ಬೆಳಗಾವಿ ದಂಡು ಮಂಡಳಿ ಸಿಇಒ ಕೆ. ಆನಂದ ಸಂಶಯಾಸ್ಪದ ಸಾವು :
ಬೆಳಗಾವಿ : ಬೆಳಗಾವಿ ದಂಡು ಮಂಡಳಿ ಸಿಇಒ ಕೆ. ಆನಂದ ಅವರು ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ಶನಿವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಬೆಳಗಾವಿಯ ಕ್ಯಾಂಪ್ ಪ್ರದೇಶದ ತಮ್ಮ ನಿವಾಸದಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದ್ದು, ಇದು ಆತ್ಮಹತ್ಯೆಯೋ ಅಥವಾ ಹತ್ಯೆಯೋ ಎಂಬುವದು ಪೊಲೀಸ ತನಿಖೆಯುಂದ ತಿಳಿದು ಬರಬೇಕಿದೆ.
ಬೆಳಗಾವಿ ದಂಡು ಮಂಡಳಿಯಲ್ಲಿ ಒಂದುವರೆ ವರ್ಷಗಳಿಂದ ಸಿಇಒ ಆಗಿ ಸೇವೆ ಸಲ್ಲಿಸುತ್ತಿದ್ದ ಕೆ.ಆನಂದ್ ಮೂಲತಃ ತಮಿಳುನಾಡಿನವರು. ಇಂದು ಅವರ ಮನೆ ಬಾಗಿಲು ತೆಗೆಯದೇ ಇದ್ದಾಗ ಸಿಬ್ಬಂದಿ ಕ್ಯಾಂಪ್ ಪೊಲೀಸರಿಗೆ ಮಾಹಿತಿ ನೀಡಿದಾಗ ಆನಂದ್ ಶವವಾಗಿ ಪತ್ತೆಯಾಗಿದ್ದಾರೆ.
ದಂಡು ಮಂಡಳಿಯಲ್ಲಿ ಅಕ್ರಮ ನೇಮಕ ಸಂಬಂಧ ವಾರದ ಹಿಂದೆ ಸಿಬಿಐ ಅಧಿಕಾರಿಗಳು ದಂಡು ಮಂಡಳಿ ಕಚೇರಿ ಮೇಲೆ ದಾಳಿ ನಡೆಸಿದ್ದರು. ಇದರ ಬೆನ್ನಿಗೆ ಇದೀಗ ಸಿಇಒ ಆನಂದ್ ಆತ್ಮಹತ್ಯೆ ಚರ್ಚೆಗೆ ಗ್ರಾಸವಾಗಿದೆ.