ಬೆಳಗಾವಿಯ ಜನರ ಗಾಯದ ಮೇಲೆ ಬರೆ ಎಳೆದ ಪ್ರವಾಹ : ಡೆಂಘಿ, ಪ್ರವಾಹದಿಂದ ಕಂಗಾಲಾದ ಜನ

ಬೆಳಗಾವಿಯ ಜನರ ಗಾಯದ ಮೇಲೆ ಬರೆ ಎಳೆದ ಪ್ರವಾಹ : ಡೆಂಘಿ, ಪ್ರವಾಹದಿಂದ ಕಂಗಾಲಾದ ಜನ

ಪಾರೇಶ ಭೋಸಲೆ 

ಬೆಳಗಾವಿ : ಒಂದು ಕಡೆ ನಾಗರಿಕರ ಪ್ರಾಣ ಹಿಂಡುತ್ತಿರುವ ಡೆಂಘಿ ಜ್ವರ, ಇನ್ನೊಂದೆಡೆ ಮಳೆರಾಯನ ಅರ್ಭಟ ನಡುವೆ ನದಿ ತೀರದ ಗ್ರಾಮಗಳಲ್ಲಿ ಪ್ರವಾಹದ ಕಾಟ, ಇವೆಲ್ಲದರ ನಡುವೆ ನದಿಗಳಿಗೆ ಹರಿದು ಬರುತ್ತಿರುವ ಅಪಾರ ಪ್ರಮಾಣದ ನೀರಿನಲ್ಲಿ ನುಗ್ಗಿ ಬರುತ್ತಿರುವ ಮೊಸಳೆಗಳು ಇವು ಗಡಿ ಜಿಲ್ಲೆ ಬೆಳಗಾವಿ ಜನರಲ್ಲಿ ಒಂದರ ಮೇಲೋಂದು ಬೀಳುತ್ತಿರುವ ಹೊಡೆತದಿಂದ ಜನರ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.

ಹೌದು ಓದುಗರೆ.... ಬೆಳಗಾವಿ ಜಿಲ್ಲೆ ಹಾಗೂ ನೆರೆಯ ಮಹಾರಾಷ್ಟçದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ದಾರಕಾರ ಮಳೆಯಿಂದ ಜಿಲ್ಲೆಯ ಎಲ್ಲ ನದಿಗಳು ಉಕ್ಕಿ ಹರಿಯುತ್ತಿದ್ದು, ನದಿ ತೀರದಲ್ಲಿರುವ ಜನರು ಪ್ರವಾಹ ಪರಿಸ್ಥಿತಿಯಿಂದ ಕಂಗೆಟ್ಟು ಹೋಗಿದ್ದಾರೆ. ಇದರ ನಡುವೆ ಡೆಂಘಿ ರೋಗವು ಬೆಳಗಾವಿ ಜಿಲ್ಲೆಯಲ್ಲಿ ತಾಂಡವವಾಡುತ್ತಿದ್ದು, ಜನರ ಗಾಯದ ಮೇಲೆ ಬರೆ ಎಳೆಯುವಂತೆ ಮಾಡಿದೆ. ಸದ್ಯ ಜಿಲ್ಲೆಯಲ್ಲಿ ಮಳೆಯ ಅಬ್ಬರದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.

ಇವೆಲ್ಲಗಳ ನಡುವೆ ಮಹಾರಾಷ್ಟçದ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರಿ ಮಳೆ ನೀರಿನಿಂದ ಬೆಳಗಾವಿ ಜಿಲ್ಲೆಯ ನದಿಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬರುತಿದ್ದು, ಅದರ ಜೊತೆಯಲ್ಲಿ ಬೃಹತ್ ಆಕಾರದ ಮೊಸಳೆಗಳು ಕೂಡಾ ಹರಿದು ಬಂದು ಜಿಲ್ಲೆಯ ನದಿ ತೀರದ ಗ್ರಾಮಗಳ ರೈತರ ಕೃಷಿ ಜಮೀನುಗಳಲ್ಲಿ ನೀರಿನ ದಂಡೆಯಲ್ಲಿ ಕಂಡು ಬರುತ್ತಿರುವದರಿಂದ ನದಿಯ ದಡದಲ್ಲಿ ಬರುವ ಜಮೀನುಗಳಿಗೆ ಕೂಡಾ ರೈತರು ಹೋಗಲು ಹೆದರಿಕೊಳ್ಳುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ. 

ಜಿಲ್ಲೆಯಲ್ಲಿ ದಿನ ನಿತ್ಯ ಡೆಂಘಿ ಕಾಯಿಲೆಯ ಪ್ರಕರಣಗಳು ಹೆಚ್ಚುತ್ತ ಸಾಗಿದ್ದು, ಜನ ಆಸ್ಪತ್ರೆಗಳಿಗೆ ಅಲೆಯುಂತಾಗಿದೆ. ಅಲ್ಲದೆ ಗಡಿ ಹಾಗೂ ನದಿ ತೀರದ ಜನರು ನದಿಗಳಿಗೆ ಉಂಟಾಗಿರುವ ನೀರಿನ ಪ್ರವಾಹದಿಂದ ಹೈರಾಣಾಗಿದ್ದು, ಮನೆ, ಆಸ್ತಿಗಳನ್ನು ಕಳೆದುಕೊಳ್ಳುವ ಭಯ ಒಂದು ಹಂತದಲ್ಲಿ ಕಾಡತೊಡಗಿದೆ. ಆದರೆ ಜಿಲ್ಲೆಯ ಕೆಲವು ಭಾಗದಲ್ಲಿ ಕಾಳಜಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು, ಅವುಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಇಲ್ಲೂ ಕೂಡಾ ಡೆಂಘಿ ಕಾಯಿಲೆ ಬರುವ ಆತಂಕದಲ್ಲಿ ಜನರು ಕಾಲ ಕಳೆಯುವಂತಾಗಿದೆ.

ಸುದ್ದಿ ಓದಿ