ಫೋನ್ ಇನ್ ಕಾರ್ಯಕ್ರಮದಿಂದ ಜಿಲ್ಲೆಯ ಜನರ ಮನ ಗೆದ್ದಿದ್ದ ಬೆಳಗಾವಿ ಎಸ್ ಪಿ ಡಾ. ಸಂಜೀವ ಪಾಟೀಲ ವರ್ಗಾವಣೆ

ಫೋನ್ ಇನ್ ಕಾರ್ಯಕ್ರಮದಿಂದ ಜಿಲ್ಲೆಯ ಜನರ ಮನ ಗೆದ್ದಿದ್ದ ಬೆಳಗಾವಿ ಎಸ್ ಪಿ ಡಾ. ಸಂಜೀವ ಪಾಟೀಲ ವರ್ಗಾವಣೆ

ಬೆಳಗಾವಿ : ಫೋನ್ ಇನ್ ಕಾರ್ಯಕ್ರಮ ಮಾಡುವ ಮೂಲಕ ಜನರ ಸಮಸ್ಯೆ ಆಲಿಸಿ, ಜಿಲ್ಲೆಯ ಜನರ ಕಷ್ಟಗಳಿಗೆ ಸ್ಪಂದಿಸಿ ಪರಿಹಾರ‌ ನೀಡುವ ಮೂಲಕ ಜನಮನ ಗೆದ್ದಿದ್ದ ಹಾಗೂ ಅಪರಾಧ ಕೃತ್ಯಗಳನ್ನು ಅಲ್ಪ ಸಮಯದಲ್ಲಿ ಬಯಲು ಮಾಡುತ್ತಿದ್ದ ಬೆಳಗಾವಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಅವರ ವರ್ಗಾವಣೆ ಮಾಡಲಾಗಿದೆ.

   ಈ ಹಿಂದೆ ಬೆಳಗಾವಿ ಎಸ್ ಪಿ ಆಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿದ್ದ ಲಕ್ಷ್ಮಣ ನಿಂಬರಗಿ ಅವರ ವರ್ಗಾವಣೆ ಬಳಿಕ ಬೆಳಗಾವಿ ಎಸ್ ಪಿ ಆಗಿ ಅಧಿಕಾರ ವಹಿಸಿಕೊಂಡಿದ್ದ ಡಾ. ಸಂಜೀವ ಪಾಟೀಲ ಅವರು‌ ಕೂಡಾ ಪ್ರಾಮಾಣಿಕ ಹಾಗೂ ದಕ್ಷತೆಯಿಂದ ಕೆಲಸ ಮಾಡುತ್ತಿದ್ದರು. 

    ಪ್ರತಿ ತಿಂಗಳು ಮೂರನೇ ಶನಿವಾರ ದಂದು ಫೋನ್ ಇನ್ ಕಾರ್ಯಕ್ರಮ ಮಾಡುವ ಮೂಲಕ ಬೆಳಗಾವಿ ಜಿಲ್ಲೆಯ ಜನರ ಸಮಸ್ಯೆಗಳನ್ನು ಆಲಿಸಿ‌ ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಿದರೆ ಇನ್ನು ಕೆಲವು ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡುವ ಮೂಲಕ ಜನರ ಮನಗೆದ್ದಿದ್ದರು. ಈ ಹಿನ್ನೆಲೆಯಲ್ಲಿ ಎಸ್ ಪಿ ಡಾ. ಸಂಜೀವ ಪಾಟೀಲ ಅವರ ಈ ಫೋನ್ ಇನ್ ಕಾರ್ಯಕ್ರಮಕ್ಕೆ ಹೊರ ಜಿಲ್ಲೆಗಳಿಂದಲೂ ಕರೆಗಳು ಬರುತ್ತಿದ್ದವು.

   ಅಲ್ಲದೆ ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಪರಾಧ ಕೃತ್ಯಗಳನ್ನು ಕೆಲವೆ ಗಂಟೆಗಳಲ್ಲಿ ಬಯಲಿಗೆ ತರುವಲ್ಲಿ ತಮ್ಮ ತಮ್ಮ ಕೆಳ ಅಧಿಕಾರಿಗಳ ಜೊತೆ ಸಮನ್ವಯತೆಯಿಂದ ಕಾರ್ಯ ನಿರ್ವಹಸಿ ಆರೋಪಿತರನ್ನು ಬಂಧಿಸುವ ಕಾರ್ಯ ಮಾಡುತ್ತಿದ್ದರು.

    ಅಲ್ಲದೆ ಪುಂಡ ಪೊಕರಿಗಳ ವಿರುದ್ದ ಸದಾ ಸೂಕ್ಷ್ಮವಾಗಿ ಕಾರ್ಯ ಮಾಡುತ್ತಿದ್ದ ಡಾ. ಸಂಜೀವ ಪಾಟೀಲ ಅವರ ಈ ವರ್ಗಾವಣೆಯಿಂದ ಜನರು ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸುವಂತಾಗಿದೆ. 

   ‌ಇದರಿಂದ ಬೆಳಗಾವಿ ಜಿಲ್ಲೆಯಲ್ಲಿ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯ ‌ಮಾಡಲು ಅಧಿಕಾರಿಗಳಿಗೆ ಸರಕಾರ ಅವಕಾಶ ನೀಡುವದಿಲ್ಲ ಎನ್ನುವದು ಸಾಬೀತು ಇದರಿಂದ ಸಾಬೀತು ಆಗಿದೆ ಎನ್ನುವ ಮಾತು ಜಿಲ್ಲೆಯ ಜನರಿಂದ ಕೇಳಿ ಬರುತ್ತಿದೆ. 

       

ಸುದ್ದಿ ಓದಿ