ಚಂದ್ರನ ವರೆಗೆ ಚಿಮ್ಮಿದ ಬೆಳಗಾವಿಯ ಕೀರ್ತಿ ಪತಾಕೆ : ಚಂದ್ರಯಾಣ 3 ಯಶಸ್ವಿಗೆ ಬೆಳಗಾವಿಗು ಸಿಂಹಪಾಲು : ಬೆಳಗಾವಿ ವಿಜ್ಞಾನಿಯಿಂದ ವಿಕ್ರಮ್​ ಲ್ಯಾಂಡರ್​ಗೆ ಸೆನ್ಸಾರ್​ ಕೊಡುಗೆ

ಚಂದ್ರನ ವರೆಗೆ ಚಿಮ್ಮಿದ ಬೆಳಗಾವಿಯ ಕೀರ್ತಿ ಪತಾಕೆ : ಚಂದ್ರಯಾಣ 3 ಯಶಸ್ವಿಗೆ ಬೆಳಗಾವಿಗು ಸಿಂಹಪಾಲು : ಬೆಳಗಾವಿ ವಿಜ್ಞಾನಿಯಿಂದ ವಿಕ್ರಮ್​ ಲ್ಯಾಂಡರ್​ಗೆ ಸೆನ್ಸಾರ್​ ಕೊಡುಗೆ

ಪಾರೇಶ ಭೋಸಲೆ

ಬೆಳಗಾವಿ : ಚಂದ್ರಯಾಣ 3 ಯಶಸ್ವಿ ಯಾದ ಹಿನ್ನೆಲೆಯಲ್ಲಿ ದೇಶ ಸೇರಿದಂತೆ ಜಗತ್ತೆ ಹುಬ್ಬೇರಿಸುವಂತೆ ಮಾಡಿದ ಇಸ್ರೊ ಕಾರ್ಯಕ್ಕೆ ಮೆಚ್ವು ವ್ಯಕ್ತವಾಗಿದ್ದು, ಇದರಿಂದ ಬೆಳಗಾವಿಯ ಕೀರ್ತಿ ಪತಾಕೆಯು ಚಂದ್ರನ ವರೆಗೆ ಚಿಮ್ಮಿದೆ. ಚಂದ್ರನ ಮೇಲೆ ಲ್ಯಾಂಡ ಆಗಿರುವ ವಿಕ್ರಮಗೆ ಬೆಳಗಾವಿಯಲ್ಲಿ ತಯಾರಾಗಿದ್ದ ಸೆನ್ಸಾರ್ ಸೇರಿ ಬಿಡಿ ಭಾಗಗಳನ್ನು ನೀಡಿದ ಕೀರ್ತಿ ಬೆಳಗಾವಿಗೆ ಸಲ್ಲುತ್ತದೆ. ಚಂದ್ರನಲ್ಲು ಬೆಳಗಾವಿ ಹೊಸ ಇತಿಹಾಸ ನಿರ್ಮಿಸಲು ಹೆಜ್ಜೆ ಹಾಕಿದೆ ಎನ್ನುವದು ನಮ್ಮೆಲ್ಲರಿಗೆ ಹೆಮ್ಮೆಯ ವಿಷಯವಾಗಿದೆ. ಬೆಳಗಾವಿ ಜಿಲ್ಲೆಯು ಯಾವದರಲ್ಲಿ ಕಡಿಮೆ ಇಲ್ಲ ಅನ್ನುವದನ್ನು ಇಂದು ಸಾಬೀತು ಮಾಡಿದೆ. 


    ಹೌದು ಓದುಗರೇ ಬೆಳಗಾವಿಗೂ ಚಂದ್ರನಿಗು ನಂಟು ಜೋಡಿಸುವ ಕಾರ್ಯವನ್ನು ಇಸ್ರೋ ಸಂಸ್ಥೆ ಮಾಡಿದ್ದು, ಚಂದ್ರಯಾನ 3 ಯಶಸ್ವಿಯಾಗುವಲ್ಲಿ ಬೆಳಗಾವಿ ಜಿಲ್ಲೆಯ ಪಾತ್ರವು ಸೇರಿದೆ ಎನ್ನುವದು ಈಗ ಇತಿಹಾಸವಾಗಿ ಉಳಿದಿದೆ.

