ರಾಜ್ಯ ರಾಜಕಾರಣ, ಕಾಂಗ್ರೆಸ್ ಹಾಳಾಗಲು ಡಿಕೆಶಿ, ಹೆಬ್ಬಾಳಕರ್ ಕಾರಣ : ಹರಿದ ಚಪ್ಪಲಿ ಹಾಕಿ ಜಂಗ್ಲಿ ವ್ಯಕ್ತಿಯಾಗಿದ್ದ ಡಿಕೆಶಿ ಸಾವಿರಾರು ಕೋಟಿ ಒಡೆಯ ಆಗಿದ್ದು ಹೇಗೆ : ರಮೇಶ

ರಾಜ್ಯ ರಾಜಕಾರಣ, ಕಾಂಗ್ರೆಸ್ ಹಾಳಾಗಲು ಡಿಕೆಶಿ, ಹೆಬ್ಬಾಳಕರ್ ಕಾರಣ : ಹರಿದ ಚಪ್ಪಲಿ ಹಾಕಿ ಜಂಗ್ಲಿ ವ್ಯಕ್ತಿಯಾಗಿದ್ದ ಡಿಕೆಶಿ ಸಾವಿರಾರು ಕೋಟಿ ಒಡೆಯ ಆಗಿದ್ದು ಹೇಗೆ : ರಮೇಶ

ಬೆಳಗಾವಿ : ರಾಜ್ಯದ ಹಣ ಲೂಟಿ‌ ಮಾಡಿ ಆಗರ್ಭ ಶ್ರೀಮಂತ ಆಗಿರುವ ಮಿಸ್ಟರ್ ಡಿ.ಕೆ ಶಿವಕುಮಾರ್ ರಾಜಕಾರಣಿ ಆಗಲು ನಾಲಾಯಕ್, ರಾಜ್ಯದ ರಾಜಕಾರಣ, ಕಾಂಗ್ರೆಸ್ ಹಾಳಾಗಲು ಡಿಕೆ ಶಿವಕುಮಾರ್ ಬೆಳಗಾವಿ ಗ್ರಾಮೀಣ ಶಾಸಕಿ ಕಾರಣ. ಇನ್ನು ಮುಂದೆ ಏನೇ ಸಂಘರ್ಷ ಆದರೂ ಅದಕ್ಕೆ ಇವರಿಬ್ಬರು ಕಾರಣ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಇಂದಿಲ್ಲಿ ಹೇಳಿದರು.

    ನಗರದಲ್ಲಿ ಸೋಮವಾರ ಬೆಳಿಗ್ಗೆ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ನಾನು ಸಹಕಾರ ಸಚಿವನಾಗಿದ್ದಾಗ ಬೆಂಗಳೂರಿನ ಶಾಂತಿನಗರದ ಒಂದು ಕೋ ಆಫ್ ಬ್ಯಾಂಕಿನಲ್ಲಿ 10 ಸಾವಿರ ಕೋಟಿ ವ್ಯವಹಾರದ ಪೈಲನ್ನು ಕ್ಲೋಜ್ ಮಾಡಲು ಡಿಕೆಶಿ ಒತ್ತಾಯಿಸಿದ್ದರು, ಆದರೆ ಅದನ್ನು ರಾಜ್ಯ ಹಿತದೃಷ್ಟಿಯಿಂದ ನಾನು‌ ಕ್ಲೋಜ್ ಮಾಡಿ ಜನರಿಗೆ ಮೋಸ ಮಾಡಲು ಒಪ್ಪಲಿಲ್ಲ. ಅದಕ್ಕಾಗಿ ಅಲ್ಲಿಂದ ನಮ್ಮಲ್ಲಿ ವೈಮನಸು ಪ್ರಾರಂಭವಾಯಿತು ಎಂದು ನುಡಿದರು. ಆ ದುಡ್ಡು ಡೈವೊರ್ಟ್ ಆಗಿ ಎಲ್ಲಿ ಹೋಗಿದೆ. ಬ್ಯಾಂಕಿನ‌ ಖಾತೆ ಡೈವೋರ್ಟ್ ಆಗಿದೆ. ಈ ಕುರಿತು ಸರಕಾರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

