ನೂತನ ತಾಲೂಕು ರಚನೆಗೆ ಬಾರುಕೋಲು ಚಳವಳಿ ಮತ್ತು ಎತ್ತಿನಗಾಡಿ ಮೆರವಣಿಗೆ
Barukolu movement and bullock cart procession for the formation of a new taluk
ಮಹಾಲಿಂಗಪುರ 13: ಮುಖಂಡರು ಮತ್ತು ಸಾರ್ವಜನಿಕರು ಮಹಾಲಿಂಗಪುರ ನೂತನ ತಾಲೂಕು ರಚನೆಗೆ ಆಗ್ರಹಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬುಧವಾರ ಯಶಸ್ವಿ ಬಾರುಕೋಲು ಚಳವಳಿ ಮತ್ತು ಎತ್ತಿನಗಾಡಿ ಮೆರವಣಿಗೆ ನಡೆಸಿದರು.
ಹೋರಾಟ ಸಮಿತಿ ನೂತನ ತಾಲೂಕಿಗೆ ಆಗ್ರಹಿಸಿ, ಜನತೆ ಇತ್ತಿಚೆಗೆ ಮಹಾಲಿಂಗಪುರ ಪಟ್ಟಣವನ್ನು ಸಂಪೂರ್ಣ ಬಂದ ಮಾಡಿ, ಉಸ್ತುವಾರಿ ಸಚಿವ ಆರ್. ಬಿ. ತಿಮ್ಮಾಪುರ ಸ್ಥಳಕ್ಕೆ ಆಗಮಿಸಿ ತಾಲೂಕು ಕುರಿತು ತಮ್ಮ ಸ್ಪಷ್ಟ ನಿಲುವು ಮತ್ತು ಸರ್ಕಾರದ ಮಟ್ಟದಲ್ಲಿ ಹೋರಾಟದ ಪರಿಣಾಮ ತಿಳಿಸಲು ಸಮಿತಿ ಕೋರಿತ್ತು.
ಕಾರಣಾಂತರಗಳಿಂದ ಸಚಿವರು ಆಗಮಿಸದೆ ಸ್ಥಳಿಯ ಮುಖಂಡರ ಮೂಲಕ ಸಿಎಂ ಸಿದ್ದರಾಮಯ್ಯರ ಭೇಟಿಗೆ ಎಂಟ್ಹತ್ತು ದಿನಗಳ ಕಾಲಾವಕಾಶ ಕೋರಿದ್ದರು. ಗಡುವು ಮುಗಿದ ಹಿನ್ನಲೆಯಲ್ಲಿ ತಾಲೂಕು ಹೋರಾಟ ಸಮಿತಿ ಮತ್ತೊಮ್ಮೆ ಸಭೆ ಸೇರಿ ಆಗಷ್ಟ 13 ರಂದು ಬುಧವಾರ ಎತ್ತಿನಗಾಡಿ ಮೆರವಣಿಗೆ ಮತ್ತು ಬಾರುಕೋಲು ಚಳವಳಿ ಹಮ್ಮಿಕೊಳ್ಳಲು ನಿರ್ಧರಿಸಿದರು, ಇದನ್ನು ನಾವಿಲ್ಲಿ ಸ್ಮರಿಸಬಹುದು.
ನೀ ಕೊಡೆ, ನಾ ಬಿಡೆ ಎಂಬ ನಿಲುವಿನಲ್ಲಿರುವ ತಾಲೂಕು ಹೋರಾಟ ಸಮಿತಿ ಪ್ರತಿಯೊಂದು ಹಳ್ಳಿ ಮತ್ತು ಪಟ್ಟಣದ ಸಂಘ ಸಂಸ್ಥೆಗಳು, ಎಲ್ಲ ಸಮುದಾಯಗಳ ಮುಖಂಡರು, ಸಾರ್ವಜನಿಕರನ್ನು ಭೇಟಿ ಮಾಡಿ ಚಳವಳಿಗೆ ಮನವಿ ಮಾಡಿದ್ದರು.
ಇದರ ಪರಿಣಾಮವಾಗಿ ರೈತರು ಸರ್ಕಾರದ ವಿರುದ್ಧ ಪ್ರತಿಭಟಿಸಲು ಮೆರವಣಿಗೆಯಲ್ಲಿ ಹಲವರು ಎತ್ತಿನಬಂಡಿಗಳಲ್ಲಿ ಬಂದರೆ ಸ್ಥಳೀಯ ಮತ್ತು ಸುತ್ತಮುತ್ತಲಿನ ಗ್ರಾಮಗಳ ನಾಗರಿಕರು ಬಾರುಕೋಲು ಝಳಪಿಸಿ, ಬೇಕೆ ಬೇಕು ತಾಲೂಕು ಬೇಕು ಘೋಷಣೆ ಕೂಗಿ, ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.ಎಪಿಎಂಸಿ ಗಣಪತಿ ಗುಡಿಯಿಂದ ಬಸವೇಶ್ವರ ವೃತ್ತ, ನಡುಚೌಕಿ, ಜವಳಿ ಬಾಜಾರ ಮತ್ತು ಗಾಂಧಿ ವೃತ್ತ ಮಾರ್ಗವಾಗಿ ಮೆರವಣಿಗೆ ಚೆನ್ನಮ್ಮ ವೃತ್ತಕ್ಕೆ ಆಗಮಿಸಿತು.
