ಸಂಚಾರಿ ಸಮಸ್ಯೆ ಪರಿಹರಿಸಲು ದಿಢೀರ್ ಸ್ವತಃ ರಸ್ತೆಗೀಳಿದು ಗಮನ ಸೆಳೆದ ಬೆಳಗಾವಿ ಎಸ್ ಪಿ : ಕಕ್ಕಾಬಿಕ್ಕಿಯಾದ ಜನ, ಪೊಲೀಸರಿಗೆ ಶಾಕ್

ಸಂಚಾರಿ ಸಮಸ್ಯೆ ಪರಿಹರಿಸಲು ದಿಢೀರ್ ಸ್ವತಃ ರಸ್ತೆಗೀಳಿದು ಗಮನ ಸೆಳೆದ ಬೆಳಗಾವಿ ಎಸ್ ಪಿ : ಕಕ್ಕಾಬಿಕ್ಕಿಯಾದ ಜನ, ಪೊಲೀಸರಿಗೆ ಶಾಕ್

ಸಂಕೇಶ್ವರ : ಜನದಟ್ಟನೆ ಬಗ್ಗೆ ಕೆಲವು ದೂರುಗಳು ಬಂದ್ ಹಿನ್ನೆಲೆಯಲ್ಲಿ ತಮ್ಮ ಇಲಾಖೆಯ ಅಧಿಕಾರಿಗಳಿಗೆ ಯಾವದೇ ಸುಳಿವು ನೀಡದೆ ತಾವೇ ಸ್ವತಃ ರಸ್ತೆ ಸಂಚಾರದ ವ್ಯವಸ್ಥೆ ಸರಿಪಡಿಸಲು ಬೆಳಗಾವಿ ಎಸ್ ಪಿ ಡಾ. ಸಂಜೀವ ಪಾಟೀಲ ಅವರು ದಿಢೀರ್ ರಸ್ತೆಗೆ ಇಳಿದ ಪ್ರಸಂಗ ಜಿಲ್ಲೆಯ ಸಂಕೇಶ್ವರ ಪಟ್ಟಣದಲ್ಲಿ ನಡೆದಿದೆ.


    ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ಸಜೀವ ಪಾಟೀಲ ಅವರಿಗೆ ಸಂಕೇಶ್ವರದ ಪ್ರಮುಖ ರಸ್ತೆಗಳಲ್ಲಿ ವಾಹನಗಳನ್ನು ಪಾರ್ಕ್ ಮಾಡುತ್ತಿರುವ ವಾಹನ ಸವಾರರ ಬಗ್ಗೆ ದೂರುಗಳು ಸಲ್ಲಿಕೆಯಾಗಿದ್ದವು. 

   ಈ ಬಗ್ಗೆ ಕ್ರಮಕ್ಕೆ ಮುಂದಾದ ಡಾ. ಸಂಜೀವ ಪಾಟೀಲ ಅವರು ಮಂಗಳವಾರ ಮಧ್ಯಾಹ್ನ ಬೆಳಗಾವಿಯಿಂದ ಹೊರಟು‌ ನೇರವಾಗಿ ಸಂಕೇಶ್ವರದ ಬಸ್ ನಿಲ್ದಾಣದ‌ ಬಳಿಯ ಸರ್ಕಲ್ ಗೆ ಆಗಮಿಸಿ ರಸ್ತೆ ತುಂಬೇಲ್ಲಾ ನಿಲ್ಲಿಸಲಾಗಿದ್ದ ಬೇಕಾಬಿಟ್ಟಿ ವಾಹನ ಸವಾರರಿಗೆ ಬಿಸಿ ಮುಟ್ಟಿಸಿದ್ದಾರೆ. ಬಳಿಕ ಪಿಎಸ್ ಐ ಹಾಗೂ ಪೊಲೀಸ ಸಿಬ್ಬಂದಿಗಳನ್ನು ಸ್ಥಳಕ್ಕೆ ಬರುವಂತೆ ಸೂಚಿಸಿದ್ದಾರೆ. 


   ಬಳಿಕ ಬಂದ ಪಿಎಸ್ ಐ ಹಾಗೂ ಸಿಬ್ಬಂದಿಗಳಿಗೆ ಎಸ್ ಪಿ ಸಂಜೀವ ಪಾಟೀಲ ಅವರ ಕಾರ್ಯ ನೋಡಿ ಜನಾ ಕಕ್ಕಾಬಿಕ್ಕಿಯಾಗಿದ್ದಾರೆ. ಅಲ್ಲದೆ ಠಾಣೆಗೆ ಬರುವ ಜನರ ಜೊತೆ ಹರಟೆ ಹೊಡೆಯುತ್ತ ಕಾಲ  ಕಾಲ ಹರಣ ಮಾಡುತ್ತಿದ್ದ ಕೆಲ ಸಿಬ್ಬಂದಿಗಳಿಗೆ ಎಸ್ ಪಿ ರಸ್ತೆಗೀಳಿದು ಕಾರ್ಯ ಮಾಡುತ್ತಿರುವದನ್ನು ಕಂಡು ಶಾಕ್ ಆಗಿದೆ. 


   ಬಳಿಕ ರಸ್ತೆಯಲ್ಲಿ ನಿಂತಿದ್ದ ಕೆಲ ವಾಹನ ಸವಾರರಿಗೆ ದಂಡ ವಿಧಿಸಲಾಯಿತು. ಠಾಣೆಯಲ್ಲಿ ಇದ್ದು ಕೆಲಸ ಮಾಡದ ಸಿಬ್ಬಂದಿಗಳ ಕಾರ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅಲ್ಲಿನ ನಾಗರಿಕರು ಎಸ್ ಪಿ ಅವರ ಈ ಕಾರ್ಯಕ್ಕೆ ಮೆಚ್ವುಗೆ ವ್ಯಕ್ತಪಡಿಸಿದ್ದಾರೆ. 

ಸುದ್ದಿ ಓದಿ