ಮಹಲಿಂಗಪುರ

ಹ್ಯಾಕರ್ಸ ಕೈಚಳಕಕ್ಕೆ 13 ಲಕ್ಷ ರೂ ಕಳೆದುಕೊಂಡ ಬ್ಯಾಂಕ ಗ್ರಾಹಕ

ಹ್ಯಾಕರ್ಸ ಕೈಚಳಕಕ್ಕೆ 13 ಲಕ್ಷ ರೂ ಕಳೆದುಕೊಂಡ ಬ್ಯಾಂಕ ಗ್ರಾಹಕ

ಅಮಾಯಕರು ಕಳೆದುಕೊಂಡ ಹಣಕ್ಕೆ ಹೊಣೆಯಾರು ? ಕಡಿವಾಣ ಹಾಕುವವರಾ​‍್ಯರು: ಆತಂಕಗೊಂಡ ಗ್ರಾಹಕರ ಪ್ರಶ್ನೆ  

ವರದಿ :ಹನಮಂತ ನಾವಿ  

ಮಹಾಲಿಂಗಪುರ 14 : ಆಧುನಿಕ ಜಗತ್ತಿನಲ್ಲಿ ಎಲ್ಲವೂ ಸಾಧ್ಯವಾಗುತ್ತಿದೆ. ಹೊಸ ಹೊಸ ತಂತ್ರಜ್ಞಾನ ಬಳಕೆ ಒಂದು ಕಡೆಯಾದರೆ, ಇದನ್ನೇ ಬಂಡವಾಳ ಮಾಡಿಕೊಂಡು ಅನ್ಯ ಮಾರ್ಗದಲ್ಲಿ ಸಂಪಾದನೆ ಮಾಡುವ ಕೆಟ್ಟವರ್ಗದ ಜನ ಮತ್ತೊಂದು ಕಡೆ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಮಹಾಲಿಂಗಪುರದಲ್ಲಿ ಮೊಬೈಲ್ ಬ್ಯಾಂಕ್ ಖಾತೆ ಹ್ಯಾಕ ಮಾಡಿ ಹ್ಯಾಕರ್ಸ್‌ ಬರೋಬರಿ 13 ಲಕ್ಷ ರೂಪಾಯಿ ಎಗರಿಸಿದ ಘಟನೆ ಬೆಳಕಿಗೆ ಬಂದಿದೆ.  

ನಗರದ ಕರ್ನಾಟಕ ಬ್ಯಾಂಕಿನ ಗ್ರಾಹಕ ಮಹಾಲಿಂಗಪ್ಪ ನೆಸೂರ್ ಅವರ ಬ್ಯಾಂಕ ಖಾತೆಯಲ್ಲಿ ಬರೋಬ್ಬರಿ 13 ಲಕ್ಷ ರೂಗಳನ್ನು ಹ್ಯಾಕ ಮಾಡಿ ಇದರಲ್ಲಿ ಫೇಡರಲ್ ಬ್ಯಾಂಕ್ ಮುಂಬೈ 300000, ಇಂಡಸಿಂಡ್ ಬ್ಯಾಂಕಗೆ 400000, ಫೈನಾನ್ಸ್‌ ಗಳಿಗೆ ತಲಾ 300000 ಲಕ್ಷ ವರ್ಗಾವಣೆ ಮಾಡಿದ್ದು ಕಂಡು ಬಂದಿದೆ.  

ನಗರದ ಸ್ಟೇಟ್ ಬ್ಯಾಂಕ್ ಗ್ರಾಹಕರಾದ ರಾಯಪ್ಪ ಸೋಮಪ್ಪ ಹಿರೇವಳ್ಳಿ ಅವರು ಖಾತೆಯಿಂದ್ ಇದೇ ದಿನಾಂಕ 3 ರಂದು 90088 ರೂಪಾಯಿ ಕಳೆದುಕೊಂಡಿದ್ದಾರೆ. ಶೇಖಪ್ಪ ಪಮ್ಮಾರ ಖಾತೆಯಿಂದ್ ಇಪತ್ತು ಸಾವಿರ ರೂಪಾಯಿ, ಸಚಿನ್ ಮಾಳಿ ಖಾತೆಯಿಂದ್ ಐದು ಸಾವಿರ ರೂಪಾಯಿಗಳನ್ನು ಇಂಥದ್ದೆ ಹ್ಯಾಕರ್ಸಗಳು ತಮ್ಮ ಕೈಚಳಕ ತೋರಿಸಿ ಹಣ ಎಗರಿಸಿದ್ದಾರೆ. 

