ಬೆಳಗಾವಿ ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಕೇಸ್ : ಮರುತನಿಖೆಗೆ ಕಾನೂನು ಇಲಾಖೆ ಜತೆ ಚರ್ಚೆ : ಸಿಎಂ ಸಿದ್ದರಾಮಯ್ಯ

ಬೆಳಗಾವಿ ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಕೇಸ್ : ಮರುತನಿಖೆಗೆ ಕಾನೂನು ಇಲಾಖೆ ಜತೆ ಚರ್ಚೆ : ಸಿಎಂ ಸಿದ್ದರಾಮಯ್ಯ

ಬೆಳಗಾವಿ : ಕಳೆದ ವರ್ಷದ ಹಿಂದೆ ಆತ್ಮಹತ್ಯೆಗೆ ಶರಣಾಗಿರುವ ಬೆಳಗಾವಿಯ ಗುತ್ತಿಗೆದಾರ ಸಂತೋಷ ಪಾಟೀಲ ಕುಟುಂಬಸ್ಥರಿಗೆ ಇನ್ನು ನ್ಯಾಯ ಸಿಕ್ಕಿಲ್ಲ‌. ಈ ಪ್ರಕರಣದ ಮರು ತನಿಖೆ ಮಾಡಬೇಕು ಎಂದು ಕುಟುಂಸ್ಥರು ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾನೂನು ಇಲಾಖೆಯ ಜೊತೆಗೆ ಚರ್ಚೆ ಮಾಡುವದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಹೇಳಿದರು.

    ಬೆಳಗಾವಿಯಲ್ಲಿ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಅವರು, ಸಿದ್ದರಾಮಯ್ಯ ಸರ್ಕಾರ ಬಿನ್ ಲಾಡನ್ ಸರ್ಕಾರ ಎಂದು ಆರ್ ಅಶೋಕ ಅವರು ಹೇಳಿಕೆ ವಿಚಾರವಾಗಿ ಮಾತನಾಡಿರುವ ಸಿದ್ದರಾಮಯ್ಯ, ಬಿಜೆಪಿಯವರು ಹತಾಶರಾಗಿದ್ದಾರೆ. ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು.

  ಬೆಳಗಾವಿಯಲ್ಲಿ ಪೊಲೀಸರಿಂದ ಅಂಗವಿಕಲನ ಮೇಲೆ ಹಲ್ಲೆ ವಿಚಾರವಾಗಿ ಮಾತನಾಡಿದ ಅವರು, ಪಿಎಸ್ ಐ ಮೇಲೆ ಡಿಪಾರ್ಟ್ಮೆಂಟ್ ತನಿಖೆ ಮಾಡಲು ಸೂಚಿಸುತ್ತೇವೆ‌. ಹಲ್ಲೆ ಮಾಡಿರೋದು ತಪ್ಪು. ತಪ್ಪು ಮಾಡಿದವರ ಮೇಲೆ ಶಿಸ್ತಿನ ಕ್ರಮ ವಹಿಸುತ್ತೇವೆ ಎಂದು ನುಡಿದರು. 

      ಗುತ್ತಿಗೆದಾರ ಬಾಕಿ ಬಿಲ್ ಪಾವತಿ ವಿಷಯವಾಗಿ ಸಂಘದ ಅಧ್ಯಕ್ಷ ಕೆಂಪಣ್ಣ ಒತ್ತಾಯ ವಿಚಾರವಾಗಿ ಮಾತನಾಡಿ, ಹಣ ಬಾಕಿ ಉಳದಿರೋದು ಯಾರ ಕಾಲದಲ್ಲಿ ಆಗಿರೋ ಕೆಲಸದ್ದು. ಬಾಕಿ ಉಳಿಸಿ ಹೋಗಿದ್ದಾರೆ ಹಿಂದಿನ ಸರ್ಕಾರದವರು. ಹಿಂದಿನ ಸರ್ಕಾರದ ಎರಡು ವರ್ಷ, ಮೂರು ವರ್ಷ ಬಿಲ್ ಕೊಟ್ಟಿಲ್ಲ.ನಾವು ಬಂದು ಇನ್ನೂ ಮೂರು ತಿಂಗಳು ಆಗಿಲ್ಲ‌. ಬಿಲ್ ಕೊಡಬೇಕು ಅದರ ಬಗ್ಗೆ ಏನಿಲ್ಲ.

