ಬಳ್ಳಾರಿ

ಬಂಧ ವಿಮೋಚಕ ಬಸವಣ್ಣ: ಶಿಕ್ಷಕಿ ಈರಮ್ಮ

ಬಂಧ ವಿಮೋಚಕ ಬಸವಣ್ಣ: ಶಿಕ್ಷಕಿ ಈರಮ್ಮ

ಬಳ್ಳಾರಿ, ಅ.30: ಚಾತುರ್ ವರ್ಣ ವ್ಯವಸ್ಥೆಯ ಅಂದಿನ ಭಾರತೀಯ ಸಮಾಜದಲ್ಲಿ ಬದುಕು ಬಹುಮುಖ ಬಂಧನಗಳಿಂದ ಕೂಡಿದ್ದಿತು. ಮಾನವ ಪಶು, ಪಕ್ಷಿ, ಪ್ರಾಣಿಗಳಿಗಿಂತ ಕೀಳಾಗಿ ಜೀವನ ಸಾಗಿಸುವ ಸಂದರ್ಭದಲ್ಲಿ ಮಹಾತ್ಮರ ಮಾರ್ಗದರ್ಶನ ದಾರೀದೀಪವಾಯಿತು. ಇಂತಹ ಮಹಾತ್ಮರಲ್ಲಿ ಬಸವಣ್ಣನವರು ಒಬ್ಬರೆಂದು ನಗರದ ರೇಡಿಯೋಪಾರ್ಕಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಈರಮ್ಮ ನುಡಿದರು. 

ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವೈ. ನಾಗೇಶ ಶಾಸ್ತ್ರಿ ನಗರದ ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ 294ನೇ ಮಹಾಮನೆ ಲಿಂ.ಫಕೀರ​‍್ಪ ತೋಟಪ್ಪ ಗಡ್ಡಿ ದತ್ತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಬಸವಣ್ಣನವರು ಬದುಕಿನ ಸರ್ವತೋಮುಖವಾಗಿ ಬಂಧಿಸಿದ್ದ ಎಲ್ಲಾ ಬಂಧನಗಳನ್ನು ಏಕಕಾಲಕ್ಕೆ ಕಳಚಿದ ಕ್ರಾಂತಿ ಪುರುಷ, ಬಂಧ ವಿಮೋಚಕನೆಂದು ಬಣ್ಣಿಸಿದರು. 

ದತ್ತಿ ದಾಸೋಹಿಗಳಾದ ಖ್ಯಾತ ನರರೋಗ ತಜ್ಞ ಡಾಟಟಸೋಮೇಶ್ವರ ಎಫ್‌.ಗಡ್ಡಿಯವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ಸದಾ ಕ್ರಿಯಾಶೀಲರಾಗಿರಬೇಕು. ಇದರಿಂದ ಪ್ರಗತಿ ಸಾಧ್ಯವೆಂದರು. ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಸಿದ್ಧರಾಮಯ್ಯ ಕಲ್ಮಠ  ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಬಸವಣ್ಣ, ಸೀಮಿತ ಅವಧಿಯಲ್ಲಿ ಅಸೀಮ ಸಾಧನೆಯನ್ನು ಮಾಡಿದ ಒಬ್ಬ ಯುಗ ಪುರುಷನೆಂದು ಕೊಂಡಾಡಿದರು. ಮುಖ್ಯೋಪಾಧ್ಯಾಯಿನಿ ಎಂ.ಗಿರಿಜಾ ಮತ್ತು ಪಿ.ಕಟ್ಟೆಮ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ವಿದ್ಯಾರ್ಥಿನಿಯರಾದ ಪ್ರಿಯಾಂಕಾ ಹಾಗೂ ಸಂಗಡಿಗರು ಪ್ರಾರ್ಥನೆ ಸಲ್ಲಿಸಿದರು. ಫರೀದಾ ಬೇಗಂ ಸ್ವಾಗತ ಕೋರಿದರು. ಪರಿಷತ್ತಿನ ಅಧ್ಯಕ್ಷರಾದ ಕೆ.ಬಿ.ಸಿದ್ಧಲಿಂಗಪ್ಪ, ದತ್ತಿ ಧಾತೃ, ದಾಸೋಹಿಗಳನ್ನು ಪರಿಚಯಿಸಿ, ಶರಣು ಸಮರೆ​‍್ಣ ಮಾಡಿದರು. ನಂದಿನಿ ಕಾರ್ಯಕ್ರಮ ನಿರ್ವಹಣೆ ಮಾಡಿದರು.ಸಭೆಯಲ್ಲಿ ಕ್ರೀಡಾ ತರಬೇತಿದಾರ ಶಿವಾನಂದ ಕತಕನಹಳ್ಳಿ, ಚಾಂದ್ ಪಾಷಾ, ಸಿ,ಕೊಟ್ರ​‍್ಪ, ಶಾಲಾ ಶಿಕ್ಷಕಿಯರು ಉಪಸ್ಥಿತರಿದ್ದರು. ವೇದಿಕೆಯ ಗಣ್ಯರನ್ನು ಸನ್ಮಾನಿಸಲಾಯಿತು. 


ಸುದ್ದಿ ಓದಿ