ಗ್ರಾಹಕರಲ್ಲಿ ಆತಂಕ : ನಗರದಲ್ಲಿ ಈ ಘಟನೆ ಬೆಚ್ಚಿ ಬೀಳಿಸಿದೆ. ಇದರಿಂದ ಗ್ರಾಹಕರು ಬ್ಯಾಂಕ್ ಸುರಕ್ಷತೆಯನ್ನು ಪ್ರಶ್ನೆ ಮಾಡುತ್ತಿದ್ದಾರೆ. ಭಯ ಭಿತರಾದ ಗ್ರಾಹಕರು ಹ್ಯಾಕಿಂಗಗೆ ಆಧಾರ ಸಂಖ್ಯೆ ಕಾರಣವಗಬಹುದೇ ? ಎಂಬ ಬಗೆಗಿನ ಆತಂಕ ಈಗ ಬಹುತೇಕ ಗ್ರಾಹಕರಲ್ಲಿ ಮನೆ ಮಾಡಿದೆ.ನಗರದಲ್ಲಿ ಭಯದ ವಾತಾವರಣ ಕಂಡು ಬಂದಿದೆ. 

ಸೈಬರ್ ಕ್ರೈಮ್ ಕೇಸು ದಾಖಲಿಸಿ ಎಂದು ಶಾಖೆಯ ಮ್ಯಾನೇಜರ್ ಹೇಳಿದ್ದು. ಅದರಂತೆ ಗ್ರಾಹಕರು ಸೈಬರ್ ಕ್ರೈಮ್ ಕೇಸು ದಾಖಳಿಸಿದ್ದು ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಈ ಕೇಸ್ ಪ್ರಧಾನ ಕಛೇರಿಗೆ ಮಾಹಿತಿ ಒದಗಿಸುತ್ತೇವೆ. ಮುಂದಿನ ಸುರಕ್ಷತಾ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು. 

ಕೋಟ್ :: ನನ್ನ ಖಾತೆಯಿಂದ ಹಣ ಹೋಗಿದ್ದು ಸ್ಟೇಟ್ಮೆಂಟ್ ತೆಗೆದು ನೋಡಿದಾಗಲೇ ಗೊತ್ತಾಗಿದ್ದು ನಾನು ಶಾಖಾ ವ್ಯವಸ್ಥಾಪಕರನ್ನು ಸಂಪರ್ಕಿಸಿದಾಗ ಅವರು ಈ ತರಹ ಘಟನೆ ನಮ್ಮ ಬ್ಯಾಂಕಿನಲ್ಲಿ ಮೊದಲ ಸಲ ಆಗಿದ್ದು ಇದನ್ನು ಪ್ರಧಾನ ಕಚೇರಿಗೆ ಮಾಹಿತಿ ಕೊಡುತ್ತೇವೆ. ಮೊಬೈಲ್ ಬ್ಯಾಂಕಿಗೆ ಹ್ಯಾಕ ಆದರೆ ಅದು ನಮ್ಮ ಗಮನಕ್ಕೆ ಬರುವುದಿಲ್ಲ. ತಾವೇ ಎಚ್ಚರಿಕೆಯಿಂದ ವ್ಯವಹರಿಸಿ, ನಾವು ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು. 

ಮಹಾಲಿಂಗ ನೆಸೂರ್, ಕರ್ನಾಟಕ ಬ್ಯಾಂಕ ಗ್ರಾಹಕ  

ವಿವಿಧ ಹಣಕಾಸು ಚಟುವಟಿಕೆಗಳಲ್ಲಿ ಆಧಾರ ಕಾರ್ಡ್‌ ನಿರ್ಣಾಯಕ ಪಾತ್ರ ವಹಿಸುತ್ತದೆ. ಬ್ಯಾಂಕ್ ಖಾತೆಯನ್ನು ಆಧಾರಗೆ ಲಿಂಕ್ ಮಾಡುವುದು ಸೇರಿದಂತೆ ಸರ್ಕಾರಿ ಮತ್ತು ಖಾಸಗಿ ಸಂಸ್ಥೆ ಸಂಭಂದಿತ ಕಾರ್ಯಗಳಿಗೆ ಇದು ತುಂಬಾನೇ ಅತ್ಯಗತ್ಯ ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಆಧಾರ ಅನ್ನು ಲಿಂಕ್ ಮಾಡಲು ವಿಫಲವಾದರೆ ಬ್ಯಾಂಕಿಂಗ್ ವ್ಯವಹಾರ ಕಠಿಣವಾಗಲಿದೆ. ಎಲ್ಲಾ ಬೆಳವಣಿಗೆ ನಡುವೆ ಆಧಾರ ಸಂಬಂಧ ಭದ್ರತಾ ಕಾಳಜಿಗಳು ಸಹ ಸಾರ್ವಜನಿಕರಿಗೆ ಗೊತ್ತಿರಬೇಕು. 