    ಬೆಳಗಾವಿಯಲ್ಲಿ ಇರುವ ಕೈಗಾರಿಕಾ ಕೇಂದ್ರ ಒಂದರಲ್ಲಿ ತಯಾರಾದ ಬಿಡಿ ಭಾಗಗಳನ್ನು ಚಂದ್ರಯಾಣ 3 ಯೋಜನೆಗೆ ಉಪಯೋಗಿಸಲಾಗಿದೆ. ಅದರಂತೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತರಗಿ ಗ್ರಾಮದ ಬಳಿ ಇರುವ ಸರ್ವೋ ಕಂಟ್ರೋಲ್ ಎರೋ ಸ್ಪೇಸ್ ಎಂಬ ಕಂಪನಿಯಲ್ಲಿ ತಯಾಗಿರುವ  ಕೆಲ  ಬಿಡಿಭಾಗಗಳನ್ನು ಚಂದ್ರಯಾಣ 3 ಗೆ ಉಪಯೋಗಿಸಲಾಗಿದೆ. 

    ಬೆಳಗಾವಿಯ ವಿಜ್ಞಾನಿ ದೀಪಕ್ ಧಡೂತಿ ಅವರು ಕ್ರಯೋಜನಿಕ್ ಸೆನ್ಸಾರ್ ಸಿದ್ದ ಪಡಿಸಿ ಚಂದ್ರಯಾನ-3ಗೆ ನೀಡಿದ್ದರು ಎನ್ನುವದು ಈಗ ಹೊಸ ಇತಿಹಾಸ ಸೃಷ್ಟಿಸಿದೆ. ಚಂದ್ರಯಾನದಲ್ಲಿ ಯಶಸ್ವಿ ಲ್ಯಾಂಡಿಗ್​ನಲ್ಲಿ ಬೆಳಗಾವಿಯ ವಿಜ್ಞಾನಿ ನೀಡಿದ ಸೆನ್ಸಾರ್​ ಕೂಡ ಪ್ರಮುಖ ಪಾತ್ರ ವಹಿಸಿದೆ. ಈ ಹಿಂದೆ ಅಮೇರಿಕಾದಲ್ಲಿದ್ದ ವಿಜ್ಞಾನಿ ದೀಪಕ್ ಧಡೂತಿ ಅವರು ಅಬ್ದುಲ್ ಕಲಾಂ ಅವರ ಪ್ರೇರಣೆಯಿಂದ ಭಾರತಕ್ಕೆ ಬಂದು, ಬೆಳಗಾವಿಯಲ್ಲಿ ತಮ್ಮದೇ ಆದ ಸರ್ವೋ ಕಂಟ್ರೊಲ್ಸ್ ಏರೋಸ್ಪೇಸ್ ಮತ್ತು ಟೆಕ್ನಾಲಜಿ ಪ್ರಾ.ಲಿ ಎಂಬ ಹೆಸರಿನ ಸ್ವಂತ ಕಂಪನಿಯನ್ನು ಸ್ಥಾಪಿಸಿ, ಆ ಕಂಪನಿಗೆ ಎಂಡಿ ಕೂಡ ಅವರೇ ಆಗಿದ್ದಾರೆ.

