ಕುಮಾರ ವಿರೂಪಾಕ್ಷ ಶ್ರೀಗಳಿಂದ 21 ದಿನಗಳ ಕಾಲ ಜರುಗಲಿರುವ ಬಸವ ಪುರಾಣ ಪ್ರವಚನ
ಬಸವ ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಬಸನಗೌಡ ತಾತರಡ್ಡಿ ಅವರು 25 ಸಾವಿರ ರೂಗಳ ನಗದು ಹಣ ದೇಣಿಗೆ
ಮುದ್ದೇಬಿಹಾಳ 08: ಇದೇ ದಿ, 10 ರಿಂದ 31ರವರಗೆ ಸಂಜೆ 6.30ರಿಂದ ಪಟ್ಟಣದ ವಿಬಿಸಿ ಹೈಸ್ಕೂಲ ಶ್ರೀ ಸಿದ್ದೇಶ್ವರ ವೇದಿಕೆಯಲ್ಲಿ ಧಾರವಾಡದ ಉಪ್ಪಿನ ಬೆಟಗೇರಿಯ ಶ್ರೀ ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳು ನಡೆಸಿಕೊಡಲಿರುವ 21 ದಿನಗಳ ಕಾಲ ಜರುಗಲಿರುವ ಬಸವ ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ತಾಲೂಕಿನ ಹಿರಿಯ ಮುಖಂಡ ಹಾಗೂ ಗಣ್ಯ ಉದ್ಯಮಿ ಮಹಾದಾನಿ ಮಲ್ಲಪ್ಪಗೌಡ ಬಸನಗೌಡ ತಾತರಡ್ಡಿ ಅವರು 25 ಸಾವಿರ ರೂಗಳ ನಗದು ಹಣವನ್ನು ದೇಣಿಗೆ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೊಗಿ ನಿಜವಾದ ನಮ್ಮ ದೇಶದ ಧರ್ಮ ಸಂಸ್ಕೃತಿ, ಆಚಾರ ವಿಚಾರಗಳ ಹಾಗೂ ಪರಂಪರೆಗಳನ್ನು ಮರೆಯುತ್ತಿದ್ದೇವೆ.
ಪುರಾಣ ಪ್ರವಚನ ಕೇಳುವ ಓದುವವರ ಸಂಖ್ಯೆಯೂ ದಿನದಿನಕ್ಕೆ ಕುಂಟಿತಗೊಳ್ಳುತ್ತಿದೆ. ಪುರಾಣ ಪ್ರವಚನ ಆಲಿಸುವುದರಿಂದ ಮನುಷ್ಯನ ವಿಕೃತ ಮನಸ್ಸು ಸ್ವಭಾವಗಳು ಬದಲಾವಣೆ ಹೊಂದಿ ಸನ್ಮಾರ್ಗದ ಜೀವನಕ್ಕೆ ದಾರಿ ಮಾಡಿಕೊಡಲಿವೆ.
ಇಂದಿನ ಯುಗದಲ್ಲಿ ಯುವಕರಿಗೆ ಗುಣಮಟ್ಟ ಶಿಕ್ಷಣ ನೀಡುವುದರ ಜೊತೆಗೆ ದಾನ, ಧರ್ಮದ, ಹಾಗೂ ಸಂಸ್ಕಾರ ಪರಂಪರೆಯ ಕುರಿತು ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ. ಸಧ್ಯ ಮುದ್ದೇಬಿಹಾಳ ಪಟ್ಟಣದ ಎಲ್ಲ ಹಿರಿಯರು ಬಸವ ಪುರಾಣ ಸಮೀತಿಯ ಮುಖ್ಯಸ್ಥರು ಸಮಾನತೆ ಸಂದೇಶ ಸಾರುವ ಮೂಲಕ ವಿಶ್ವಗುರುವಾಗಿ ಇಡೀ ವಿಶ್ವಕ್ಕೆ ಮಾದರಿಯಾದ ಬಸವಣ್ಣವರ ಕುರಿತು ಬಸವ ಪುರಾಣ ಪ್ರವಚನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಬಹಳ ಉಪಯುಕ್ತವಾಗಿದೆ ಈ ನಿಟ್ಟಿನಲ್ಲಿ ಪಟ್ಟಣ ಮಾತ್ರವಲ್ಲದೇ ಸುತ್ತಲಿನ ಗ್ರಾಮದ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸುವ ಮೂಲಕ ಯಶಶ್ವಿಗೊಳಿಸಬೇಕು ಎಂದರು.
ಈ ವೇಳೆ ಬಸವ ಪುರಾಣ ಪ್ರವಚನ ಸಮೀತಿ ಗೌರವಾಧ್ಯಕ್ಷ ಎಂ ಬಿ ನಾವದಗಿ, ಕಾರ್ಯಾಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಗಣ್ಯ ಉದ್ಯಮಿಗಳಾದ ಶರಣು ಸಜ್ಜನ, ಸುನೀಲ ಇಲ್ಲೂರ, ರಾಯನಗೌಡ ತಾತರಡ್ಡಿ, ತಾಲೂಕಾ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಗುರುಸ್ವಾಮಿ ಬೂದಿಹಾಳಮಠ, ರಾಜು ಕರಡ್ಡಿ, ಗೋಪಿ ಮಡಿವಾಳರ, ಮುತ್ತು ಕಡಿ, ಸೇರಿದಂತೆ ಹಲವರು ಇದ್ದರು.