ಆಧಾರ್ ಭದ್ರತಾ ಕಾಳಜಿಗಳು : ಆಧಾರ ಮತ್ತು ಹಣಕಾಸು ಕಾರ್ಯಗಳ ನಡುವಿನ ಸಂಪರ್ಕವು ಸಂಭಾವ್ಯ ಭದ್ರತಾ ಅಪಾಯಗಳ ಬಗ್ಗೆ ಕಳವಳವನ್ನು ಉಂಟುಮಾಡಬಹುದು ಎನ್ನಲಾಗಿದೆ. ಅಂದರೆ ಯಾರಾದರೂ ಸಹ ನಿಮ್ಮ ಆಧಾರ ಸಂಖ್ಯೆಯನ್ನು ತಿಳಿದಿದ್ದರೆ ಅವರು ಲಿಂಕ್ ಮಾಡಲಾದ ಆಪ್ ಗಳು ಮತ್ತು ಸೇವೆಗಳಿಗೆ ಎಂಟ್ರಿ ನೀಡಬಹುದು ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ. 

ತಜ್ಞರು ಹೇಳುವುದು : ಈ ಬಗ್ಗೆ ತಜ್ಞರೊಬ್ಬರು ಮಾಹಿತಿ ನೀಡಿದ್ದು, ಯಾರೊಬ್ಬರ ಆಧಾರ ಸಂಖ್ಯೆಯನ್ನು ಹೊಂದಿರುವುದು ಆವರ ಬ್ಯಾಂಕ್ ಖಾತೆಗೆ ನೇರ ಪ್ರವೇಶಕ್ಕೆ ಅವಕಾಶ ಇಲ್ಲ. ಓಟಿಪಿ ದೃಢಿಕರಣ, ಫೇಸ್ ಐಡಿ ಅಥವಾ ಐರಿಸ್ ಸ್ಕ್ಯಾನನಂತಹ ಭದ್ರತಾ ಕಾರ್ಯವಿಧಾನಗಳು ನಿರ್ನಾಯಕ ರಕ್ಷಣಾತ್ಮಕ ವ್ಯವಸ್ಥೆಯಾಗಿದೆ. ಈ ಹೆಚ್ಚುವರಿ ಭದ್ರತಾ ಲೆಯರಗಳಿರುವುದರಿಂದ ಬ್ಯಾಂಕ್ ಖಾತೆಗಳಿಗೆ ಸುರಕ್ಷಿತವಾಗಿ ಇರಲಿವೆ ಎನ್ನುತ್ತಾರೆ. 

ನಮ್ಮ ದೇಶದಲ್ಲಿ ವಿದ್ಯಾವಂತರಷ್ಟೆ ಅವಿದ್ಯಾವಂತರು ಕೂಡಾ ಹೆಚ್ಚಾಗಿದ್ದಾರೆ ಕಾರಣ ಪ್ರಧಾನಿ ಮೋದಿಯವರು ಎಲ್ಲವೂ ನೈಜವಾಗಿರಲಿ ಎನ್ನುವ ಉದ್ದೇಶದಿಂದ ಹಣ ಚಲಾವಣೆಗಳ ಕಡಿಮೆ ಮಾಡಿ ಬ್ಯಾಂಕಿನಲ್ಲಿ ಆನ್ ಲೈನ ಮೂಲಕ ವ್ಯೆವಹರಿಸಬೇಕು ಎಂದು ಹೇಳುತ್ತಾರೆ. ಆದರೆ ಇಂಥ ಅವಿದ್ಯಾವಂತರಿಂದ ಮೋಸ ಹೋಗುವ ಜನರಿಗೆ ಮತ್ತು ಅವರು ಕಳೆದುಕೊಳ್ಳುವ ಹಣಕ್ಕೆ ಜವಾಬ್ದಾರಿಯಾರು. ಕಾರಣ ಸರ್ಕಾರ ಈ ಎಲ್ಲ ಮೋಸದ ದಂದೆಗಳಿಗೆ ಕಡಿವಾಣ ಹಾಕಲು ಏನಾದರೂ ಹೊಸ ತಂತ್ರಜ್ಞಾನ ಬಳಸಿ ಬಡವರು ಕಷ್ಟ ಪಟ್ಟು ದುಡಿದ ಹಣ ವ್ಯೆಯವಾಗದ ರೀತಿಯಲ್ಲಿ ನೋಡಿಕೊಳ್ಳಬೇಕು ಎನ್ನುತ್ತಾರೆ ಪ್ರಜ್ಞಾವಂತರು. 


ಸುದ್ದಿ ಓದಿ