ಜಿಲ್ಲಾಧಿಕಾರಿ ಭೇಟಿ: ಈ ಸಂದರ್ಭದಲ್ಲಿ ಸ್ಥಳಕ್ಕೆ ಜಿಲ್ಲಾಧಿಕಾರಿ ಸಂಗಪ್ಪ ಭೇಟಿ ನೀಡಿ ಉಸ್ತುವಾರಿ ಸಚಿವರು ನೀಡಿರುವ ಮಹಾಲಿಂಗಪುರ ಪಟ್ಟಣ ನೂತನ ತಾಲೂಕಿಗೆ ಸೂಕ್ತವಾಗಿದೆ ಎಂಬ ಸಿಎಂ ಸಿದ್ದರಾಮಯ್ಯ ಮತ್ತು ಕಂದಾಯ ಇಲಾಖೆಗೆ ಬರೆದ ಪತ್ರದ ಸಾರಾಂಶವನ್ನು ತಿಳಿಸಿ, ನೂತನ ತಾಲೂಕಾಗಲು ಪಟ್ಟಣಕ್ಕಿರುವ ಮಾನದಂಡಗಳ ವರದಿ ನಮ್ಮ ಕಾರ್ಯಾಲಯದಿಂದ ಕಂದಾಯ ಇಲಾಖೆಗೆ ರವಾನಿಸಲಾಗಿದೆ. ಪ್ರತಿಭಟನೆ ಕೊನೆಗೊಳಿಸಿ ಮುಂದಿನ ಪೃಕ್ರಿಯೆಗೆ ಸಹಕರಿಸಬೇಕೆಂದು ಹೋರಾಟಗಾರರಲ್ಲಿ ಮನವಿ ಮಾಡಿದರು.
ಮತ್ತೊಮ್ಮೆ ಕಾಂಗ್ರೆಸ್ ಮುಖಂಡ ಯಲ್ಲನ್ನಗೌಡ ಪಾಟೀಲ್ ಮಧ್ಯೆ ಪ್ರವೇಶಿಸಿ ಮಳೆಗಾಲ ಅಧಿವೇಶನ ಅಂತ್ಯದೊಳಗೆ ಉಸ್ತುವಾರಿ ಸಚಿವರ ಮೂಲಕ, ಸಿಎಂ ಸಿದ್ದರಾಮಯ್ಯರ ಭೇಟಿ ಮತ್ತು ನೂತನ ತಾಲೂಕಿಗೆ ಒತ್ತಾಯಿಸಿ ತಮ್ಮ ಜೊತೆ ಕೈ ಜೋಡಿಸುತ್ತೇನೆ ಎಂದರು. ಬುಧವಾರದ ಪ್ರತಿಭಟನೆಯಿಂದ ಉಸ್ತುವಾರಿ ಸಚಿವರ ನಿಲುವು ಸ್ಪಷ್ಟಗೊಂಡು, ಮತ್ತೊಮ್ಮೆ ಸಿಎಂ ಭೇಟಿ ವಿಷಯಕ್ಕೂ ಹೆಚ್ಚಿನ ಮಹತ್ವ ಸಿಕ್ಕಂತಾಗಿದೆ.ಇದಕ್ಕೆ ಸಚಿವರು ಮತ್ತು ಮುಖಂಡರಿಗೆ ಹೋರಾಟಗಾರರು ಕೃತಜ್ಞತೆ ಸಲ್ಲಿಸಿದ್ದಾರೆ.
ಹೋರಾಟಗಾರರಾದ ಸಂಗಪ್ಪ ಹಲ್ಲಿ, ಧರೆಪ್ಪ ಸಾಂಗ್ಲಿಕರ, ಸಿದ್ದು ಕೊಣ್ಣೂರ, ಗಂಗಾಧರ ಮೇಟಿ, ರಂಗನ್ನಗೌಡ ಪಾಟೀಲ್, ಮಹಾಲಿಂಗಪ್ಪ ಸನದಿ, ನಿಂಗಪ್ಪ ಬಾಳಿಕಾಯಿ, ವಿರೇಶ ಆಸಂಗಿ, ಸಿದ್ದು ಶಿರೋಳ ಮತ್ತು ಮಹಾದೇವ ಮಾರಾಪೂರ ತಾಲೂಕು ರಚನೆ ಕುರಿತು ಮಾತನಾಡಿದರು.ಸ್ಥಳಕ್ಕೆ ಜಿಲ್ಲಾಧಿಕಾರಿ ಸಂಗಪ್ಪ, ಎಸ್.ಪಿ, ಸಿದ್ಧಾರ್ಥ ಗೋಯಲ್, ಎಸಿ ಶ್ವೇತಾ ಬೀಡಿಕರ, ತಹಶಿಲ್ದಾರ ಗಿರಿಶ ಸ್ವಾದಿ, ಡಿವಾಯ್. ಎಸ್. ಪಿ. ಜಮೀರ ರೋಷನ್, ಸಿಪಿಆಯ್ ಸಂಜೀವ ಬಳಿಗಾರ್ ಮತ್ತು ಸ್ಥಳೀಯ ಪಿಎ??? ಕಿರಣ ಸತ್ತಿಗೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 