ಮಹಲಿಂಗಪುರ

ನಾಡಿನ ದೊರೆಯ ಸ್ವಾಗತಕ್ಕೆ ತಪ್ಪದೇ ಆಗಮಿಸಿ: ಸಿದ್ದು ಸವದಿ.

ನಾಡಿನ ದೊರೆಯ ಸ್ವಾಗತಕ್ಕೆ ತಪ್ಪದೇ ಆಗಮಿಸಿ: ಸಿದ್ದು ಸವದಿ.

ಮಹಾಲಿಂಗಪುರ: ಡನಾಡಿನ ದೊರೆ ಬಸವರಾಜ ಬೊಮ್ಮಾಯಿ ಸಸಾಲಟ್ಟಿ ಏತ ನೀರಾವರಿ ಯೋಜನೆ ಮತ್ತು ಇತರೆ ಕಾಮಗಾರಿಗಳ ಉದ್ಘಾಟನೆಗೆ ಫೆ. 26 ರ ರವಿವಾರ ಸಮೀಪದ ರಬಕವಿಗೆ ಆಗಮಿಸುತ್ತಿದ್ದು,ಮಹಾಲಿಂಗಪುರ ಮತ್ತು ಸುತ್ತಮುತ್ತಲಿನ ಸಾರ್ವಜನಿಕರು ಸಾಗರೋಪಾದಿಯಲ್ಲಿ ಆಗಮಿಸಿ 'ಸರ್ವರಿಗೂ ಸಮಪಾಲು ಸರ್ವರಿಗೂ ಸಮ ಬಾಳು' ಎಂಬ ಜನಪರ ಬಜೆಟ್ ಘೋಷಿಸಿದ ಅವರಿಗೆ ಕೃತಜ್ಞತೆ ಅರ​‍್ಿಸಲು ಆ ಮೂಲಕ ಮೋದಿಯವರ ಕೈ ಬಲಪಡಿಸಲು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿದ್ದು ಸವದಿ ಕರೆ ನೀಡಿದರು.  

ಗುರುವಾರ ಸಂಜೆ ಸ್ಥಳೀಯ ನೀಲಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ಕರೆದ ಮುಖ್ಯಮಂತ್ರಿಗಳ ಆಗಮನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷವೆಂದರೆ ದೇಶಭಕ್ತಿ, ಅದು  ಹಿಂದೂ ರಾಷ್ಟ್ರದ ಸಂಸ್ಕೃತಿ. ಬಿಜೆಪಿ ಸೋತರೆ ಪ್ರತಿಯೊಬ್ಬ ಭಾರತೀಯನ ಭವಿಷ್ಯ ಕರಾಳವಾಗುತ್ತದೆ, ಸ್ವಾರ್ಥಕ್ಕೆ ದೇಶ ಬಲಿಕೊಡಬೇಡಿ, ಅತಿ ಕಡಿಮೆ ಅವಧಿಯಲ್ಲಿ ರಾಜ್ಯ ಮತ್ತು ರಾಷ್ಟ್ರಕ್ಕೆ ಅಭಿವೃದ್ಧಿಯಲ್ಲಿ ಹಾಗೂ ಆರ್ಥಿಕತೆಯಲ್ಲಿ ಅಗ್ರಸ್ಥಾನ, ಭದ್ರತೆ, ಇಡೀ ಜಗತ್ತಿನ ಮನ್ನಣೆ ಒದಗಿಸಿ ಕೊಟ್ಟ ಮೋದಿಜಿಯವರ ಮತ್ತು ಬಿಜೆಪಿ ಪಕ್ಷದ ಆಡಳಿತ ದೇಶದ ನೆಮ್ಮದಿಗೆ ಮತ್ತು ಪ್ರತಿಯೊಬ್ಬ ಭಾರತೀಯನ ಶಾಂತಿಯ ಜೀವನಕ್ಕೆ ಅನಿವಾರ್ಯವಾಗಿದೆ, ಮೋದಿ ಸೋತರೆ ಭಾರತ ಮತ್ತೊಂದು ಪಾಕಿಸ್ತಾನವಾಗುತ್ತದೆ ಹಾಗಾಗಿ ಸರ್ವರೂ ಮುಖ್ಯಮಂತ್ರಿಗಳ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅವರಿಗೆ ಖುಷಿ ನೀಡಿ ಇನ್ನೂ ಹೆಚ್ಚಿನ ಅಭಿವೃದ್ಧಿಯನ್ನು ಘೋಷಿಸುವಂತೆ ಹಾಗೂ ನಮ್ಮ ಕ್ಷೇತ್ರವನ್ನು ನೆನಪಿಡುವಂತೆ ಮಾಡಬೇಕೆಂದು ಅವರು ಕೋರಿದರು.  

