ಬಳ್ಳಾರಿ

ಶೂನ್ಯ ಸಂಪಾದನೆ ದೊಡ್ಡನಗೌಡರ ಅನುಭಾವದ ನುಡಿಗಳಲ್ಲಿ ಬಯಲು ಗಳಿಕೆಯ ಬೆಳಕಾಯಿತು: ಡಾ. ಸಂಡೂರು

ಶೂನ್ಯ ಸಂಪಾದನೆ ದೊಡ್ಡನಗೌಡರ ಅನುಭಾವದ ನುಡಿಗಳಲ್ಲಿ ಬಯಲು ಗಳಿಕೆಯ ಬೆಳಕಾಯಿತು: ಡಾ. ಸಂಡೂರು

ಬಳ್ಳಾರಿ 11: ಹನ್ನೆರಡನೇ ಶತಮಾನದ ಶರಣರ ವಚನಗಳನ್ನು ಹದಿನೈದನೇ ಶತಮಾನದಲ್ಲಿ ಸಾಂದರ್ಭಿಕ ಸನ್ನಿವೇಶಗಳೊಂದಿಗೆ ಸಂಕಲನ ಗೊಳಿಸಿದ ಕೃತಿಯೇ"ಶೂನ್ಯ ಸಂಪಾದನೆ" ಈ ಕೃತಿ ಗಮಕ ಕಲಾನಿಧಿ ಜೋಳದರಾಶಿ ದೊಡ್ಡನಗೌಡರ ಅನುಭಾವದ ನುಡಿಗಳಲ್ಲಿ "ಬಯಲು ಗಳಿಕೆಯ ಬೆಳಕು"ಆಗಿ ರೂಪುಗೊಂಡಿತೆಂದು ಸರಳಾದೇವಿ ಸತೀಶ್ಚಂದ್ರ ಅಗರ್ವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಡಾ. ತಿಪ್ಪೇರುದ್ರ ಸಂಡೂರು ಇವರು ಅಭಿಪ್ರಾಯಪಟ್ಟರು. 

ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರದರ್ಶನ ಕಲೆ ನಾಟಕ ವಿಭಾಗದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ, 257ನೇ ಮಹಾಮನೆ ಲಿಂ. ಡಾ ಜೋಳದರಾಶಿ ದೊಡ್ಡನಗೌಡರ ದತ್ತಿ ಮತ್ತು ಲಿಂ. ಚನ್ನವೀರ ಗೌಡರ ದತ್ತಿ ಕಾರ್ಯಕ್ರಮದಲ್ಲಿ "ಬಯಲಗಳಿಕೆಯ ಬೆಳಕು" ಎಂಬ ವಿಷಯದ ಕುರಿತು ಉಪನ್ಯಾಸ ಮಾಡುತ್ತಾ, ಶೂನ್ಯ ಸಂಪಾದನೆ ಕೃತಿಯು, ಕೇವಲ ಪಂಡಿತರ ವಲಯದಲ್ಲಿ ಪರಿಚಿತವಾಗಿದ್ದುದನ್ನು ಪಾಮರರೂ ಅರಿತು, ಅರಗಿಸಿಕೊಂಡು ನಾವೂ ಹೇಳಬಲ್ಲೆವೆಂಬ ರೀತಿಯಲ್ಲಿ ಗಮಕ ವಾಚನದ ಮೂಲಕ ಅರ್ಥೈಸಿದವರು ಡಾ ಜೋಳದರಾಶಿ ದೊಡ್ಡನಗೌಡರು. ಜೀವಿತದ ಮೂವತ್ತು ವರ್ಷಗಳ ಕಾಲ ಕರ್ನಾಟಕದ ಬಹುಪಾಲು ಎಲ್ಲ ಮಠಗಳಲ್ಲಿ ಪ್ರವಚನ ಮಾಡಿದ ಹೆಗ್ಗಳಿಕೆ ಗೌಡರದಾಗಿದೆ ಎಂದರು.  

