ ಹೇಳಿದ್ದಾರೆ.