    1985ರಲ್ಲಿ ಪ್ರಥಮಬಾರಿಗೆ ಡಿಕೆಶಿ ಮತ್ತು ನಾನು ವಿಧಾನ ಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ್ದೇವು‌. ಆವಾಗ ಡಿ.ಕೆ.ಶಿವಕುಮಾರ್ ಅವರು ಹರಿದ ಚಪ್ಪಲಿ ಹಾಕಿಕೊಂಡು, ಎಚ್.ಎಮ್.ಟಿ ವಾಚ್ ಹಾಕಿಕೊಂಡು ಜಂಗ್ಲಿ ಮನುಷ್ಯನ ಹಾಗೆ ಇಲ್ಲಿಗೆ ಬರುತ್ತಿದ್ದರು. ಅಂತಹ ವ್ಯಕ್ತಿ ಇವತ್ತು ಸಾವಿರಾರು ಕೋಟಿಯ ಒಡೆಯನಾಗಿ ಗ್ಲಾಸ್ ಹೌಸ್ ನಲ್ಲಿ ಕುಳಿತ್ತಿದ್ದಾರೆ ಅದು ಹೇಗೆ ಸಾದ್ಯ ಎಂದು ಪ್ರಶ್ನಿಸಿದರು. ಆದರೆ ನಾನು ಮಾತ್ರ ಬಡತನದಿಂದ ಬಂದು ಉದ್ಯಮವನ್ನು ಸ್ಥಾಪಿಸಿ ಮುಂದೆ ಬಂದವನು. 

   ಆದರೆ ಡಿಕೆ.ಶಿವಕುಮಾರ್ ಆತನನ್ನು ನಾನು ರಾಜಕೀಯವಾಗಿ ಮುಗಿಸುತ್ತೇನೆ ಎಂಬ ಭಯದ ಹಿನ್ನೆಲೆಯಲ್ಲಿ ನನ್ನ ವಿರುದ್ಧ ಡಿಸಿ ಕೇಸ್ ನಲ್ಲಿ ಕುತಂತ್ರದಿಂದ ಸಿಲುಕಿ ಹಾಕಿಸಿದ್ದಾನೆ ಎಂದು ದೂರಿದರು. ನಾನು ಡಿಕೆ ಶಿವಕುಮಾರ್ 15 ವರ್ಷಗಳ ವರೆಗೆ ಮಿತ್ರರಾಗಿದ್ದೇವು. ಆದರೆ ಬೆಳಗಾವಿಯ ಪಿಎಲ್.ಡಿ ಹಾಗೂ ಗ್ರಾಮೀಣ ಕ್ಷೇತ್ರದ ಹಿನ್ನೆಲೆಯಲ್ಲಿ ನಮ್ಮಿಬ್ಬರಲ್ಲಿ ಬೆಂಕಿ ಪ್ರಾರಂಭ ವಾಯಿತು ಎಂದು ನುಡಿದರು. 

   ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಅಧಿಕಾರ ದಲ್ಲಿದ್ದಾಗ ನನ್ನ ಬಳಿ ಡಿಕೆ ಶಿವಕುಮಾರ್ ಹಾಗೂ ಅವರ ಧರ್ಮಪತ್ನಿ ಉಷಾ ಅಕ್ಕ ಬಂದಿದ್ದರು. ಕಾಂಗ್ರೆಸ್ ಬಿಡಬೇಡ ಎಂದು ಮನವಿ ಮಾಡಿದ್ದರು. ಆದರೆ ಒಂದು ಮಹಿಯ‌ ಮೂಲಕ ನನ್ನ ರಾಜಕಾರಣ ಹಾಳು ಮಾಡಿದ್ದಾರೆ ಎಂದು ಹೇಳಿದರು.    ನನ್ನ ಹಾಗೆ ಈ ಭಾಗದ ಇಬ್ಬರು ಅಧಿಕಾರಿಗಳನ್ನು ಅಶ್ಲೀಲ ಸಿಡಿ ಜಾಲದ ಕೇಸ್ ನಲ್ಲಿ‌ ಸಿಲುಕಿಸಲಾಗಿದೆ. ಆದರೆ ಅದರಲ್ಲಿ ಓರ್ವ ಅಧಿಕಾರಿ ಈಗ ಮೃತಪಟ್ಟಿದ್ದಾರೆ. ಅವನ್ನು ಕೂಡಾ ಬ್ಲಾಕ್ ಮೇಲ್ ಮಾಡಿ ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

    ಕಿತ್ತೂರು ಚನ್ನಮ್ಮನ ಬಗ್ಗೆ ನಾನು ಕೇವಲವಾಗಿ ಮಾತನಾಡಿದ್ದೇನೆ ಎನ್ನುವ ಬಗ್ಗೆ ಮಿಕ್ಷಿಂಗ ಮಾಡಿ ವಿಡಿಯೋ ಒಂದನ್ನು ಹರಿಬಿಟ್ಟು ಚುನಾವಣೆ ಕಾಲಕ್ಕೆ ಅಪಪ್ರಚಾರ ಮಾಡುವ ಬಗ್ಗೆ ಸುದ್ದಿ ಇದೆ. ಮುಂದೆ ಎನಾದರು ಆಗುವ ಸಂಘರ್ಷ ಗಳಿಗೆ ಅವರೇ ಹೊಣೆಗಾರಿಕೆ ಯಾಗುತ್ತಾರೆ ಎಂದು ನುಡಿದರು. ಇವರ ಬಳಿ ಸಾವಿರಾರು ಕೋಟಿಗಳ ಕಪ್ಪು ಹಣ ಸಂಗ್ರಹಿಸಿದ್ದಾರೆ, ಅದರ ಕುರಿತು ಸರಕಾರ ತನಿಖೆ ನಡೆಸಲಿ ಎಂದರು. 

