ರಾಜ್ಯದಲ್ಲಿ ಎಂಇಎಸ್ ನಿಷೇಧಿಸಿ: ಭಜಂತ್ರಿ
ಮಹಾಲಿಂಗಪುರ 23: ಬೆಂಗಳೂರಿನ ಸದಾಶಿವನಗರದ ಸ್ಯಾಂಕಿ ಟ್ಯಾಂಕ್ ರಸ್ತೆಯ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗೆ ಮಸಿ ಬಳಿದು, ಬೆಳಗಾವಿಯ ಅನಗೋಳದ ಸಂಗೊಳ್ಳಿ ರಾಯಣ್ಣ ಹಾಗೂ ಖಾನಾಪುರದ ಬಸವೇಶ್ವರ ಮೂರ್ತಿಯನ್ನು ಭಗ್ನಗೊಳಿಸಿ ಎಂಇಎಸ್ ನಾಡದ್ರೋಹ ಎಸಗಿದೆ. ಕೂಡಲೇ ಈ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕೆಂದು ಶ್ರೀರಾಮಸೇನಾ ಹಿಂದುಸ್ತಾನ ಬಾಗಲಕೋಟ ಜಿಲ್ಲಾಧ್ಯಕ್ಷ ನಾಗರಾಜ ಭಜಂತ್ರಿ ಸರ್ಕಾರವನ್ನು ಒತ್ತಾಯಿಸಿದರು.
ಬುಧವಾರ ಬೆಳಿಗ್ಗೆ ಸ್ಥಳೀಯ ಪುರಸಭೆಯ ಮುಖ್ಯಾಧಿಕಾರಿಗಳು ಮುಖಾಂತರ ಗೃಹ ಸಚಿವರಿಗೆ ಮನವಿ ಸಲ್ಲಿಸಿ ಮಾತನಾಡಿದರು. ಎಂಇಎಸ್ ಪುಂಡರು ಭಾರತ ದೇಶದ ಸಂಸ್ಕೃತಿಗೆ ಅವಮಾನ ಮಾಡಿ, ರಾಜ್ಯದ ಶಾಂತಿ ಕದಡಿದ್ದಾರೆ ಇದಕ್ಕೆ ತಕ್ಕ ಶಿಕ್ಷೆ ಆಗಲೇಬೇಕು ಹಾಗೂ ಎ???ಎಸ್ ನ ಪುಂಡತನವನ್ನು ವಿರೋಧಿಸಿದ ಶ್ರೀರಾಮ ಸೇನಾ ಹಿಂದುಸ್ತಾನ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ರಮಾಕಾಂತ್ ಕೊಂಡುಸ್ಕರ್ ಅವರನ್ನು ಪೊಲೀಸರು ಬಂಧಿಸಿರುವುದು ನ್ಯಾಯಸಮ್ಮತವಲ್ಲ, ಕೂಡಲೇ ಅವರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಪುರಸಭಾ ಮುಖ್ಯಾಧಿಕಾರಿಗಳ ಪರವಾಗಿ ಕಂದಾಯ ಅಧಿಕಾರಿ ನಾಮದೇವ ಲಮಾಣಿ ಮನವಿ ಸ್ವೀಕರಿಸಿದರು. ಶ್ರೀರಾಮ ಸೇನಾ ಹಿಂದೂಸ್ತಾನ ಜಿಲ್ಲಾಧ್ಯಕ್ಷ ನಾಗರಾಜ ಭಜಂತ್ರಿ ಅವರ ನೇತತ್ವದಲ್ಲಿ ಜೆಡಿಎಸ್ ತಾಲೂಕಾ ಅಧ್ಯಕ್ಷ ಸುರೇಶ ಮಡಿವಾಳ, ಪುರಸಭೆ ಸದಸ್ಯರ ರವಿ ಜವಳಗಿ, ವೀರೇಶ ನ್ಯಾಮಗೊಡ, ನಂದೇಶ ಲಾತೂರ,ಬಸು ಮಡಿವಾಳ, ಶ್ರೀನಿಧಿ ಕುಲಕರ್ಣಿ,ಆನಂದ ಉತ್ತೂರ, , ರಾಘು ಮಾಳಗಿ, ಧರ್ಮರಾಜ, ಶ್ರೀನಿವಾಸ, ವಿನಾಯಕ, ಬಸವರಾಜ, ಅಭಿಷೇಕ ಸೊನ್ನದ,ಪರಶುರಾಮ,ಮಂಜು, ಅಕ್ಷಯ, ದಾನೇಶ, ದರ್ಶನ, ಮುತ್ತು, ಪರಮಾನಂದ, ಕಕ್ಕಯ್ಯ, ಮೋಹನ, ರಾಮು, ಸುನೀಲ, ರಮೇಶ, ಪ್ರಯನ, ವಿನೋದ ಇತರರು ಇದ್ದರು.