ಕಲೆ ಎಲ್ಲರನ್ನು ಕೈಬೀಸಿ ಕರೆಯುತ್ತದೆ. ಆದರೆ ಕೆಲವರನ್ನು ಮಾತ್ರ ಅದು ಆಯ್ಕೆ ಮಾಡಿಕೊಳ್ಳುತ್ತದೆ.ಎಂದು ಪ್ರದರ್ಶನ ಕಲೆ ನಾಟಕ ವಿಭಾಗದ ಮುಖ್ಯಸ್ಥರಾದ ಪ್ರೊ ಎನ್ ಶಾಂತನಾಯ್ಕರು ಮಾತನಾಡುತ್ತಾ,ಡಾ ಜೋಳದರಾಶಿ ದೊಡ್ಡನಗೌಡರ ಪ್ರತಿಭೆ ಬಹುಮುಖವಾದುದು. ಶ್ರೇಷ್ಠ ಕವಿ, ಸಾಹಿತಿ, ವಾಗ್ಮಿ,ನಾಟಕ ರಚನಕಾರ, ನಟ, ಗಮಕಿ, ಸಂಘಟನಾಕಾರ ಹೀಗೆ ಹಲವು ಸಾಮರ್ಥ್ಯಗಳಿಂದ ಹೆಸರಿಗೆ ತಕ್ಕಂತೆ ದೊಡ್ಡತನಗಳ ದೊಡ್ಡನಗೌಡರೇ ಆಗಿದ್ದರೆಂದರು. 

ಪ್ರದರ್ಶನ ಕಲೆ ನಾಟಕ ವಿಭಾಗದ ಉಪನ್ಯಾಸಕರಾದ ಡಾ ಅಣ್ಣಾಜಿ ಕೃಷ್ಣಾರೆಡ್ಡಿ ಯವರು ಅತಿಥಿ ನುಡಿಗಳನ್ನಾಡುತ್ತಾ, ನಾಟಕ ವಿಭಾಗದ ವಿದ್ಯಾರ್ಥಿಗಳು ಡಾ ಜೋಳದರಾಶಿ ದೊಡ್ಡನಗೌಡರಂತೆ ಶ್ರದ್ಧೆ ಮತ್ತು ಸಮರ​‍್ಣ ಭಾವವನ್ನು ಮೈಗೂಡಿಸಿಕೊಳ್ಳಬೇಕೆಂದರು. ವೇದಿಕೆಯಲ್ಲಿ ದತ್ತಿ ದಾಸೋಹಿಗಳಾದ ನಿವೃತ್ತ ಮುಖ್ಯ ಗುರುಗಳಾದ ಜೋಳದರಾಶಿ ಕೆ.ಪಂಪನಗೌಡರು  ರಾಜೇಶ್ವರಿ,  ಪಾರ್ವತಮ್ಮ ಉಪಸ್ಥಿತರಿದ್ದರು.  

ಎರೆಪ್ಪಗೌಡರು ದೊಡ್ಡನಗೌಡರ ಬೀಳ್ಕೊಡುಗೆಯ ಗೀತೆಯನ್ನು ಹಾಡಿದರು. ನಾಟಕ ವಿಭಾಗದ ವಿದ್ಯಾರ್ಥಿ ಉಷಾ, ವೀರೇಶ ದಳವಾಯಿ ಪ್ರಾರ್ಥನೆ, ರಂಗಗೀತೆಗಳನ್ನು ಹಾಡಿದರು. ಪರಿಷತ್ತಿನ ಅಧ್ಯಕ್ಷರಾದ ಕೆ.ಬಿ.ಸಿದ್ಧಲಿಂಗಪ್ಪ, ದತ್ತಿ ಧಾತೃಗಳ ಪರಿಚಯ ಮಾಡಿ ಶರಣು ಸಮರೆ​‍್ಣ ಮಾಡಿದರು. ನಬಿ ಸ್ವಾಗತ ಕೋರಿದರು. ಎಂ.ಮೀರಾಬಾಯಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. 


ಸುದ್ದಿ ಓದಿ