ಬೆಳಗಾವಿಯಲ್ಲಿ ಮೊಳಗಿತು ಕನ್ನಡದ ಕಹಳೆ : ಕುಂದಾನಗರಿಯಲ್ಲಿ ಹರಡಿತು ಕನ್ನಡದ ಕಂಪು

ಬೆಳಗಾವಿಯಲ್ಲಿ ಮೊಳಗಿತು ಕನ್ನಡದ ಕಹಳೆ : ಕುಂದಾನಗರಿಯಲ್ಲಿ ಹರಡಿತು ಕನ್ನಡದ ಕಂಪು

ಬೆಳಗಾವಿ : ಅಬ್ಬಾ ಎಲ್ಲಿ ನೋಡಿದರು ಕನ್ನಡ ಬಾವುಟ, ಕನ್ನಡ ತಾಯಿಗೆ ಜಯಘೋಷ ಇದು ಕುಂದಾನಗರಿಯಲ್ಲಿ ರಾಜ್ಯೋತ್ಸವ ದಿನವಾದ ಬುಧವಾರದ ಸನ್ನಿವೇಶ. ಬೆಳಗಾವಿಯಲ್ಲಿ ಬುಧವಾರ ಅದ್ದೂರಿಯಾಗಿ ಕನ್ನಡದ ಹಬ್ಬ ರಾಜ್ಯೋತ್ಸವವನ್ನು ಆಚರಿಸಲಾಗಿದ್ದು, ಲಕ್ಷಾಂತರ ಕನ್ನಡಿಗರು ಇದಕ್ಕೆ ಸಾಕ್ಷಿಯಾದರು. 


  ನೂರಕ್ಕೆ ಹೆಚ್ವು ರೂಪಕಗಳ ಮೆರವಣಿಗೆಯೊಂದಿಗೆ ಬೆಳಗಾವಿಯಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವಕ್ಕೆ ಮತ್ತಷ್ಟು ಕಳೆ ಬಂದಿತು. ಇದರಿಂದ ಸಂಪೂರ್ಣ  ಬೆಳಗಾವಿ ನಗರವು ಕನ್ನಡಮಯವಾಗಿತ್ತು.

   ಎಲ್ಲಿ ನೋಡಿದಲ್ಲಿ ಕನ್ನಡ ಬಾವುಟ, ಕನ್ನಡ ಹಾಡುಗಳು ಕನ್ನಡವನ್ನು ಸಾರಿದವು. ಚನ್ನಮ್ಮ ವೃತ್ತದ ಸುತ್ತಮುತ್ತ ಲಕ್ಷಾಂತರ ಜನ ಜಮಾವಣೆಗೊಂಡಿದ್ದರು. ಉತ್ತರ ಕರ್ನಾಟಕ ಭಾಗದ ಹಲವು ಜಿಲ್ಲೆಗಳಿಂದ ಜನ ಆಗಮಿಸಿದ್ದರು. ಡಿಜೆ ಸೌಂಡ್ ಗೆ ಭರ್ಜರಿ ಸ್ಟೆಪ್ಸ್ ಹಾಕಿದ ಯುವಕ, ಯುವತಿಯರು.ನಗರದಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತತೆಗೊಂಡಿತ್ತು.


    ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಮಂಗಳವಾರ ತಡರಾತ್ರಿ ನಗರದ ಚನ್ನಮ್ಮ ವೃತ್ತದಲ್ಲಿ ಸಾವಿರಾರು ಕನ್ನಡಿಗರು ಸಿಡಿಮದ್ದು ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಅಲ್ಲದೆ  ಬುಧವಾರ ಬೆಳಿಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ‌ ಅವರು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿದರು. 

