ಬೆಳಗಾವಿಯಲ್ಲಿ ಸಂಚಾರಿ ಪೊಲೀಸರಿಗೆ ಅವಾಜ್ ಹಾಕಿ ದಬ್ಬಾಳಿಕೆ ಮಾಡಿದ ಖಾಸಗಿ ಬಸ್ ಚಾಲಕ, ನಿರ್ವಾಹಕ : ಕೈ ಕೈ ಮಿಲಾಯಿಸುವ ಹಂತಕ್ಕೆ ಇಳಿದ ಚಾಲಕ
ಬೆಳಗಾವಿ, ಜ, 28 : ತಮ್ಮ ಸೇವೆ ನಿರ್ವಹಿಸುತ್ತಿದ್ದ ಇಬ್ಬರು ಸಂಚಾರಿ ಪೊಲೀಸ್ ಪೇದೆಗಳಿಗೆ ಖಾಸಗಿ ಬಸ್ ಚಾಲಕ ಹಾಗೂ ನಿರ್ವಾಹಕ ಇಬ್ಬರು ಸೇರಿ ಆವಾಜ್ ಹಾಕಿ ದಬ್ಬಾಳಿಕೆ ಮಾಡಿ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದ ಘಟನೆ ಶನಿವಾರ ರಾತ್ರಿ ಬೆಳಗಾವಿಯಲ್ಲಿ ನಡೆದಿದೆ.
ಶನಿವಾರ ರಾತ್ರಿ 8 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದ್ದು, ಶನಿವಾರ ಬೆಳಗಾವಿ ಖಾಸಗಿ ಹೋಟೆಲ್ ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಜೆಪಿ ಮುಖಂಡರ ಸಭೆ ನಡೆಸಿದ್ದರು. ಆದರೆ ಈ ವೇಳೆ ಸಂಗೋಳ್ಳಿ ರಾಯಣ್ಣ ( ಆರ್ ಟಿಓ) ವೃತ್ತದಲ್ಲಿ ಖಾಸಗಿ ಬಸ್ ವೊಂದು ಹೊರಟ್ಟಿತ್ತು. ಆವಾಗ ಆರ್ ಟಿಓ ವೃತ್ತದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ಸಂಚಾರಿ ಪೊಲೀಸರು ಖಾಸಗಿ ಬಸ್ ಚಾಲಕನಿಗೆ ಅಮಿತ್ ಶಾ ಅವರ ಸಭೆ ನಡೆಯುತ್ತಿದ್ದ ರಸ್ತೆ ಕಡೆಗೆ ಹೋಗದಂತೆ ಸೂಚಿಸಿದರು.
ಅದನ್ನು ಲೆಕ್ಕಿಸದೆ ಬಸ್ ಚಾಲಕ ಹಾಗೂ ನಿರ್ವಾಹಕ ಅತ್ತ ಸಾಗುವ ವಿಚಾರವಾಗಿ ವಾದ ವಿವಾದ ನಡೆದು ಕೊನೆಯಲ್ಲಿ ಖಾಸಗಿ ಬಸ್ ನ ಚಾಲಕ ಮತ್ತು ನಿರ್ವಾಹಕ ಇಬ್ಬರು ಪೊಲೀಸರಿಗೆ ಅವಾಜ್ ಹಾಕಿ ಮಾತಿಗೆ ಮಾತು ಬೆಳೆಸಿದರು. ಬಳಿಕ ಕೈ ಕೈ ಮಿಲಾಯಿಸುವ ಮಟ್ಟಕ್ಕೆ ಚಾಲಕ ಇಳಿಯುತ್ತಿದ್ದಂತೆ ಅಲ್ಲಿದ್ದ ಕೆಲವರು ಮಧ್ಯ ಪ್ರವೇಶ ಮಾಡಿ ಇದಕ್ಕೆ ಅಂತ್ಯ ಹಾಕಲಾಯಿತು. ಆದರೆ ಖಾಸಗಿ ಬಸ್ ಚಾಲಕ ನಿರ್ವಾಹಕನ ವರ್ತನೆಯಿಂದ ಸಾರ್ವಜನಿಕರು ಸಂಚಾರ ದಟ್ಟನೆ ಉಂಟಾಗಿ ಬಸ್ಸಿನ ಚಾಲಕನಿಗೆ ಹಿಡಿ ಶಾಪ ಹಾಕುವಂತಾಯಿತು.