ಕುರುವತ್ತಿ ಸಂಭ್ರಮದ ಬಸವೇಶ್ವರ, ಮಲ್ಲಿಕಾರ್ಜುನ ಸ್ವಾಮಿಯ ರಥೋತ್ಸವ
ಲೋಕದರ್ಶನ ವರದಿ
ಹೂವಿನಹಡಗಲಿ 17: ಐತಿಹಾಸಿಕ ಮತ್ತು ಪೌರಾಣಿಕವಾಗಿ ದಕ್ಷಿಣ ಕಾಶಿಯೆಂದು ಕರೆಯಲ್ಪಡುವ ತುಂಗಭದ್ರಾ ನದಿ ತೀರದಲ್ಲಿ ಶಿವರಾತ್ರಿ ಅಮವಾಸ್ಯೆ ಮಂಗಳವಾರ ದಿನ 5.30ಕ್ಕೆ ಕುರುವತ್ತಿ ಶ್ರೀ ಬಸವೇಶ್ವರ ಮತ್ತು ಶ್ರೀ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡು ಭಕ್ತಿ ಸಮರ್ಿಸಿದರು. ಪ್ರತಿವರ್ಷ ದಂತೆ ಈ ವರ್ಷ ಅಮವಾಸ್ಯೆ ದಿನವಾದ ಮಂಗಳವಾರ ರಥೋತ್ಸವ ನಿಮಿತ್ತ ಬೆಳಿಗ್ಗೆ ಸ್ವಾಮಿಗೆ ರುದ್ರಾಭಿಷೇಕ , ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಸಂಜೆ 5.30ರ ವೇಳೆಗೆ ರಥೋತ್ಸವಕ್ಕೆ ಗಾಲಿಗೆ ತೆಂಗಿನ ಕಾಯಿ ಒಡೆದು, ಸ್ವಾಮಿಗೆ ಪುಷ್ಪಾರ್ಚನೆ ಸಲ್ಲಿಸಿದ ನಂತರ ಹರ ಹರ ಮಹಾದೇವ ಎಂಬ ಜಯ ಘೋಷಣೆ ಯೊಂದಿಗೆ ರಥೋತ್ಸವ ವಿಧ್ಯುಕ್ತ ಚಾಲನೆ ಪಡೆದುಕೊಂಡಿತು.
ನಾಡಿನ ವಿವಿಧೆಡೆಗಳಿಂದ ಬಂದಿದ್ದ ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು. ತಮ್ಮ ಸ್ವಾಮಿಯನ್ನು ಕಣ್ಣುಂಬಿಕೊಂಡು, ಭಕ್ತಿ- ಭಾವಪರವಶರಾದರು. ಕೈ ಮುಗಿದು, ಕಾಯಿ ಒಡೆದು, ಬಾಳೆ ಹಣ್ಣು, ಹೂವು, ಸಮರ್ಿಸಿ ಕೃತಾರ್ಥರಾದರು. ದಾವಣಗೆರೆ, ಶಿವಮೊಗ್ಗ, ಹಾವೇರಿ, ವಿಜಯನಗರ, ಬಳ್ಳಾರಿ ಭಾಗದಿಂದ ಪಾದಯಾತ್ರೆ ಗಳ ದಂಡು ಸುಕ್ಷೇತ್ರಕ್ಕೆ ಹರಿದು ಬಂದಿತು. ರೈತರು ಎತ್ತಿನ ಬಂಡಿ, ಟ್ರ್ಯಕ್ಟರ್, ಟಾಟಾ ಏಸ್, ವಾಹನದಲ್ಲಿ ಬಂದು ವಾಸ್ತವ್ಯ ಹೂಡಿದ್ದಾರೆ. ಸುಕ್ಷೇತ್ರದಲ್ಲಿ ಜಾತ್ರೆಯ ಸಂಭ್ರಮ ಕಳೆಕಟ್ಟಿದೆ.
ಇದೇ ವೇಳೆ ಎಸ್ಪಿ. ಎಸ್.ಜಾಹ್ನವಿ, ಉಪವಿಭಾಗಧಿಕಾರಿ ಸುರೇಶ ಕುಮಾರ, ಡಿವೈಎಸ್ ಪಿ ಸಂತೋಷ ಚವ್ಹಾಣ್, ತಹಶೀಲ್ದಾರ್ ಕೆ.ಎಂ.ಗುರುಬಸವರಾಜ, ತಾ.ಪಂ. ಇಒ ಜಿ.ಪರಮೇಶ್ವರ, , ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತೆ ಹೆಚ್.ಸವಿತಾ, ದೇಗುಲ ಇಒ ಮಲ್ಲಪ್ಪ ಇದ್ದರು