ತಾಳಿಕೋಟಿ

ಬಸವೇಶ್ವರರ ಮೂರ್ತಿ ಪ್ರತಿಷ್ಠಾಪನೆಗೆ ಜಾಗ ನೀಡಲು ಮನವಿ

ಬಸವೇಶ್ವರರ ಮೂರ್ತಿ ಪ್ರತಿಷ್ಠಾಪನೆಗೆ ಜಾಗ ನೀಡಲು ಮನವಿ

ತಾಳಿಕೋಟೆ 19: ಪಟ್ಟಣದ ಬಸವೇಶ್ವರರ ಅಶ್ವಾರೂಢ ಭವ್ಯ ಮೂರ್ತಿಯನ್ನು ಪ್ರತಿಷ್ಠಾಪಿಸಲು ಬಸವೇಶ್ವರ ವೃತ್ತದಲ್ಲಿ ಜಾಗ ಒದಗಿಸುವಂತೆ ಪಟ್ಟಣದ ಶ್ರೀ ಬಸವೇಶ್ವರ ವೃತ್ತ ಸಮಿತಿ ನೇತೃತ್ವದಲ್ಲಿ ಬಸವಾಭಿಮಾನಿಗಳು ಪಟ್ಟಣದ ಪುರಸಭೆ ಮುಖ್ಯಾಧಿಕಾರಿ, ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಗೆ ಮನವಿಯನ್ನು ಸಲ್ಲಿಸಲಾಯಿತು.

ಪಟ್ಟಣದ ಹೃದಯ ಭಾಗವಾಗಿರುವ ಮತ್ತು ನಾಲ್ಕು ಪ್ರಮುಖ ರಸ್ತೆಗಳು ಕೂಡಿದ್ದು ಈ ಮೊದಲು ಬಿಜಾಪೂರ ಸರ್ಕಲ್ ಎಂದೇ ಕರೆಯಲ್ಪಿಡುತ್ತಿದ್ದ ವೃತ್ತಕ್ಕೆ ಈಗಾಗಲೇ ಬಸವಾಭಿಮಾನಿಗಳು ಬಸವೇಶ್ವರ ವೃತ್ತವೆಂದು ನಾಮಕರಣ ಮಾಡಲಾಗಿದೆ. ಈ ಕುರಿತು ಪುರಸಭೆ ವತಿಯಿಂದ ಬಸವೇಶ್ವರ ವೃತ್ತ ಎಂದು ನಾಮಕರಣ ಮಾಡಲು ಜಿಲ್ಲಾಧಿಕಾರಿಗಳಿಗೆ ನಿರಾಕ್ಷೇಪಣಾ(ಎನ್‍ಓಸಿ) ಸಹ ನೀಡಲಾಗಿದೆ. ವೃತ್ತದಲ್ಲಿ ಬಸವೇಶ್ವರ ಮೂರ್ತಿ ಪ್ರತಿಷ್ಠಾಪಿಸುವದು ಬಸವಾಭಿಮಾನಿಗಳ ಅಪೇಕ್ಷೆಯಾಗಿದೆ. ನಾಲ್ಕು ವೃತ್ತ ರಸ್ತೆಗಳ ಮಧ್ಯೆದಲ್ಲಿ ಮೂರ್ತಿ ಪ್ರತಿಷ್ಠಾಪಿಸಿದರೆ ವಾಹನಗಳ ಸುಗಮ ಸಂಚಾರಕ್ಕೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಹೀಗಾಗಿ ಅದೇ ವೃತ್ತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ ಭವನದ ಬಲಭಾಗಕ್ಕೆ ಹೊಂದಿಕೊಂಡಿರುವ ಮತ್ತು ಪುರಸಭೆ ಮಳಿಗೆಯಾಗಿರುವ ಚೌಡೇಶ್ವರ ಹೊಟೇಲ್‍ನ ಎಡಭಾಗದ ಕೊನೆಯ ಮಳಿಗೆ ಎಲ್ ಆಕಾರದಲ್ಲಿರುವ (ತಾಳಿಕೋಟೆಯ ಹಳೆಯ ನಾಕಾ) ಜಾಗದಲ್ಲಿ ಬಸವೇಶ್ವರರರ ಮೂರ್ತಿ ಪ್ರತಿಷ್ಠಾಪಿಸಲು ಅನಕೂಲ ಮಾಡಿಕೊಡಬೇಕು. ಈ ಜಾಗವನ್ನು ಮಂಜೂರಿ ಮಾಡುವದರಿಂದ ಸಾರ್ವಜನಿಕರಿಗಾಗಿ ಆಗಲಿ ತೊಂದರೆ ಆಗುವದಿಲ್ಲ. ಹೀಗಾಗಿ ಪುರಸಭೆ ಅಧಿನದಲ್ಲಿರುವ ಜಾಗವನ್ನು ವೃತ್ತ ನಿರ್ಮಾಣ ಮಾಡಲು ಅನುಮತಿ ನೀಡಬೇಕು ಎಂದು ಈ ಸಂದರ್ಭದಲ್ಲಿ ಮನವಿ ಮಾಡಲಾಯಿತು. ಮನವಿಯನ್ನು ಸ್ವೀಕರಿಸಿದ ಪುರಸಭೆ ಅಧ್ಯಕ್ಷ ಸಂಗಮೇಶ ಇಂಗಳಿಗಿ, ಉಪಾಧ್ಯಕ್ಷ ಮುಸ್ತಫಾ ಚೌದ್ರಿ, ಮುಖ್ಯಾಧಿಕಾರಿ ಸಿ.ವ್ಹಿ.ಕುಲಕರ್ಣಿ ಈ ಕುರಿತು ಸಭೆಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಕೊಳ್ಳುವದಾಗಿ ತಿಳಿಸಿದರು.

