ಬಸವ ಶರಣ ಹೂಗಾರ ಮಾದಯ್ಯ ಜಯಂತಿ
ಮಹಾಲಿಂಗಪುರ: ಭಕ್ತಿ ಭಂಡಾರಿ ಬಸವಣ್ಣನವರ ಶ್ರೇಷ್ಠ ಶರಣರಾದ ಹೂಗಾರ ಮಾದಯ್ಯ ಜಯಂತಿಯನ್ನು ಪಟ್ಟಣದ ನಡುಚೌಕಿ ವೃತ್ತದಲ್ಲಿ ಸಮುದಾಯ ಹಾಗೂ ಊರಿನ ಪ್ರಮುಖರು ಶರಣರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಿದರು.
ಅಶೋಕ ಅಂಗಡಿ, ಮಹಾಲಿಂಗಪ್ಪ ಹೂಗಾರ, ರಾಜೇಶ್ವರಿ ಮ. ಹೂಗಾರ, ಮಹಾಲಿಂಗಪ್ಪ ಹಣ್ಮಂತ ಹೂಗಾರ, ಷಣ್ಮುಖಯ್ಯ ಸ್ವಾಮಿಜಿ, ವಿನಾಯಕ ಹೂಗಾರ, ಶಿಲ್ಪಾ ಹೂಗಾರ ಇನ್ನೂ ಮುಂತಾದವರಿದ್ದರು