ಸಾಮಾನ್ಯರ ಕೈಗೆಟುಕುವ ವೈದ್ಯರಾಗಿ
ಬೆಣಚನಮರಡಿ ಹೇಳಿಕೆ | ಸಾಧಕ ವಿದ್ಯಾರ್ಥಿಗಳ ಸತ್ಕಾರ ಸಮಾರಂಭ
ಮೂಡಲಗಿ 12: ಸಾಧನೆಯನ್ನು ಮಾದರಿಯಾಗಿಟ್ಟುಕೊಂಡು, ಸಾಮಾಜಿಕ ಮೌಲ್ಯಗಳನ್ನು ತೋರುವ ನಿಟ್ಟಿನಲ್ಲಿ ಜನ ಸಾಮಾನ್ಯರ ಕೈಗೆಟುಕುವಂತಹ ವೈದÀ್ಯರಾಗಬೇಕು ಎಂದು ನಿವೃತ್ತ ತಾಲೂಕಾ ವೈದ್ಯಾಧಿಕಾರಿ ಡಾ. ಆರ್.ಎಸ್ ಬೆಣಚನಮರಡಿ ಹೇಳಿದರು.
ಅವರು ಪಟ್ಟಣದ ಈರಣ್ಣ ದೇವಸ್ಥಾನದ ಕೆ.ಎಚ್ ಸೋನವಾಲಕರ ಕಲ್ಯಾಣ ಮಂಟಪದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕಸಾಪ ಮೂಡಲಗಿ ಘಟಕಗಳ ಸಂಯುಕ್ತಾಶ್ರಯದಲ್ಲಿ 2020-21ನೇ ಸಾಲಿನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಸಾಧಕ ವಿದ್ಯಾರ್ಥಿಗಳ ಸತ್ಕಾರ ಸಮಾರಂಭದಲ್ಲಿ ಮಾತನಾಡಿದರು.
ತಹಶೀಲ್ದಾರ ಡಿ.ಜೆ ಮಹಾತ ಮಾತನಾಡಿ, ಪ್ರಾಥಮಿಕ ಶಿಕ್ಷಣವು ಭದ್ರ ಬುನಾದಿಯಾಗಿರುತ್ತದೆ. ಉತ್ತಮ ಶಿಕ್ಷಣ ಪ್ರಜ್ಞಾವಂತ ನಾಗರಿಕರನ್ನಾಗಿಸುತ್ತದೆ. ವಿದ್ಯಾರ್ಥಿ ದಿಸೆಯಿಂದ ಅವುಗಳನ್ನು ಮೈಗೊಡಿಸಿಕೊಂಡಾಗ ಮಾತ್ರ ಯಶಸ್ಸು ಪಡೆಯಲು ಸಾಧ್ಯ ಎಂದು ಕಿವಿ ಮಾತುಗಳನ್ನು ಹೇಳಿದರು. ಸಿಪಿಐ ವೆಂಕಟೇಶ ಮುರನಾಳ, ಕಸಾಪ ಸರ್ವಾಧ್ಯಕ್ಷ ಪ್ರೋ ಸಂಗಮೇಶ ಗುಜಗೊಂಡ ಮಾತನಾಡಿ, ನಿರಂತರವಾಗಿ ತಮ್ಮನ್ನು ಕಲಿಕೆಯಲ್ಲಿ ಪಾಲ್ಗೊಳ್ಳಿಸಿ, ಭಯ ಮುಕ್ತರಾಗಿ ಪರೀಕ್ಷೆಗಳನ್ನು ಎದುರಿಸಬೇಕು ಎಂದು ನುಡಿದರು.
ಪ್ರಾಸ್ತಾವಿಕವಾಗಿ ಬಿಇಒ ಅಜಿತ ಮನ್ನಿಕೇರಿ ಮಾತನಾಡಿದರು.
ಕೆ.ಎಮ್.ಎಫ್ ರಾಜ್ಯಾಧ್ಯಕ್ಷ ಹಾಗೂ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ಕಛೇರಿಯಿಂದ ಸಾಧಕ ವೈಧ್ಯಕೀಯ ವಿದ್ಯಾರ್ಥಿಗಳಿಗೆ ವೆದÀ್ಯಕೀಯ ಸ್ಥೆಥಾಸ್ಕೋಪ್, ಇತರರಿಗೆ ನಗದು ಹಣವನ್ನು ನೀಡಿ ಪ್ರೋತ್ಸಾಹಿಸಲಾಯಿತು. ಕಸಾಪದಿಂದ ಸತ್ಕರಿಸಿ ಅಭಿನಂದನಾ ಪತ್ರ ನೀಡಲಾಯಿತು.
ಸಮಾರಂಭದಲ್ಲಿ ಮೇಘಾ ಸಂಸ್ಥೆಯ ಸಂಸ್ಥಾಪಕ ಮಲ್ಲಪ್ಪ ಗಾಣಿಗೇರ, ಕಸಾಪ ಅಧ್ಯಕ್ಷ ಸಿದ್ರಾಮ ದ್ಯಾಗಾನಟ್ಟಿ, ನಿವೃತ್ತ ಗ್ರಂಥಪಾಲಕ ಬಿ.ಪಿ ಬಂದಿ, ಮುಖ್ಯೋಪಾಧ್ಯಯರಾದ ರಮೇಶ ಅಳಗುಂಡಿ, ಗೀತಾ ಕರಗಣ್ಣಿ, ಸಾಧಿಕ ಬಿದರಿ, ಸುಭಾಸ ವಲ್ಯಾಪೂರ, ಸಂಪನ್ಮೂಲ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.