ಗಣರಾಜ್ಯೋತ್ಸವದ ಧ್ವಜಾರೋಹಣ ನೇರೆವೆರಿಸಿದ ಬಸವಂತಪ್ಪ ತಳವಾರ
ರೋಣ 27: ಹುನಗುಂಡಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ನಾಯಕ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ 73ನೇ ಗಣರಾಜ್ಯೋತ್ಸವದ ದ್ವಜಾರೋಹಣ ನೇರೆವೆರಿಸಿ ಮಾತನಾಡಿದ ರೋಣ ತಾಲೂಕ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಬಸವಂತಪ್ಪ ಎಚ್ ತಳವಾರ 73ನೇಯ ಗಣರಾಜ್ಯೋತ್ಸವ ಧ್ವಜಾರೋಹಣವನ್ನು 1947 ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಈಡೀ ಭಾರತ ದೇಶ ಸಂತಸ ಸಂಭ್ರಮಿಸಿದ ದಿನ ಅದರಂತೆ 1950 ಜನೇವರಿ 26 ಡಾ.ಬಿ ಆರ್ ಅಂಬೇಡ್ಕರ ನೇತೃತ್ವದಲ್ಲಿ ಕರಡು ಸಮೀತಿ ರಚನೆಯಾಗಿ ಭಾರತದ ಸಂವಿಧಾನ ರಚನೆ ಕಾರ್ಯ ಆರಂಭವಾಗಿತ್ತು. 1949 ರಲ್ಲಿ ಅಂಗೀಕರಿಸಲ್ಪಟ್ಟ ಈ ಸಂವಿಧಾನ ತಿದ್ದುಪಡಿಯ ನಂತರ 1950ರ ಜನೇವರಿ 26 ರಂದು ಅಧೀಕೃತ ಸಂವಿಧಾನವಾಗಿ ಜಾರಿಗೆ ಬಂದಿತು.ಆ ದಿನವೇ ಗಣರಾಜ್ಯೋತ್ಸವ ಅಥವಾ ಗಣತಂತ್ರ ದಿನ ಎಂದು ಆಚರಿಸುತ್ತ ಬಂದಿದೆ.ಅದರಂತೆ ಈ ಭಾರಿ 73ನೇ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ.
ಭಾರತ ಜಗತ್ತಿನ ಅತೀ ದೊಡ್ಡ ಸಂವಿಧಾನವಾಗಿ ರಚನೆಯಾಯಿತು.ಇದನ್ನ ಡಾ.ಬಿ ಆರ್ ಅಂಬೇಡ್ಕರ ಅವರ ಮುಂದಾಳತ್ವದಲ್ಲಿ ಭಾರತಕ್ಕೆ ಪ್ರತ್ಯೇಕ ನಿಯಮಗಳು ಬೇಕೆಂದು ರಚಿಸಿದೆ ಸಂವಿಧಾನದ ರಚನೆಯಲ್ಲಿ ಹಲವಾರು ಮಹನೀಯರ ಪಾತ್ರವಿದೆ ಅವರಲ್ಲಿ ಮುಖ್ಯವಾಗಿ ಅಲ್ಲಾಡಿ ಕೃಷ್ಣಸ್ವಾಮಿ,ಐ ಆರ್ ಗೋಪಾಲಸ್ವಾಮಿ,ಐಯ್ಯಂಗಾರ ಟಿ ಟಿ ಕೃಷ್ಣಾಚಾರಿ,ಡಿ ಪಿ ಕೇತಾನ್,ಸರ್. ಬೆನಗಲ್ ಸೇರಿದಂತೆ ಮುಂತಾದವರು ಇದ್ದರು. ಗಣರಾಜ್ಯೋತ್ಸವದ ಮಹತ್ವ ಬ್ರಿಟಿಷರ ದಾಶ್ಯದಿಂದ ಮುಕ್ತಿಪಡೆದು ಸ್ವಾತಂತ್ರ್ಯವನ್ನು ಪಡೆದ ಬಳಿಕ 1950 ರಲ್ಲಿ ರಾಜ್ಯ ಪ್ರಭುತ್ವವನ್ನು ತ್ಯಜಿಸಿ ಪ್ರಜಾಪ್ರಭುತ್ವದ ಸ್ಥಾಪನೆಯಾಗಿತ್ತು.ಪ್ರಜೆಗಳ ಅಸ್ತಿತ್ವಕ್ಕೆ ನೀಡಿದ ಗೌರವದ ದಿನವಾಗಿತ್ತು.ಈ ಮೂಲಕ ಭಾರತದ ಸಂವಿಧಾನವು ಪ್ರಜೆಗಳಿಗೆ ತಮ್ಮದೆ ಆದ ಸರಕಾರವನ್ನು ಆಯ್ಕೆಮಾಡುವ ಮೂಲಕ ಅಧಿಕಾರವನ್ನು ನೀಡಿದೆ ಎಂದರು. ಗಣರಾಜ್ಯೋತ್ಸವವನ್ನು ಭಾರತದಾದ್ಯಂತ ಕರ್ನಾಟಕ ದಾದ್ಯಂತ ಬಹಳ ಸಡಗರದಿಂದ ಆಚರಿಸಲಾಗುತ್ತದೆ.ಸ್ವತಂತ್ರ ಭಾರತದ ಸಂವಿಧಾನವನ್ನು ಗೌರವಿಸುವ ದಿನ ಶಾಲಾ ಕಾಲೇಜುಗಳಲ್ಲಿ,ಸಂಘ ಸಂಸ್ಥೆಗಳಲ್ಲಿ ರಾಷ್ಟ್ರ ಧ್ವಜಾರೋಹಣ ನಡೆಯುತ್ತದೆ.ಭಾರತದ ಸ್ವಾತಂತ್ರ್ಯ ಹೋರಾಟವನ್ನು ಪ್ರತಿಪಾದಿಸುವ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ದೇಶಾದ್ಯಂತ ನಡೆಯುತ್ತದೆ ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ಬಿ ಎ ಮೋಕಾಶಿಮಠ, ದೈ.ಹಿ. ಶಿಕ್ಷಕರು,ಎಮ್ ಎಸ್ ಮಡಿವಾಳರ, ಸಹ ಶಿಕ್ಷಕರು ಎಲ್ ಎಸ್ ಪಾಟೀಲ್, ಸಹ ಶಿಕ್ಷಕಿ ಕವಿತಾ ಬ ತಳವಾರ,ಅಂಗನವಾಡಿ ಕಾರ್ಯಕರ್ತೆಯರಾದ ನಾಗಮ್ಮ ನವಚಿದ್ರ, ನಿರ್ಮಲಾ ಕೋಡತಗೇರಿ,ಆಶಾ ಕಾರ್ಯಕರ್ತೆ ಮಂಡಸೋಪ್ಪಿ,ಉಮೇಶ ತಳವಾರ, ಮಾರುತಿ ತಳವಾರ,ಮುತ್ತಪ್ಪ ಶಿಸನಳ್ಳಿ, ನಿಂಗಪ್ಪ ಬಾಗಲಿ,ಯಲ್ಲಪ್ಪ ಕುರಿ,ಕೆಂಚಪ್ಪ ತಳವಾರ ಸೇರಿದಂತೆ ಗ್ರಾಮದ ಇತರರು ಭಾಗಿಯಾಗಿದ್ದರು.