ಬೆಳಗಾವಿ

ರೇಬೀಸ್ ರೋಗದ ಬಗ್ಗೆ ಎಚ್ಚರ ಇರಲಿ : ಡಾ. ಮೋಹನ ಕಮತ

ರೇಬೀಸ್ ರೋಗದ ಬಗ್ಗೆ ಎಚ್ಚರ ಇರಲಿ : ಡಾ. ಮೋಹನ ಕಮತ

ಲೋಕದರ್ಶನ ವರದಿ 

ಮೂಡಲಗಿ 25 : ‘ಮಾರಣಾಂತಿಕ ರೋಗವಾಗಿರುವ ರೇಬೀಸ್ ರೋಗದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡುವುದು ಅವಶ್ಯವಿದೆ’ ಎಂದು ಮೂಡಲಗಿಯ ಪಶು ಪಾಲನಾ ಹಾಗೂ ಪಶು ವೈದ್ಯಕೀಯ ಇಲಾಖೆಯ  ಸಹಾಯಕ ನಿರ್ದೇಶಕ ಡಾ. ಮೋಹನ ಕಮತ ಅವರು ಹೇಳಿದರು.  

ಇಲ್ಲಿಯ ಶ್ರೀ ಮಂಜುನಾಥ ಶಿಕ್ಷಣ ಸಂಸ್ಥೆಯ ಪ್ರೌಢ ಶಾಲೆ ಹಾಗೂ ಸೈನಿಕ ತರಬೇತಿ ಕೇಂದ್ರದ ಪ್ರಶಿಕ್ಷಣಾರ್ಥಿಗಳಿಗೆ ‘ರೇಬೀಸ್ ರೋಗದ ತಡೆಗಟ್ಟುವಿಕೆ’ ಹಾಗೂ ಅದರ ನಿಯಂತ್ರಣ ಕುರಿತು ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಾಯಿ ಕಚ್ಚಿದರೆ ನಿರ್ಲಕ್ಷತೆ ಮಾಡದೆ ರೇಬೀಸ್ ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಎಂದರು.  

ಲೈಸಾ ವೈರಾಣುವಿನಿಂದ ಬರುವ ರೋಗವು ನಾಯಿ, ಬೆಕ್ಕು ಮುಂಗುಸಿ, ಬಾವುಲಿಗಳಿಂದ ಹರಡುವ ರೋಗವಾಗಿದೆ. ಭಾರತದಲ್ಲಿ ಪ್ರತಿ ವರ್ಷವೂ ಅಂದಾಜು 30 ಸಾವಿರ ಜನರು ರೇಬೀಸ್ ಕಾಯಿಲೆಗೆ ಬಲಿಯಾಗುತ್ತಿದ್ದಾರೆ.

ಭಾರತದಲ್ಲಿ  2030ರ ಒಳಗಾಗಿ ಭಾರತವನ್ನು ರೇಬೀಸ್ ಮುಕ್ತ ದೇಶವನ್ನಾಗಿಸುವ ನಿಟ್ಟಿನಲ್ಲಿ ಸರ್ಕಾರವು ರೇಬೀಸ್ ಬಗ್ಗೆ ಜನರಲ್ಲಿ ಅರಿವು ಮೂಡಿಸತ್ತಲಿದೆ ಎಂದರು. ಮೂಡಲಗಿ ಮತ್ತು ಗೋಕಾಕ ತಾಲ್ಲೂಕುಗಳಲ್ಲಿ ರೇಬೀಸ್ ಕಾಯಲೆ ಬಗ್ಗೆ ಶಾಲೆ, ಕಾಲೇಜುಗಳಲ್ಲಿ ಜಾಗೃತ ಕಾರ್ಯಕ್ರಮಗಳನ್ನು ಮಾಡಲಾಗಿದೆ ಎಂದರು.  


ಸುದ್ದಿ ಓದಿ