ಕೂಲಿಂಗ್ ಗ್ಲಾಸ್ ವಾಹನಗಳ ವಿರುದ್ದ ಬೆಳಗಾವಿ ನಗರ ಸಂಚಾರಿ ಪೊಲೀಸರ ಕಾರ್ಯಾಚರಣೆ : 19 ಕೇಸು ದಾಖಲು
ಬೆಳಗಾವಿ : ನಗರದಲ್ಲಿ ಕಪ್ಪು ಪರದೆ (ಕೂಲಿಂಗ್ ಗ್ಲಾಸ್) ಅಳವಡಿಸಿಕೊಂಡು ಅಲೇದಾಡುತ್ತಿರುವ 19 ವಾಹನಗಳ ವಿರುದ್ದ ಬೆಳಗಾವಿ ನಗರ ಸಂಚಾರಿ ಪೊಲೀಸರು ಕೇಸು ದಾಖಲಿಸುವ ಮೂಲಕ ಗುರುವಾರದಿಂದ ಕಾರ‍್ಯಾಚರಣೆಗೆ ಇಳಿದಿದ್ದಾರೆ.
ಗುರುವಾರ ಬೆಳಗಾವಿ ಉತ್ತರ ಸಂಚಾರಿ ಠಾಣೆಯಲ್ಲಿ 10 ಮತ್ತು ದಕ್ಷಿಣ ಸಂಚಾರಿ ಪೊಲೀಸ ಠಾಣೆಯಲ್ಲಿ 9 ಕೇಸು ದಾಖಲಾಗಿವೆ. ಅದೇ ರೀತಿ ಒಟ್ಟು 9500 ರೂಗಳ ದಂಡ ವಿಧಿಸಲಾಯಿತು. ಪೋಲಿಸ ಅಧಿಕಾರಿಗಳು ತಿಳಿಸಿದ್ದಾರೆ.
ಕಾರು ಸೇರಿದಂತೆ ಕೆಲ ವಾಹನಗಳಿಗೆ ಕೂಲಿಂಗ್ ಗ್ಲಾಸ್ ಅಳವಡಿಸದಂತೆ ಸರಕಾರದ ನಿರ್ದೇಶನ ಇದ್ದರೂ ಕೆಲ ವಾಹನಗಳ ಸವಾರರು ಕೂಲಿಂಗ್ ಗ್ಲಾಸ್ ಅಳವಡಿಕೊಂಡು ಅಲೇದಾಡುತ್ತಿದ್ದಾರೆ. ಅಲ್ಲದೆ ಈ ಕೂಲಿಂಗ್ ಗ್ಲಾಸ್ ಅಳವಡಿಸಿಕೊಂಡಿರುವ ಅಸಂಬಂಧಿತ ಚಟುವಟಿಕೆಗಳಿಗೆ ಕಡಿವಾನ ಹಾಕುವ ನಿಟ್ಟಿನಲ್ಲಿ ಬೆಳಗಾವಿಯ ಸಂಚಾರಿ ಪೊಲೀಸರು ಕೂಲಿಂಗ್ ಗ್ಲಾಸ್ ವಾಹನಗಳ ವಿರುದ್ದ ಸಮರ ಸಾರಿದ್ದಾರೆ.
ಗುರುವಾರ ದಿನದಂದು ಕೂಲಿಂಗ್ ಗ್ಲಾಸ್ ವಾಹನಗಳ ವಿರುದ್ದ ಕರ‍್ಯಾಚರಣೆ ನಡೆಸಿರುವ ಸಂಚಾರಿ ಪೊಲೀಸರು ಶುಕ್ರವಾರ ಕೂಡಾ ಈ ಕರ‍್ಯಾಚರಣೆಯನ್ನು ಮುಂದೆವರಿಸಲಾಗುವದು ಎಂದು ಸಂಚಾರಿ ವಿಭಾದ ಎಸಿಪಿ ತಿಳಿಸಿದ್ದಾರೆ.