   ನನ್ನ ವ್ಯಕ್ತಿತ್ವ ಹೇಗೆ ಅನ್ನೊದು ರಾಜ್ಯಕ್ಕೆ ಗೊತ್ತಿದೆ. ಆದರೆ ನನ್ನ ಘನತೆ ಗೌರವ ವ್ಯಕ್ತಿ ತ್ವ ಹಾಳು ಮಾಡಲು 40 ಕೋಟಿ ಖರ್ಚು ಮಾಡಿ ನನ್ನನ್ನು ಸಿಡಿ ಕೇಸ್ ನಲ್ಲಿ ಸಿಲುಕಿ ಹಾಕಿರುವ ಬಗ್ಗೆ ನನ್ನ ಬಳಿ ವಿಡಿಯೋ ಇದೆ. ಆದರೆ ಆ ವಿಡಿಯೋ ನಾನು ಕಾನೂನು ಹೋರಾಟದ ಸಮಸ್ಯೆ ಯಿಂದ ಬಿಡುಗಡೆ ಮಾಡುತ್ತಿಲ್ಲ. 

   ಸಿಡಿ ಕೇಸ್ ನಲ್ಲು ಷಢ್ಯಂತ್ರ ಮಾಡಿ ಸಿಲುಕಿ ಹಾಕಿಸಿರುವ ಆ ಹೆಣ್ಣು ಮಗಳು ಹಾಗೂ ಅದಕ್ಕೆ ಸಹಕರಿಸಿದ ಶ್ರವಣ ಹಾಗೂ ನರೇಶ ಹಾಗೂ ಮಂಡ್ಯ ಮೂಲದ ಇಬ್ಬರು ಮತ್ತು ಡಿಕೆಶಿ ಅವರ ಬಗ್ಗೆ ಸಿಬಿಐ ತನಿಖೆ ನಡೆಸಿ ಸರಕಾರ ಸತ್ಯಾಸತ್ಯತೆಯನ್ನು ಹೊರಗೆ ತರಲಿ. ಈ ಸಿಡಿ ಕೇಸ್ ನಲ್ಲಿ ನಾನು ಈಗಾಗಲಿ ಎದುರಿಸಿ ಹೊರ ಬಂದಿದ್ದೇನೆ. ರಾಜ್ಯ ಸರಕಾರ ಈ ಸಿಡಿ‌ಕೇಸ್ ನ್ನು ಸಿಬಿಐ ತನಿಖೆಗೆ ಒಪ್ಪಿಸಲಿ ಎಂದು ಒತ್ತಾಯಿಸಿದರು.

   ಆದರೆ 40 ಕೋಟಿ ಖರ್ಚು ಮಾಡಿರು ಡಿಕೆಶಿ ಅವರ ವಿಡಿಯೋ ಅಥವಾ ಅಡಿಯೋ ಬಿಡುಗಡೆ ಯಾಕೆ ಮಾಡಲಿಲ್ಲ‌ ಎಂದು ಮಾಧ್ಯಮದ ವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಗಾಳಿಯಲ್ಲಿ ಗುಂಡು ಹೊಡೆಯುವ ವ್ಯಕ್ತಿ ಅಲ್ಲ.  ನಾನು ಪಲಾಯನ ವಾದಿ ಅಲ್ಲ. ನನ್ನ ಬಳಿ 21 ಈ ವಿಡಿಯೋ ಅಡಿಯೋ ಇವೆ. ಅದರಲ್ಲಿ ಡಿಕೆಶಿ ಅವರು ಲಂಡನ ನಲ್ಲಿ ಮನೆ ಇರುವ ಬಗ್ಗೆ ಪ್ರಸ್ತಾಪ‌ ಮಾಡಿದ್ದಾರೆ ಎಂದರು. ಇದಕ್ಕೆ ಯಾರ ಮನೆ ಇದೆ ಎಂದು ಮಾಧ್ಯಮದ ಪ್ರಶ್ನೆಗೆ ಡಿಕೆ ಅವರ ಗರ್ಲ್ ಫ್ರೆಂಡ್ ಇರಬಹುದು ಎಂದು ತಿಳಿಸಿದರು. ಅಲ್ಲದೆ ನನ್ನ ಸಿಡಿ‌ ಕೇಸ್ ನ ಷಢ್ಯಂತ್ರದಲ್ಲಿ ಇವರಿಬ್ಬರನ್ನು ಬಂಧಿಸಿ ತೀರುವದಾಗಿ ರಮೇಶ ಜಾರಕಿಹೊಳಿ ಸ್ಪಷ್ಟ ಪಡಿಸಿದರು.





ಸುದ್ದಿ ಓದಿ