ಬಣಜಿಗ ಸಮಾಜ: ನೂತನ ಪದಾಧಿಕಾರಿಗಳ ಆಯ್ಕೆ
Banajiga Samaj: Election of new office bearers
ಮುದ್ದೇಬಿಹಾಳ, 17 : ತಾಲ್ಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಮೂರು ವರ್ಷದ ಅವಧಿಗೆ 2025-28 ಅಶೋಕ ಚಟ್ಟೇರ ಅವಿರೋಧವಾಗಿ ಆಯ್ಕೆಯಾದರು. ಪಟ್ಟಣದ ಕಿಲ್ಲಾದಲ್ಲಿರುವ ಹೊಸಮಠದಲ್ಲಿ ಭಾನುವಾರ ಸಂಜೆ ನಡೆದ ಬಣಜಿಗ ಸಮಾಜದ ಸರ್ವ ಸದಸ್ಯರ ಸಭೆಯಲ್ಲಿ ಯುವ ಘಟಕ ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳ ಆಯ್ಕೆ ಸಹ ನಡೆಯಿತು.
ಈವರೆಗೆ ಅಧ್ಯಕ್ಷರಾಗಿದ್ದ ಪ್ರಭುರಾಜ ಕಲಬುರ್ಗಿ ಮಾತನಾಡುತ್ತಾ, ಈಗ್ಗೆ ಎರಡು ವರ್ಷಗಳ ಹಿಂದೆಯೇ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಬೇಕಿತ್ತು. ರಾಜ್ಯ ಘಟಕದ ಪದಾಧಿಕಾರಿಗಳ ಆಯ್ಕೆ ಸಹ ವಿಳಂಬವಾಗಿದ್ದರಿಂದ ನಮ್ಮಲ್ಲಿ ಸಹ ಆಯ್ಕೆ ಪ್ರಕ್ರಿಯೆ ತಡವಾಗಿ ನಡೆಯಿತು ಎಂದರು. ಸಭೆಯಲ್ಲಿ ಉಪಸ್ಥಿತರಿದ್ದ ಬಣಜಿಗ ಸಮಾಜದ ಹಿರಿಯರಾದ ಬಸವರಾಜ ನಾವದಗಿ, ಬಸವರಾಜ ನಾಲತವಾಡ, ದಾನಪ್ಪ ನಾಗಠಾಣ, ಸಂಗಣ್ಣ ಕಂಚ್ಯಾಣಿ, ಎಂ.ವಿ.ಮಾಟಲದಿನ್ನಿ, ವಿಶ್ವನಾಥ್ ಕಿಣಗಿ, ಮುರಿಗೆಪ್ಪ ಮೋಟಗಿ, ಮುತ್ತು ಕಡಿ, ನಿಂಗಣ್ಣ ಚಟ್ಟೇರ, ರಾಜು ಜೋಳದ, ಮಹಾಬಲೇಶ್ವರ ಗಡೇದ, ಲೋಹಿತ ನಾಲತವಾಡ, ಸಂಗಮೇಶ ನಾವದಗಿ, ಸೋಮಶೇಖರ ಅಣೆಪ್ಪನವರ, ಪ್ರವೀಣ ನಾಗಠಾಣ, ಡಿ.ಎಸ್.ಚಳಗೇರಿ, ಚಂದ್ರಶೇಖರ ಕಡಿ, ರಾಜು ದಡ್ಡಿ, ಶಿವಾನಂದ ಚಿಲ್ಲಾಳಶೆಟ್ಟಿ, ಉಮೇಶ ತಾರನಾಳ, ಮಹಾಂತೇಶ ಮೋಟಗಿ, ಮತ್ತಿತರರು ಸೇರಿದ್ದರು. ಆನಂದ ಕಂಠಿ ಪ್ರಾಸ್ತಾವಿಕ ಮಾತನಾಡಿದರು. ರುದ್ರೇಶ ಕಿತ್ತೂರು ನಿರೂಪಿಸಿದರು.
ನೂತನ ಪದಾಧಿಕಾರಿಗಳು: ಎಂ.ಎಸ್.ನಾವದಗಿ ವಕೀಲರು ಗೌರವಾಧ್ಯಕ್ಷರು. ಅಧ್ಯಕ್ಷರಾಗಿ ಅಶೋಕ ಚಟ್ಟೇರ, ಉಪಾಧ್ಯಕ್ಷರಾಗಿ ಬಿ.ಎಸ್.ಚಿನಿವಾರ ನಾಲತವಾಡ, ಪ್ರಧಾನ ಕಾರ್ಯದರ್ಶಿಯಾಗಿ ರಾಜು ಬಳ್ಳೊಳ್ಳಿ,ಖಜಾಂಚಿಯಾಗಿ ಸಂತೋಷ ನಾಯನೇಗಲಿ,ಯುವ ಘಟಕದ ಅಧ್ಯಕ್ಷರಾಗಿ ಶಂಕರ ಕಡಿ, ಉಪಾಧ್ಯಕ್ಷರಾಗಿ ಬಸವರಾಜ ದಡ್ಡಿ ವಕೀಲರು,ಸುಚೀತ ಚಳಗೇರಿ ಪ್ರಧಾನ ಕಾರ್ಯದರ್ಶಿ,ಮಹಿಳಾ ಘಟಕದ ಅಧ್ಯಕ್ಷರಾಗಿ ಶೋಭಾ ಉಮೇಶ ನಾಗಠಾಣ, ಉಪಾಧ್ಯಕ್ಷರಾಗಿ ಕವಿತಾ ದಡ್ಡಿ, ಕಾರ್ಯದರ್ಶಿಯಾಗಿ ರೇಖಾ ಗಡೇದ ಆಯ್ಕೆಯಾದರು.
ಬಣಜಿಗ ಸಮಾಜದ ಹಿರಿಯರು ಸೇರಿದಂತೆ ಸರ್ವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ. ನನ್ನನ್ನು ಆಯ್ಕೆ ಮಾಡಿದ ಎಲ್ಲ ಹಿರಿಯರಿಗೆ ಧನ್ಯವಾದಗಳು.
ಅಶೋಕ ಚಟ್ಟೇರ ನೂತನ ಅಧ್ಯಕ್ಷರು
ಬಣಜಿಗ ಸಮಾಜ ಮುದ್ದೇಬಿಹಾಳ.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 