ಬಂಜಾರ ಕುರಿತು ಭಾಷಿಕ ನೆಲೆಯಲ್ಲಿ ಅಧ್ಯಯನ ಅಗತ್ಯ: ಪ್ರೊ.ಭಾಸ್ಕರ್
ಲೋಕದರ್ಶನ ವರದಿ
ಶಿಗ್ಗಾವಿ 16: ಬಂಜಾರ ಸಮುದಾಯದ ಕಲೆ, ಸಾಹಿತ್ಯ, ಉಡುಗೆ-ತೊಡಿಗೆ, ಆಚರಣೆ ಮತ್ತು ಸಂಸ್ಕೃತಿಅತ್ಯಂತ ಶ್ರೀಮಂತವಾಗಿದೆ.ಬಂಜಾರಕುರಿತ ಭಾಷಿಕ ನೆಲೆಯ ವೈಜ್ಞಾನಿಕ ಅಧ್ಯಯನಅಗತ್ಯವಾಗಿ ನಡೆಯಬೇಕಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಎಂ.ಭಾಸ್ಕರ್ ಅವರು ಸಂಶೋಧಕರಿಗೆ ಮತ್ತು ಅಧ್ಯಯನಕಾರಿಗೆ ಕಿವಿಮಾತುಹೇಳಿದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಬಂಜಾರ ಜನಪದ ಸಾಹಿತ್ಯವನ್ನು ಡಿಪ್ಲೋಮಾ ಮತ್ತು ಸರ್ಟಿಫಿಕೇಟ್ ಕೋರ್ಸ್ ಅನ್ನಾಗಿ ಶೈಕ್ಷಣಿಕ ಶಿಸ್ತಿಗೆ ಅಳವಡಿಕೆ ಮಾಡುತ್ತಿದೆ.ಈ ಹಿನ್ನೆಲೆಯಲ್ಲಿ ರಾಷ್ಟ್ರೀಯಗೋರ್ ಸಿಕ್ವಾಡಿ ಮತ್ತು ಬಾಲ-ಬಚ್ಚಾ ಸಂಸ್ಕಾರ ಸಂಸ್ಥೆಗಳವತಿಯಿಂದ ಮಾನ್ಯ ಕುಲಪತಿಗಳಿಗೆ ಮತ್ತು ಕುಲಸಚಿವರಿಗೆ ಅಭಿನಂದನೆ ಸಲ್ಲಿಸಲಾಯಿತು. ಸನ್ಮಾನ ಸ್ವೀಕರಿಸಿ ಪ್ರೊ.ಟಿ.ಎಂ.ಭಾಸ್ಕರ್ ಅವರು ಮಾತನಾಡಿ, ಪ್ರಸ್ತುತ ಸಂದರ್ಭದಲ್ಲೂಯಾವುದೇ ಸಮುದಾಯದ ಅಧ್ಯಯನಗಳು ನಡೆಯಲಿ ವೈಜ್ಞಾನಿಕ ನೆಲೆಯ ಚಿಂತನೆಗಳು ಅವಶ್ಯಕವಾಗಿ ಆಗ ಬೇಕಾಗಿದೆಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ವಿವಿಯ ಕುಲಸಚಿವ ಪ್ರೊ.ಸಿ.ಟಿ.ಗುರುಪ್ರಸಾದ್ ಅವರು ಮಾತನಾಡಿ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಶೈಕ್ಷಣಿಕ ಕಾರ್ಯಚಟುವಟಿಕೆಗಳೊಂದಿಗೆ ಸಾಕಷ್ಟು ಸಂಶೋಧನಾತ್ಮಕ ಕಾರ್ಯವನ್ನು ಆರಂಭದಿಂದಲ್ಲೂ ಮಾಡುತ್ತಾ ಸಾಗಿದೆ. ವಿವಿಯದ ಶಮಾನೋತ್ಸವದ ಸಮಯದಲ್ಲಿ ಇನ್ನು ರಚನಾತ್ಮಕ ಚಟುವಟಿಕೆಗಳು ಸಾಂಪ್ರದಾಯಿ ವಿವಿಗಳಿಗಿಂತಲೂ ಬಿನ್ನವಾಗಿ ಮಾಡುಲು ಉತ್ಸುಕರಾಗಿದ್ದೇವೆ ಎಂದು ಹೇಳಿದರು.
