ಅಕ್ರಮ ಮರಳು ಮಾಫೀಯಾ ವಿರುದ್ಧ ಬೆಳಗಾವಿ ಎಸ್ ಪಿ ಸಮರ : ಸ್ಥಳಕ್ಕೆ ಎಸ್ಪಿ ಭೇಟಿ, 23 ಟ್ರ್ಯಾಕ್ಟರ್, 4 ಜೆಸಿಬಿ ವಶ : ಕಣ್ಮುಚ್ಚಿ ಕುಳಿತ ಬಾಗಲಕೋಟೆ ಪೊಲೀಸರು

ಅಕ್ರಮ ಮರಳು ಮಾಫೀಯಾ ವಿರುದ್ಧ ಬೆಳಗಾವಿ ಎಸ್ ಪಿ ಸಮರ : ಸ್ಥಳಕ್ಕೆ ಎಸ್ಪಿ ಭೇಟಿ, 23 ಟ್ರ್ಯಾಕ್ಟರ್, 4 ಜೆಸಿಬಿ ವಶ : ಕಣ್ಮುಚ್ಚಿ ಕುಳಿತ ಬಾಗಲಕೋಟೆ ಪೊಲೀಸರು

ಬೆಳಗಾವಿ : ಬಾಗಲಕೋಟ ಜಿಲ್ಲೆಯ ಮೂಲಕ ಒಳ‌ನುಗ್ಗಿ ಬೆಳಗಾವಿ ಜಿಲ್ಲೆಯ ಕೃಷ್ಣಾ ನದಿಯಲ್ಲಿ ಯಾವದೇ ಲಂಗು ಲಗಾಮು ಇಲ್ಲದೆ ಅವ್ಯಾಹತವಾಗಿ ನಡೆಸುತ್ತಿದ್ದ ಅಕ್ರಮ ಮರಳು ದಂಧೆಕೋರರ ವಿರುದ್ದ ಬೆಳಗಾವಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಅವರ ನೇತ್ರತ್ವದಲ್ಲಿ ಅಥಣಿ ಪೊಲೀಸರು ಸಮರ ಸಾರಿದ್ದು, 23 ಟ್ರ್ಯಾಕ್ಟರ್ ಹಾಗೂ 4 ಜೆಸಿಬಿ ಯಂತ್ರಗಳು ಮತ್ತು ಒಂದು ಟಿಪ್ಪರ್ ವಶಕ್ಕೆ ಪಡೆದಿದ್ದಾರೆ. 


      ಬೆಳಗಾವಿ ಜಿಲ್ಲೆಯ ಗಡಿಯಲ್ಲಿರುವ ಬರುವ ಅಥಣಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಬರುವ ಕೃಷ್ಣಾ ನದಿಯಲ್ಲಿ ಬಾಗಲಕೋಟೆ ಜಿಲ್ಲೆಯ ಮೂಲಕ ಒಳ ನೂಸುಳಿ ಅಕ್ರಮವಾಗಿ ನಡೆಸುತ್ತಿದ್ದ ಮರಳು ದಂಧೆಯ ಮೇಲೆ ಬೆಳಗಾವಿ ಎಸ್ ಪಿ‌ ನೇತೃತ್ವದಲ್ಲಿ ಅಥಣಿ ಪೊಲೀಸರು ದಾಳಿ ನಡೆಸಿದ್ದಾರೆ. 


    ರವಿವಾರ ಬೆಳಿಗ್ಯೆ ಬೆಳಗಾವಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಅವರು ಅಥಣಿ ಪೋಲಿಸ್ ಜತೆಗೆ   ಕೃಷ್ಣಾ ನದಿಯ ಬೆಳಗಾವಿ ಗಡಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ದಂಧೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 


    ಅಕ್ರಮವಾಗಿ ಬಾಗಲಕೋಟೆ ಜಿಲ್ಲೆಯ ಮೂಲಕ ಬೆಳಗಾವಿ ಜಿಲ್ಲೆಯ ಗಡಿಗೆ ಆಗಮಿಸಿ‌ ಅಕ್ರಮ ಮರಳು ದಂಧೆ ಎಗ್ಗಿಲ್ಲದೆ ನಡೆಸುತ್ತಿದ್ದರು ಬಾಗಲಕೋಟೆ ಪೊಲೀಸರು ಮಾತ್ರ ಕಣ್ಮುಚ್ವಿ ಕುಳಿತಿರುವದು ಸಂಶಯಕ್ಕೆ ಎಡೆ ಮಾಡಿದೆ. 

ಸುದ್ದಿ ಓದಿ