ಬಸವಣ್ಯಪ್ಪ ಸಂಗಪ್ಪಗುರಣ್ಣನವರ್ ವಿಧಿವಶ
ಶಿಗ್ಗಾವಿ 24: ಸುಮಾರು 99 ವರ್ಷದ ಸೊರಬ ತಾಲ್ಲೂಕು ಆಲಹಳ್ಳಿ ಗ್ರಾಮದಲ್ಲಿ 1925 ರಲ್ಲಿ ಜನಿಸಿದ ಇವರು ಸ್ವಾತಂತ್ರ್ಯ ಪೂರ್ವದಲ್ಲಿಯೂ ಹಾಗೂ ಸ್ವಾತಂತ್ರ್ಯ ನಂತರವೂ ಇವರು ಅಪಾರ ದೇಶಾಭಿಮಾನಿಯಾಗಿದ್ದರು. ಅಲ್ಲದೇ ಗೋ ಪ್ರೇಮಿಯಾಗಿ ಮುಂಬೈಯಲ್ಲಿ ಗೋ ಸಮ್ಮೇಳನದಲ್ಲಿ ಲಕ್ಷಾಂತರ ಸಂಖ್ಯೆಯ ಜನರು ಗೋಹತ್ಯೆ ನಿಷೇಧ ಆಗುವವರೆಗೂ ಅಂಗಿಯನ್ನು ತೊಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಅದರಂತೆ ನಡೆದುಕೊಂಡವರು. ಮತ್ತು ತಾವೇ ಸ್ವದೇಶಿ ವಸ್ತ್ರಗಳನ್ನೇ ಬಳಸಬೇಕೆಂದು ಪ್ರಚಾರ ಮಾಡುತ್ತಾ ಖಾದಿ ಬಟ್ಟೆಗಳನ್ನು ಮಾರುತ್ತಾ ಅದರಲ್ಲಿ ಬಂದ ಹಣದಿಂದ ಖಾಸಯಿ ಖಾನೆಗೆ ಹೋಗುತ್ತಿದ್ದ ಹಸುಗಳ ರೈತರಿಗೆ ಹಣವನ್ನು ನೀಡಿ ಉಪಯೋಗ ಇರುವ ರೈತರಿಗೆ ಕೊಡಿಸುತ್ತಿದ್ದರಂತೆ. ಇಲ್ಲಿಯವರೆಗೂ ಯಾರೊಬ್ಬರ ಮೇಲೂ ಅವಲಂಬಿತರಾಗದೇ ತಮ್ಮ ಜೀವನವನ್ನು ಸ್ವವಲಂಬಿಯಾಗಿ ನಡೆಸಿಕೊಂಡು ಬಂದಿದ್ದ ಗೌರವನ್ವಿತರು ಈ ದಿನ ದೈವಾಧೀನರಾಗಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಸೊರಬ ತಾಲೂಕು ನಮೋ ವೇದಿಕೆಯು ಸಂತಾಪ ಸುಚಿಸುತ್ತದೆ.