ಶಾಂತಿ ಕದಡುವ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆಯಾಗಲಿ: ಅಬ್ದುಲ್ ನಬಿ
ಸಿರುಗುಪ್ಪ 21: ಕನ್ನಡ ನಾಡಿನ ಈ ನೆಲದ ಅನ್ನ ತಿಂದು ಇಲ್ಲಿನ ಯೋಜನೆಗಳ ಈ ಫಲಾನುಭವಿಗಳಾಗಿದ್ದು ಭಾಷೆಯ ಹೆಸರಿನಲ್ಲಿ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಜನ ಇದ್ದಾರೆ ಅವರು ಸ್ಥಳೀಯರೊಂದಿಗೆ ಅನೋನ್ಯವಾಗಿ ಬೆರೆತು ಬಾಳುತ್ತಿದ್ದಾರೆ ಆದರೆ ಬೆಳಗಾವಿ ಭಾಗದಲ್ಲಿ ಕೆಲವು ಮುಖಂಡರು ಭಾಷೆಯ ಹೆಸರಿನಲ್ಲಿ ಮುಗ್ಧರನ್ನು ದಾರಿ ತಪ್ಪಿಸುತ್ತಿದ್ದಾರೆ ಇದು ಖಂಡನೀಯ ಎಂದು ಕನ್ನಡ ಜಾಗೃತಿ ಸಮಿತಿ ಸದಸ್ಯ ಅಬ್ದುಲ್ ನಬಿ ಹೇಳಿದರು.
ಭಾಷಾಪ್ರೇಮ ಮೆರೆದು ಬಳಿಕ ಅಷ್ಟೇ ಬೇಗ ಮರೆತು ಬಿಡುವ ನಮ್ಮ ಜನ ಪ್ರತಿನಿಧಿಗಳು ಈ ಬಗೆಯ ಉಪಟಳವನ್ನು ಗಂಭೀರವಾಗಿ ಪರಿಗಣಿಸಬೇಕು ಶಾಂತಿ ಕದಡುವಂಥಹ ಪ್ರಯತ್ನ ಮಾಡುವ ಭಾಷಾಂಧರಿಗೆ ತಕ್ಕ ಶಿಕ್ಷೆ ಆಗಬೇಕು ಸರಕಾರ ಈ ವಿಚಾರದಲ್ಲಿ ದೃಢ ನಿರ್ಧಾರ ಕೈಗೊಳ್ಳಬೇಕು ಎಂದು ಕನ್ನಡಾಭಿಮಾನಿಗಳಾದ ಖಾಜಿ ಸೈಯದ್ ಅಬ್ದುಲ್ ರಜಾಕ್ ಖಾದ್ರಿ, ಹಾಜಿ ಸೈಯದ್ ಮೊಹಿದ್ದೀನ್ ಖಾದ್ರಿ, ಹಾಜಿ ಹಂಡಿ ಹುಸೇನ್ ಬಾಷಾ, ಬಿಕೆ ಅಲ್ಲಾಭಕ್ಷಿ ,ಮೊಹಮ್ಮದ್ ಇಬ್ರಾಹಿಂ, ಮೊಹಮ್ಮದ್ ರಫಿ, ಮೊಹಮ್ಮದ್ ನೌಶಾದ್ ಅಲಿ, ಮೊಹಮ್ಮದ್ ಖಲೀಲ್ ಮೊದಲಾದವರು ಸಲಹೆ ನೀಡಿದ್ದಾರೆ.