ರಮೇಶ ಬಾವಿಕಟ್ಟಿ ಮತ್ತು ರವಿ ಮಾದೇವ ಹುಣಶ್ಯಾಳ ಬಿಜೆಪಿ ಪಕ್ಷಕ್ಕೆ ಸೇರೆ​‍್ಡಯಾದರು.  

ಮುಖಂಡರಾದ ಜಿ.ಎಸ್‌.ಗೊಂಬಿ, ಸಂಗಪ್ಪ ಹಲ್ಲಿ, ಮನೋಹರ ಶಿರೋಳ ಮಾತನಾಡಿದರು. ನಗರ ಘಟಕದ ಅಧ್ಯಕ್ಷ ಶ್ರೀಮಂತ ಹಳ್ಳಿ ಸ್ವಾಗತಿಸಿದರು.  

ಪುರಸಭಾ ಅಧ್ಯಕ್ಷ ಬಸವರಾಜ ಹಿಟ್ಟಿನಮಠ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಸನಗೌಡ ಪಾಟೀಲ,  ಈರ​‍್ಪ ದಿನ್ನಿಮನಿ, ಧರೆಪ್ಪ ಉಳ್ಳಾಗಡ್ಡಿ, ಅಶೋಕಗೌಡ ಪಾಟೀಲ, ಮಹಾಲಿಂಗಪ್ಪ ಕುಳ್ಳೊಳ್ಳಿ, ಲಕ್ಕಪ್ಪ ಚಮಕೇರಿ, ಸಜನಸಾಬ ಪೆಂಡಾರಿ, ಈರ​‍್ಪ ಚುನಮರಿ, ಎಂ. ಎಸ್‌. ಮುಗಳಖೋಡ ಇತರರಿದ್ದರು.  

ಈ ಹಿಂದೆ ನಾವು ಕಾಂಗ್ರೆಸ್ ಪಕ್ಷದಲ್ಲಿದ್ದರೂ ನಮ್ಮ ಸರ್ವ ಸಂಕಷ್ಟಗಳಿಗೆ ಸ್ಪಂದಿಸಿ ರಾಜ್ಯದ ನೇಕಾರರ ಸ್ಥಿತಿಗತಿ ಎತ್ತಿ ಹಿಡಿದು ಸರ್ಕಾರದ ಗಮನಕ್ಕೆ ತಂದು ನೇಕಾರರಿಗೆ ಹೊಟ್ಟೆ ತುಂಬಾ ಊಟ, ನೆಮ್ಮದಿ, ಸೌಲಭ್ಯ ಕಲ್ಪಿಸಿದ ಶಾಸಕ ಸಿದ್ದು ಸವದಿ ಮತ್ತು ಬಿಜೆಪಿ ಸರ್ಕಾರದ ಕಾರ್ಯಕ್ಕೆ ನಾವು ಮನಸೋತಿದ್ದೇವೆ,  ಆದರೂ ಕೆಲವರು ಜಾತಿಯ ವಿಷ ಬೀಜ ಬಿತ್ತಿ ಬಿಜೆಪಿಯನ್ನು ಒಡೆಯುವ ಮತ್ತು ಅನಾವಶ್ಯಕ ಅವಹೇಳನ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ, ನಮ್ಮನ್ನು ಹಾಗೂ ನಮ್ಮ ಸಮಾಜವನ್ನು ಎತ್ತಿ ಹಿಡಿದ ಬಿಜೆಪಿ ಪಕ್ಷ ಮತ್ತು ನಾಯಕರಿಗೆ ನಾವು ಕೃತಜ್ಞತೆ ಅರ​‍್ಿಸಬೇಕಾಗಿದೆ, ನಮ್ಮ ಮನೆಯಲ್ಲಿಯೇ ಅನಾರೋಗ್ಯಕೀಡಾದಾಗ ಕಾಂಗ್ರೆಸ್ ಪಕ್ಷದ ಯಾವ ನಾಯಕರೂ ನಮ್ಮ ಸಹಾಯಕ್ಕೆ ಬರಲಿಲ್ಲ ಬದಲಾಗಿ ಸಿದ್ದು ಸವದಿ ಅವರು ಪಕ್ಷ ಭೇದವಿಲ್ಲದೆ ನಮ್ಮ ಸಹಾಯಕ್ಕೆ ಬಂದರು ಹಾಗಾಗಿ ನೇಕಾರರು ಅಂಥವರ ಮನಸ್ಸನ್ನು ಅರ್ಥಮಾಡಿಕೊಳ್ಳಬೇಕು:  ನೂತನವಾಗಿ ಪಕ್ಷ ಸೇರೆ​‍್ಡಗೊಂಡಬಾಗಲಕೋಟೆ ಜಿಲ್ಲಾ ನೇಕಾರ ಸಂಘದ ಅಧ್ಯಕ್ಷ  ರಮೇಶ ಬಾವಿಕಟ್ಟಿ.  




ಸುದ್ದಿ ಓದಿ