ಬಸವ ತತ್ವಗಳು ಇಡೀ ಜಗತ್ತಿಗೇ ದಾರಿದೀಪವಾಗಿವೆ.
ಮಹಾಲಿಂಗಪುರ 15: ಕಾಯಕ ಮತ್ತು ಸಮಾನತೆಯ ತತ್ವಗಳ ಮೂಲಕ ಹೊಸ ದಾರಿ ತೋರಿದ ಮಹಾನ್ ಚೇತನ ಜಗಜ್ಯೋತಿ ಬಸವೇಶ್ವರರು. ಅವರ ತತ್ವಗಳು ಇಡೀ ಜಗತ್ತಿಗೇ ದಾರಿದೀಪ ಎಂದು ಪುರಸಭಾ ಮಾಜಿ ಅಧ್ಯಕ್ಷ ಜಿ. ಎಸ್. ಗೊಂಬಿ ಹೇಳಿದರು.
ಬಸವನಗರ ಬಡಾವಣೆಯ ಶಾಲಾ ಮಕ್ಕಳೊಂದಿಗೆ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 12 ನೇ ಶತಮಾನದಲ್ಲಿ ಜನಸಾಮಾನ್ಯರ ಅದರಲ್ಲಿಯೂ ಶ್ರಮಿಕ ವರ್ಗದ ಕಲ್ಯಾಣಕ್ಕಾಗಿ ಹಾಗೂ ಅವರ ಮೌಢ್ಯತೆ ತೊಲಗಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಬಸವಣ್ಣನವರ ಜೀವನಾದರ್ಶ ಸೂರ್ಯ ಚಂದ್ರರಿರುವವರೆಗೂ ಜಗತ್ತು ಪಾಲಿಸಬಹುದಾದ ಸನ್ಮಾರ್ಗ ಎಂದರು.
ಭಾಗ್ಯಶ್ರೀ ಪತ್ತಾರ ಸ್ವಾಗತಿಸಿ, ಸುಕನ್ಯಾ ಗೊಂಬಿ ನಿರೂಪಿಸಿದರು. ಅರ್ಪಿತಾ ಮುದಕವಿ, ಸುಕನ್ಯಾ ಕಡ್ಲಿ, ವೈಷ್ಣವಿ ಪತ್ತಾರ, ವಂದನಾ ಭದ್ರನ್ನವರ, ಲಕ್ಷ್ಮಿ ಹಟ್ಟಿ, ನಿಶ್ಚಿತಾ ಮುದಕವಿ, ಅನ್ವಿತಾ ಮುದಕವಿ, ನಮಿತಾ ಮುದಕವಿ, ವೀರೇಶ ಪತ್ತಾರ, ಪ್ರತೀಕ್ಷಾ ಹಟ್ಟಿ ಇದ್ದರು.