   ಬುಧವಾರ ಚಂದ್ರನ ಮೇಲೆ ಲ್ಯಾಂಡ್ ಆಗಿರುವ ವಿಕ್ರಂನಲ್ಲಿ ಕ್ರಯೋಜನಿಕ್ ಸೆನ್ಸಾರ್ ಇದ್ದು,ಕಳೆದ ಇಪ್ಪತ್ತು ವರ್ಷದಿಂದ ಬೆಳಗಾವಿಯಲ್ಲಿ ತಮ್ಮದೆ ಕಂಪನಿ ನಡೆಸುತ್ತಿರುವ ಬೆಳಗಾವಿಯ ವಿಜ್ಞಾನಿ ದೀಪಕ್ ಧಡೂತಿ ಅವರು ಸ್ಥಾಪಿಸಿದ ಈ ಕಂಪನಿಯಲ್ಲಿ ಸೆನ್ಸಾರ್​ಗಳನ್ನು ಸಿದ್ದಪಡಿಸಿರುತ್ತಾರೆ. ಚಂದ್ರಯಾನ-3ಗೆ ಕ್ರಯೋಜನಿಕ್ ಸೆನ್ಸಾರ್ ಸ್ಪೇಸ್‌ ಹೆಸರಿನ ಸೆನ್ಸಾರ್ ಸಿದ್ದಪಡಿಸಿ ಎರಡು ವರ್ಷದ ಹಿಂದೆ ಇದನ್ನು ಇಸ್ರೊ ಸಂಸ್ಥೆಗೆ ನೀಡಿದ್ದರು. ಇದನ್ನು ಸೊಲಾರ ಪ್ಯಾನಲ್ ಎನರ್ಜಿ ಸಲುವಾಗಿ ಮತ್ತು ವಿಕ್ರಮ್​ನ ಮೊಮೆಂಟ್ ಕಂಟ್ರೋಲ್ಸೆನ್​ನಲ್ಲಿ ಇದನ್ನು ಬಳಕೆ ಮಾಡುತ್ತಾರೆ ಎನ್ನಲಾಗಿದೆ.

   ಇದೀಗ ವಿಕ್ರಮ್​ ಲ್ಯಾಂಡರ್ ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದೆ. ಇದರಲ್ಲಿ ಬೆಳಗಾವಿ ವಿಜ್ಞಾನಿ ನೀಡಿದ್ದ ಸೆನ್ಸಾರ್​ ಕೂಡ ಅಳವಡಿಸಲಾಗಿದ್ದು, ಈ ವಿಷಯವು ಬೆಳಗಾವಿಗರಿಗೆ ಹೆಮ್ಮೆಯ ವಿಷಯವಾಗಿದೆ.

    ಜುಲೈ 14ರಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೊ ಚಂದ್ರಯಾನ-3 ಯನ್ನು ಉಡಾವಣೆ ಮಾಡಿತ್ತು. ಇದೀಗ ವಿಕ್ರಮ್​ ಲ್ಯಾಂಡರ್ ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದೆ. ಚಂದ್ರನ ಕಡೆಗೆ 34 ದಿನಗಳ ಸುದೀರ್ಘ ಪ್ರಯಾಣದ ನಂತರ ಇದೀಗ ಲ್ಯಾಂಡ್​ ಆಗಿದ್ದು, ಇಡೀ ಭಾರತೀಯರ ಜೊತೆಗೆ ಬೆಳಗಾವಿಗರು ಹೆಚ್ವು ಹೆಮ್ಮೆಪಡುವಂತೆ ಮಾಡಿದೆ. 

ಚಂದ್ರಯಾನ 3 ಯಶಸ್ವಿಗೆ ಖಾನಾಪುರದ ಪಾಲಿಗೂ ಹೆಮ್ಮೆ : 


   ಬುಧವಾರ ಚಂದ್ರಯಾನ-3 ಉಪಗ್ರಹ ಯಶಸ್ವಿಯಾಗಿ ಲ್ಯಾಂಡ ಆಗಿದ್ದು, ಈ ಉಪಗ್ರಹದ ಯಶಸ್ಸಿನ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ಗ್ರಾಮೀಣ ಭಾಗದ ಬಡ ಕುಟುಂಬದಿಂದ ಬಂದ ಯುವ ಪ್ರತಿಭೆಯೊಬ್ಬರ ಶ್ರಮವೂ ಅಡಗಿದೆ.