    ನಾವು ಶೇ. 40 ಕಮಿಷನ್ ದಂಧೆಯ ಬಗ್ಗೆ ಮಾತನಾಡಿದ್ವಿ.ಈ ಬಗ್ಗೆ ತನಿಖೆ ಮಾಡಬೇಕು ಬೇಡ್ವಾ? ಗುಣಮಟ್ಟದ ಕೆಲಸ ಆಗಿದೆಯಾ ಇಲ್ವಾ ಎಂದು ತನಿಖೆ ಮಾಡಿಸಿ ಒಳ್ಳೆಯ ಕೆಲಸ ಮಾಡಿರೋವರಿಗೆ ತೊಂದರೆ ಕೊಡಲ್ಲ‌. ಕಳಪೆ ಕಾಮಗಾರಿ ಕೆಲಸ ಮಾಡಿದವರ ವಿರುದ್ಧ ಕ್ರಮ ಕೈಗೊಳುತ್ತೇವೆ ಎಂದು ತಿಳಿಸಿದರು.

    ಈ ರಾಜ್ಯವನ್ನು ಬಿಜೆಪಿಯವರಯ ಹಾಳು  ಮಾಡಿದ್ದಾರೆ. ಆರ್ಥಿಕವಾಗಿ, ಭ್ರಷ್ಟಾಚಾರ, ಧರ್ಮ ರಾಜಕಾರಣ ಮಾಡಿದ್ದಾರೆ. ನಾವು 135 ಸ್ಥಾನ ಗೆದ್ದಿದ್ದು ಬಿಜೆಪಿಯವರಿಗೆ ಭಯ ಆರಂಭ ಆಗಿದೆ. ಎಷ್ಟೇ ದುಡ್ಡು ಖರ್ಚು ಮಾಡಿದರೂ ಅವರು ಗೆಲ್ಲಲ್ಲು ಆಗಲಿಲ್ಲ. 20 ಲೋಕಸಭಾ ಕ್ಷೇತ್ರ ಗೆಲ್ಲುವ ಗುರಿ ಹೊಂದಿದ್ದೇವೆ, ಗೆಲ್ಲುತೇವೆ ಎಂದು ತಿಳಿಸಿದರು.

     ಮೂರು ವರ್ಷಗಳಿಂದ ಬಿಲ್ ಕೊಟ್ಟಿಲ್ಲ. ಯಾಕೆ ಕೊಡಲಿಲ್ಲ, ಯಾಕೆ ಬಿಟ್ಟು ಹೋದ್ರು. ನಾವು ಯಾರಿಗೆ ತೊಂದರೆ ಕೊಡಲ್ಲ. ಮೂರು ವರ್ಷ ಬಿಲ್ ಕೊಡದೇ ಇರೋವರು ಈಗ ಏನ್ ಹೋರಾಟ ಮಾಡುತ್ತಾರೆ‌. ಅವರಿಗೆ  ಎನ್ ನೈತಿಕ ಇದೆ ಹೇಳಿ. ಸುಮ್ಮನೆ ಇರಲಾಗದೆ ಹೋರಾಟ ಮಾಡುತ್ತಿದ್ದಾರೆ. ಹೊಟ್ಟೆ ಉರಿ ಶುರುವಾಗಿದೆ ಬಿಜೆಪಿಯವರಿಗೆ‌. ಸುಳ್ಳು ಸುಳ್ಳು ಆರೋಪ ಮಾಡುತ್ತಿದ್ದಾರೆ. ಚಲವರಾಯಸ್ವಾಮಿ, ಡಿಕೆಶಿ ಮೇಲೆ ಎಲ್ಲಿ ಆರೋಪ ಬಂದಿದೆ. ಇವತ್ತು ಕೆಂಪಣ್ಣ ಯಾವ ಆರೋಪ ಮಾಡಿದ್ದಾರೆ. ಯಾವುದೇ ಭ್ರಷ್ಟಾಚಾರದ ಆರೋಪ ಮಾಡಿಲ್ಲ‌ ಎಂದು ತಿಳಿಸಿದರು.

ಸುದ್ದಿ ಓದಿ