ಹಿರಿಯರಾದ ಜಿ.ಎಸ್.ಕಶೇಟ್ಟಿ, ಪ್ರಭುಗೌಡ ಮದರಕಲ್ಲ, ಕಾಶಿನಾಥ ಮುರಾಳ, ಕಾಶಿನಾಥ ಸಜ್ಜನ, ಎಪಿಎಂಸಿ ಅಧ್ಯಕ್ಷ ಮಲ್ಲನಗೌಡ ಯಾತಗಿರಿ, ಪುರಸಭೆ ಸದಸ್ಯರಾದ ಮುತ್ತಪ್ಪ ಚಮಲಾಪೂರ, ಅಣ್ಣಪ್ಪ ಜಗತಾಪ, ನಿಂಗರಾಜ ಕುಂಟೋಜಿ, ಜಯಸಿಂಗ ಮೂಲಿಮನಿ, ಮುರಗೆಪ್ಪ ಸರಶೇಟ್ಟಿ, ಪ್ರಭು ಬಿಳೆಭಾವಿ, ನಾಗಪ್ಪ ಚಿನಗುಡಿ, ವಿಶ್ವನಾಥ ಬಿದರಕುಂದಿ, ಅಶೋಕ ಚಿನಗುಡಿ, ಜಿ.ಎಸ್. ಜಮ್ಮಲದಿನ್ನಿ, ಸಂಗನಗೌಡ ಅಸ್ಕಿ, ಅಶೋಕ ಜಾಲವಾದಿ, ಮಹಾಂತೇಶ ಮುರಾಳ, ಗಂಗಾಧರ ಕಸ್ತೂರಿ, ರಮೇಶ ಸಾಲಂಕಿ, ಬಸವರಾಜ ಕುಂಬಾರ, ಸಿದ್ದು ಅಸ್ಕಿ, ಅಶೋಕ ಚಿನಗುಡಿ, ಮಲ್ಲು ದುಮಗುಂಡಿ ಸೇರಿದಂತೆ ಇತರರು ಇದ್ದರು.

ಸುದ್ದಿ ಓದಿ