 ಖಾನಾಪೂರ ತಾಲ್ಲೂಕಿನ ಕಾಪೋಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅನಗಡಿ ಗ್ರಾಮದ ಯುವ ವಿಜ್ಞಾನಿ ಪ್ರಕಾಶ ನಾರಾಯಣ ಪೇಡಣೇಕರ 2019ರಿಂದ ಇಸ್ರೋದಲ್ಲಿ ಸೇವೆ ಸಲ್ಲಿಸುತ್ತಿದ್ದು, ಚಂದ್ರನೆಡೆಗೆ ಧಾವಿಸಿದ ಚಂದ್ರಯಾನ-3 ಉಪಗ್ರಹದ ಯಶಸ್ಸಿನಲ್ಲಿ ಪ್ರಕಾಶ ಅವರ ಪಾತ್ರವೂ ಅಡಗಿದೆ ಎಂಬುದು ಹೆಮ್ಮೆಯ ಸಂಗತಿ.

    32 ವಯಸ್ಸಿನ ಅಂತರಿಕ್ಷ ವಿಜ್ಞಾನಿ ಪ್ರಕಾಶ ಅವರ ತಂದೆ ಕೃಷಿಕನಾಗಿದ್ದು, ತಾಯಿ ಗೃಹಿಣಿಯಾಗಿದ್ದಾರೆ. ಪ್ರಕಾಶ ಅವರು ಅನಗಡಿ ಗ್ರಾಮದಲ್ಲಿ ಮರಾಠಿ ಮಾಧ್ಯಮದಲ್ಲಿ ಪ್ರಾಥಮಿಕ, ಕಾಪೋಲಿಯ ಮರಾಠಾ ಮಂಡಳ ಪ್ರೌಢಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರೈಸಿ ಬೆಳಗಾವಿಯ ಜಿ.ಎಸ್.ಎಸ್ ಕಾಲೇಜಿನಲ್ಲಿ ಪಿಯು ವಿಜ್ಞಾನ ಮತ್ತು ಜಿಐಟಿಯಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಪದವಿಯನ್ನು ಉನ್ನತ ಶ್ರೇಣಿಯೊಂದಿಗೆ ಪಡೆದಿದ್ದಾರೆ. ಮುಂಬೈನ ವಿವಿಡಿಪಿ ವಿಶ್ವವಿದ್ಯಾಲಯದಲ್ಲಿ ಅಂತರಿಕ್ಷದಲ್ಲಿ ಮಾಸ್ಟರ್ ಡಿಗ್ರಿ ಪಡೆದಿರುವ ಅವರು ಇಸ್ರೋದಲ್ಲಿ ಸೇವೆ ಸಲ್ಲಿಸಲು ಆರಂಭಿಸಿದ ದಿನಗಳಿಂದಲೂ ಮೂನ್ ಮಿಷನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 

     ಪ್ರಕಾಶ ಅವರು ಚಂದ್ರಯಾನ- 2ರ ತಂಡದಲ್ಲೂ ಸೇವೆಯಲ್ಲಿದ್ದರು. ಚಂದ್ರಯಾನ-2ರ ಅಪಯಶದಿಂದ ಧೃತಿಗೆಡದ ಮೂನ್ ಮಿಷನ್ ತಂಡ ಚಂದ್ರಯಾನ-3ರ ಯಶಸ್ಸಿಗೆ ಶ್ರಮಿಸಿದ್ದು, ಎರಡರಲ್ಲೂ ಪ್ರಕಾಶ ಅವರ ಪಾಲು ಇರುವುದು ಖಾನಾಪುರಿಗರ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ.

ಚಂದ್ರಯಾಣ ತಂಡದಲ್ಲಿ ನಿಪ್ಪಾಣಿ ತಾಲೂಕಿನ ವಿಜ್ಞಾನಿ ಭಾಗಿ : 


    ಅದೇ ರೀತಿಯಾಗಿ ಬುಧವಾರ ಸಂಜೆ ಚಂದ್ರನ ಮೇಲೆ ಲ್ಯಾಂಡ ಆಗಿರುವ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಲು ಶ್ರಮಿಸಿದ ದೇಶದ ವಿಜ್ಞಾನಿಗಳಲ್ಲಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಆಡಿ ಗ್ರಾಮದ ಕೇರಬಾ ಲೋಹಾರ ಅವರು ಭಾಗಿಯಾಗಿರುವದು ಬೆಳಗಾವಿ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ.

ಸುದ್ದಿ ಓದಿ