ಗೋರ್ ಸಿಕ್ವಾಡಿ ರಾಷ್ಟ್ರೀಯ ಅಧ್ಯಕ್ಷ ಅರುಣ್ ದಿಗಂಬರ್ ಚವ್ಹಾಣ್ ಅವರು ಮಾತನಾಡಿ, ಬಂಜಾರ ಸಮುದಾಯ ಭಾರತದಾದ್ಯಂತ ಹರಡಿದ್ದು, ಬೇರೆ ಬೇರೆ ರಾಜ್ಯಗಳಲ್ಲಿ ವಿಭಿನ್ನ ಹೆಸರುಗಳಿಂದ ಕರೆಸಿಕೊಳ್ಳುತ್ತಾರೆ. ಆದರೂ ಭಾಷೆ ಮತ್ತು ಆಹಾರಕ್ರಮ ಮಾತ್ರ ಒಂದೇ ಆಗಿದೆ. ಭಾಷೆ ನಾಶ ಮಾಡಿದರೆ ಸಮುದಾಯದ ಸಂಸ್ಕೃತಿಯನ್ನು ಸುಲಭವಾಗಿ ನಾಶ ಮಾಡಬಹುದು. ಬಂಜಾರ ಸಮುದಾಯದ ಜನಪದ ಸಾಹಿತ್ಯವನ್ನು ಶೈಕ್ಷಣಿಕ ಶಿಸ್ತಿಗೆ ಅಳವಡಿಕೆ ಮಾಡುವ ಮೂಲಕ ಬಂಜಾರ ಭಾಷೆಯ ಉಳಿವಿಗೆ ಬಹು ದೊಡ್ಡಯೋಗದಾನ ಮಾಡಿದೆಎಂದು ವಿವಿಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಕರ್ನಾಟಕ ಬಂಜಾರ ಸಾಹಿತ್ಯಅಕಾಡೆಮಿ ಸದಸ್ಯ ಹಾಗೂ ಜನಪದ ಕಲೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಎಸ್.ಜಿ.ಬಸವರಾಜ್ ನಾಯ್ಕ ಅವರು, ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ.ಉತ್ತಮ ಅವರು, ಎಂಬಿಎ ಸಹಾಯಕ ಪ್ರಾಧ್ಯಾಪಕ ಡಾ.ಅರುಣ್ ಕುಮಾರ್ ಅಂಗಡಿ ಅವರು ಎಂಎಸ್ಡಬ್ಯೂ ಸಹಾಯಕ ಪ್ರಾಧ್ಯಾಪಕ, ಪ್ರೀತಂ ಬಾಯರ್ಅವರು ಹಾಗೂ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಜನಪದ ಕಲೆ ವಿಭಾಗದ ವಿದ್ಯಾರ್ಥಿ ಸಿ.ಮಂಜುನಾಥ ನಾಯ ್ಕಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಹೂವಿನ ಹಡಗಲಿಯ ಬಾಲ-ಬಚ್ಚಾ ಸಂಸ್ಕಾರ ಸಂಸ್ಥೆಯ ರೂವಾರಿಗಳು ವೈದ್ಯರಾದ ಡಾ. ಎಲ್.ಪಿ.ಕಠಾರಿನಾಯ್ಕ ಅವರು ಪ್ರಾರ್ಥಿಸಿದರು, ಜನಪದ ಸಾಹಿತ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಚಂದ್ರ್ಪ ಸೊಬಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಯತೀಶ್ ಎಲ್. ಕೋಡಾವತ್ ಅವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.