   ನಂತರ ತಾಯಿ ಭುವನೇಶ್ವರಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಕೊನೆಗೆ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ರೂಪಕಗಳ ಮೆರವಣಿಗೆಗೆ ಸಚಿವ ಜಾರಕಿಹೊಳಿ ಚಾಲನೆ ನೀಡಿ ರಾಣಿ ಚನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿದರು.‌

  ಇಂದಿನ ರಾಜ್ಯೋತ್ಸವ ಮೆರವಣಿಗೆಯಲ್ಲಿ 100ಕ್ಕೂ ಹೆಚ್ಚು ರೂಪಕ ವಾಹನಗಳು ಭಾಗಿಯಾಗಿದ್ದವು. ಕನ್ನಡ ಪರ ಸಂಘಟನೆಗಳಿಂದ ಒಟ್ಟು 75ಕ್ಕೂ ಹೆಚು ರೂಪಕಗಳ ತಯಾರಿಸಲ್ಪಟ್ಟಿದ್ದ ರೂಪಗಳ ವಾಹನಗಳು ನೋಡುಗರ ಮನ ಸೆಳೆದವು. ಅಲ್ಲದೆ, ಪರಿಸರ ಸಂರಕ್ಷಣೆ, ಕನ್ನಡ ಹೋರಾಟಗಾರರ, ಸಾಹಿತಿಗಳ ಮಾಹಿತಿ ಒಳಗೊಂಡಿರುವ ರೂಪಕ ವಾಹನಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ರೂಪಕಗಳ ಮೆರವಣಿಗೆಯು ಬುಧವಾರ ತಡರಾತ್ರಿ ವರೆಗೆ ನಡೆಯಿತು.

 ಸಮಾಜ ಸೇವಕರಿಂದ  ಕನ್ನಡಿಗರಿಗೆ ಬಾಳೆಹಣ್ಣು,ಜಿಲೆಬಿ ವಿತರಣೆ :



ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವಕ್ಕೆ ರಾಜ್ಯದ ವಿವಿಧ ಮೂಲೆಗಳಿಂದ ‌ಆಗಮಿಸಿದ ಕನ್ನಡಿಗರಿಗೆ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮಹಾಂತೇಶ ವಕ್ಕುಂದ ಸೇರಿದಂತೆ ಹಲವು ಸಮಾಜ ಸೇವಕರು ಬಾಳೆಹಣ್ಣು, ಜಿಲೆಬಿ ಹಂಚಿ ಸೇವೆ ಸಲ್ಲಿಸಿದರು.

    ನಗರದ ಚೆನ್ನಮ್ಮ ವೃತ್ತದಲ್ಲಿ ಸೇರಿದ ಲಕ್ಷಾಂತರ ಕನ್ನಡಿಗರಿಗೆ  ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮಹಾಂತೇಶ ವಕ್ಕುಂದ, ಜಾನಕಿ ಸೇವಾ ಸಂಘದ ಅಧ್ಯಕ್ಷ ಡಾ.ಉಮೇಶ ಆಚಾರ್ಯ,ಕೆಪಿಸಿಸಿ ಸದಸ್ಯೆ ಆಯಿಷಾ ಸನದಿ,ಸಮಾಜ ಸೇವಕ ವೀರೇಶ ಕಿವಡಸಣ್ಣವರ, ಕಾಂಗ್ರೆಸ್ ಮುಖಂಡ ಅಡಿವೇಶ ಇಟಗಿ ವಾಜಿದ್ ಹಿರೆಕೊಡಿ ಅವರಿಂದ ಬಾಳೆ ಹಣ್ಣು, ಜಿಲೆಬಿ ವಿತರಣೆ ಮಾಡಿದರು‌. ಹಸಿದು ಬಂದವರ ಹೊಟ್ಟೆ ತಣ್ಣಗೆ ಮಾಡಿದ ಇವರಿಗೆ ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿಸಿದರು.

    ಅಷ್ಟೇ ಅಲ್ಲದೇ ಬೆಳಗಾವಿ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಕನ್ನಡ ರಾಜ್ಯೋತ್ಸವ ನೋಡೊದಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಕನ್ನಡಿಗರು ಆಗಮಿಸಿದ್ದು ಅವರಿಗೆ ತೊಂದರೆ ಆಗಬಾರದು ಅಂತಾ ಬಾಳೆಹಣ್ಣು ಸೇವೆ ಮಾಡಿದ್ದೇವೆ‌.ನಮ್ಮ ಕೈಲಾದಷ್ಟು ಸಹಾಯ ಮಾಡಿದ್ದೇವೆ.ಮುಂದಿನ ವರ್ಷವೂ ನಮ್ಮ ಸಮಾಜ ಸೇವೆ ಮುಂದುವರೆಯುತ್ತದೆ ಎಂದು ತಿಳಿಸಿದರು.




     


ಸುದ್ದಿ ಓದಿ